ನವದೆಹಲಿ: ನೋಯ್ಡಾ ಸೆಕ್ಟರ್ 75ರ ಹಲವೆಡೆ ಕಂಪಿಸಿದ ದೃಶ್ಯಗಳು ದಾಖಲಾಗಿವೆ. ನೇಪಾಳದಲ್ಲಿ 5 ಕಿ.ಮೀ ಆಳದಲ್ಲಿ ಪ್ರಬಲ 6.2 ತೀವ್ರತೆಯ ಭೂಕಂಪನ ಸಂಭವಿಸಿದೆ.
ನೇಪಾಳದಲ್ಲಿ ಎರಡು ಭೂಕಂಪನಗಳು ಜರುಗಿವೆ. ಮಧ್ಯಾಹ್ನ 2.24ಕ್ಕೆ 10 ಕಿಲೋ ಮೀಟರ್ ಆಳದಲ್ಲಿ ರಿಕ್ಟರ್ ಮಾಪನದಲ್ಲಿ 4.6 ತೀವ್ರತೆಯೊಂದಿಗೆ ಮೊದಲ ಕಂಪನ ದಾಖಲಾಗಿದೆ. ಮತ್ತೊಂದು ಕಂಪನ ಮಧ್ಯಾಹ್ನ 2.51ರ ಸುಮಾರಿಗೆ ಸಂಭವಿಸಿತು. ಇದರ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 6.2ರಷ್ಟು ದಾಖಲಾಗಿದೆ.
ನೇಪಾಳದಲ್ಲಿ ಉಂಟಾದ ಪ್ರಬಲ ಕಂಪನದ ನಂತರ ಇಲ್ಲಿನ ಜನರಿಗೆ ಭೂಮಿ ನಡುಗಿರುವ ಅನುಭವ ಆಗಿದೆ. ಕಚೇರಿಗಳು ಹಾಗೂ ಎತ್ತರ ಕಟ್ಟಡಗಳಲ್ಲಿ ನೆಲೆಸಿದ್ದವರು ಹೊರಗಡೆ ಓಡಿ ಬಂದಿದ್ದಾರೆ. ಜನತೆ ಗಾಬರಿಯಾಗುವುದು ಬೇಡ ಎಂದು ಪೊಲೀಸರು ಮನವಿ ಮಾಡಿದರು.