ಹರಿದ್ವಾರ: ಅಖಂಡ್ ಪರಮ್ಧಾಮ್ ಆಶ್ರಮದಲ್ಲಿ ಮೂವರು ರಷ್ಯಾ ಪ್ರಜೆಗಳು ಭಾರತೀಯ ಪದ್ಧತಿಯಂತೆ ಹಸೆಮಣೆ ಏರಿದರು. ರಷ್ಯಾದ 50 ಮಂದಿ ಆಧ್ಯಾತ್ಮಿಕ ಪ್ರಯಾಣದ ಸಲುವಾಗಿ ಹರಿದ್ವಾರಕ್ಕೆ ಆಗಮಿಸಿದ್ದಾರೆ.
ಭಾರತೀಯ ಸಂಸ್ಕೃತಿ ರಷ್ಯಾ ಪ್ರವಾಸಿಗರನ್ನು ಸೆಳೆದಿದೆ. ರಷ್ಯಾದ 50 ಜನರ ಪೈಕಿ ಮೂರು ಜೋಡಿ ಭಾರತದಲ್ಲೇ ಮದುವೆಯಾಗಲು ನಿರ್ಧರಿಸಿತು. ಮೂರು ಜೋಡಿಗಳು ಆಶ್ರಮದಲ್ಲಿ ತಂಗಿದ್ದು, ಭಾರತೀಯ ಪದ್ಧತಿಯಂತೆ ವಿಧಿವಿಧಾನಗಳೊಂದಿಗೆ ವಿವಾಹವಾದರು.
ಭಾರತೀಯ ಸಂಪ್ರದಾಯದಂತೆ ಹಸೆಮಣೆ ಏರಿದ ಮೂವರು ರಷ್ಯಾ ಜೋಡಿಗಳುಈ ಮದುವೆ ಸಮಾರಂಭದಲ್ಲಿ ರಷ್ಯಾ ನಾಗರಿಕರು ಭಾರತೀಯ ರೊಂದಿಗೆ ಸೇರಿ ಕುಣಿದು ಕುಪ್ಪಳಿಸಿದರು. ಡ್ರಮ್ಸ್, ಉತ್ತರಾಖಂಡದ ವಾದ್ಯಗಳ ಸದ್ದಿಗೆ ರಷ್ಯಾ ಮಂದಿ ಬಹಳ ಹುರುಪಿನಿಂದ ನೃತ್ಯ ಮಾಡಿದರು.
ಮೊದಲು, ಮದುವೆಯ ಮೆರವಣಿಗೆಯನ್ನು ಭಾರತೀಯ ಪದ್ಧತಿಯಂತೆ ನಡೆಸಲಾಯಿತು. ಆಶ್ರಮದಲ್ಲಿ ನಿರ್ಮಿಸಲಾದ ಶಿವ ದೇವಾಲಯದಲ್ಲಿ ನವ ಜೋಡಿಗಳು ಶಿವನ ಆಶೀರ್ವಾದ ಪಡೆದರು. ನಂತರ ಅಖಂಡ್ ಪರಮ್ಧಾಮ್ನ ಅಧ್ಯಕ್ಷ ಸ್ವಾಮಿ ಪರಮಾನಂದ್ ಗಿರಿ ಮಹಾರಾಜರ ಆಶೀರ್ವಾದ ಪಡೆದು, ಪರಸ್ಪರ ಹಾರ ಬದಲಾಯಿಸಿಕೊಂಡರು. ಬಳಿಕ ಶಾಸ್ತ್ರ ಸಂಪ್ರದಾಯಗಳ ಪ್ರಕಾರ ಮದುವೆ ಸಂಪನ್ನಗೊಂಡಿತು. ಮಂತ್ರ ಪಠಣಗಳ ನಡುವೆ ಮಂಟಪದಲ್ಲಿ ಸಪ್ತಪದಿ ತುಳಿದರು.
ಮೂರು ರಷ್ಯಾ ಜೋಡಿಗಳು ಭಾರತೀಯ ಸಂಪ್ರದಾಯದ ಪ್ರಕಾರ ದಾಂಪತ್ಯ ಜೀವನ ಆರಂಭಿಸಿದ್ದಾರೆ. ವಿವಾಹ ಸಮಾರಂಭದಲ್ಲಿ ವರರು ಭಾರತೀಯ ಸಂಪ್ರದಾಯದ ಶೆರ್ವಾನಿ ಧರಿಸಿದ್ದರೆ, ವಧು ಭಾರತೀಯ ಪದ್ಧತಿಯ ಲೆಹೆಂಗಾದಲ್ಲಿ ಮಿಂಚಿದರು. ಈ ಹಿಂದೆಯೂ ಅನೇಕ ರಷ್ಯನ್ ಪ್ರಜೆಗಳು ಭಾರತೀಯ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದಾರೆ.
ಅಖಂಡ್ ಪರಮ್ಧಾಮ್ ಆಶ್ರಮದಲ್ಲಿ ಮೂವರು ರಷ್ಯಾ ಪ್ರಜೆಗಳು ಭಾರತೀಯ ಪದ್ಧತಿಯಂತೆ ಹಸೆಮಣೆ ಏರಿದರು.