Saturday, 23rd November 2024

ಆಯಪ್​ ಪ್ರಕರಣ: ನಟಿ ಶ್ರದ್ಧಾಗೆ ಇಡಿ ಸಮನ್ಸ್​ ಜಾರಿ, ಇಂದೇ ವಿಚಾರಣೆ

ಮುಂಬೈ: ಬೆಟ್ಟಿಂಗ್​ ಆಯಪ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್​ ನಟಿ ಶ್ರದ್ಧಾ ಕಪೂರ್​ ಅವರಿಗೆ ಇಡಿ ಸಮನ್ಸ್​ ಜಾರಿ ಮಾಡಿದ್ದು, ಇಂದೇ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಈಗಾಗಲೇ ನಟ ರಣ್​ಬೀರ್​ ಕಪೂರ್​, ಹಾಸ್ಯನಟ ಕಪಿಲ್​ ಶರ್ಮಾ ಮತ್ತು ನಟಿಯರಾದ ಹುಮಾ ಖುರೇಷಿ, ಹೀನಾ ಖಾನ್ ಅವರಿಗೆ ಜಾರಿ ನಿರ್ದೇಶನಾ ಲಯ ಸಮನ್ಸ್​ ನೀಡಿದೆ. ನಟಿ ಶ್ರದ್ಧಾ ಕಪೂರ್​ಗೂ ಸಮನ್ಸ್​ ಕಳುಹಿಸಿರುವ ಇಡಿ, ಇಂದೇ ತನಿಖೆಗೆ ಹಾಜರಾಗುವಂತೆ ಸೂಚಿಸಿದೆ.

ರಣ್​ಬೀರ್​ ಕಪೂರ್​ ಅವರಿಗೆ ಅಕ್ಟೋಬರ್​ 4ರಂದು ಇಡಿ ಸಮನ್ಸ್​ ಜಾರಿ ಮಾಡಿತ್ತು. ಅಕ್ಟೋಬರ್​ 6ರಂದು ರಾಯ್​ಪುರದ ಪ್ರಾದೇಶಿಕ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಬೇಕು ಎಂದು ಅಧಿಕಾರಿಗಳು ಸೂಚಿಸಿದ್ದರು. ಆದರೆ ನಟ ಕಾಲಾವಕಾಶ ಕೇಳಿದ್ದಾರೆ. ಇಡಿ ಗುರಿಯಲ್ಲಿ ರಣ್​​ಬೀರ್ ಕಪೂರ್ ಸೇರಿ 15 ಸೆಲೆಬ್ರಿಟಿಗಳು ಇದ್ದಾರೆ.

ಹಾಸ್ಯನಟ ಕಪಿಲ್​ ಶರ್ಮಾ, ನಟಿಯರಾದ ಹುಮಾ ಖುರೇಷಿ ಮತ್ತು ಹೀನಾ ಖಾನ್​ ಅವರಿಗೂ ಸಮನ್ಸ್​ ನೀಡಲಾ ಗಿತ್ತು. ಆದರೆ ಮೂವರು ಕೂಡ ತನಿಖೆಗೆ ಹಾಜರಾಗಲು ಎರಡು ವಾರಗಳ ಕಾಲಾವಕಾಶ ಕೇಳಿದ್ದಾರೆ ಎನ್ನಲಾಗಿದೆ.

ಸುಮಾರು 15 ಸೆಲೆಬ್ರಿಟಿಗಳು ಯುಎಇಯಲ್ಲಿ ಮಹಾದೇವ್ ಬೆಟ್ಟಿಂಗ್ ಆಯಪ್‌ನ ಪ್ರಚಾರಕ ಸೌರಭ್ ಚಂದ್ರಕರ್ ಆಯೋಜಿಸಿದ್ದ ಮ್ಯಾರೇಜ್​​ ಪಾರ್ಟಿ ಯಲ್ಲಿ ಭಾಗವಹಿಸಿದ್ದರು. ಹಾಗಾಗಿ ಈ ಪ್ರಕರಣದಲ್ಲಿ ಟೈಗರ್ ಶ್ರಾಫ್, ರಾಹತ್ ಫತೇಹ್ ಅಲಿ ಖಾನ್, ಅತೀಫ್ ಅಸ್ಲಾಂ, ಕೃಷ್ಣ ಅಭಿಷೇಕ್, ನುಶ್ರತ್ ಭರುಚಾ, ಸನ್ನಿ ಲಿಯೋನ್ ಸೇರಿದಂತೆ 15 ಜನ ಖ್ಯಾತನಾಮರ ಹೆಸರು ಕೇಳಿಬಂದಿದೆ.