ಮಾಂಟ್ರಿಯಲ್ : ಕೆನಡಾ ತಂಡ ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಅರ್ಹತೆ ಪಡೆದುಕೊಂಡಿದೆ.
ಅರ್ಹತಾ ಹಂತದ ತನ್ನ ಕೊನೆಯ ಪಂದ್ಯದಲ್ಲಿ 39 ರನ್ಗಳಿಂದ ಬರ್ಮುಡಾ ತಂಡವನ್ನು ಮಣಿಸಿ ಈ ಸಾಧನೆ ಮಾಡಿತು. ಕೆನಡಾ ತಂಡ ಟಿ20 ವಿಶ್ವಕಪ್ಗೆ ಅರ್ಹತೆ ಪಡೆದಿರುವುದು ಇದೇ ಮೊದಲು.
ಉತ್ತಮ ರನ್ರೇಟ್ ಆಧಾರದಲ್ಲಿ ಕೆನಡಾ ತೇರ್ಗಡೆ ಹೊಂದಿತು. ಪನಾಮಾ ಮತ್ತು ಕೇಮನ್ ಐಲ್ಯಾಂಡ್ ತಂಡಗಳು ಇದೇ ಗುಂಪಿನಲ್ಲಿದ್ದವು.
9ನೇ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿ ಅಮೆರಿಕ ಮತ್ತು ವೆಸ್ಟ್ಇಂಡೀಸ್ನ ಜಂಟಿ ಆತಿಥ್ಯದಲ್ಲಿ 2024ರ ಜೂನ್ನಲ್ಲಿ ನಡೆಯಲಿದ್ದು, ಒಟ್ಟು 20 ತಂಡಗಳು ಪಾಲ್ಗೊಳ್ಳಲಿವೆ. ಕೆನಡಾ ತಂಡ ಈ ಹಿಂದೆ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಿತ್ತು.
ಕೆನಡಾ ತಂಡ, ನವನೀತ್ ಧಲಿವಾಲ್ (45) ಅವರ ಉತ್ತಮ ಆಟದ ನೆರವಿನಿಂದ 20 ಓವರ್ಗಳಲ್ಲಿ 4 ವಿಕೆಟ್ಗಳಿಗೆ 132 ರನ್ ಗಳಿಸಿತು. ಬರ್ಮುಡಾ 16.5 ಓವರ್ಗಳಲ್ಲಿ 93 ರನ್ಗಳಿಗೆ ಆಲೌಟಾಯಿತು. ಕರೀಂ ಸನಾ ಮತ್ತು ಜೆರೆಮಿ ಗೋರ್ಡನ್ ತಲಾ ಮೂರು ವಿಕೆಟ್ ಪಡೆದರು.