ರಾಯಚೂರು : ಭಾರತ ಸರ್ಕಾರದ ದೂರ ಸಂಪರ್ಕ ಇಲಾಖೆಯಿಂದ ವಿಪತ್ತು ನಿರ್ವಹಣಾ ಸಂದೇಶವು ಮೊಬೈಲ್ ಗಳಿಗೆ ಬಂದಿದ್ದು ಜನರಲ್ಲಿ ಕೌತುಕದ ಜೊತೆ ಅಚ್ಚರಿ ಮೂಡಿಸಿದೆ.
ಸ್ಮಾರ್ಟ್ ಫೋನ್ ಗಳಲ್ಲಿ ನೈಸರ್ಗಿಕ ವಿಪತ್ತುಗಳಾದ ಭೂಕಂಪ, ಪ್ರವಾಹ ಮುಂತಾದ ತುರ್ತು ಸಂದರ್ಭದಲ್ಲಿ ಅದನ್ನು ತಿಳಿಸುವ ತಂತ್ರಜ್ಞಾನ ಅಳವಡಿಕೆಯಾಗಿದೆ. ಇಂದು ಮೊಬೈಲ್ ಗಳಿಗೆ ಪರೀಕ್ಷಾರ್ಥವಾಗಿ ಭಾರತ ಸರ್ಕಾರದ ದೂರ ಸಂಪರ್ಕ ಇಲಾಖೆಯು ಪರೀಕ್ಷಾರ್ಥವಾಗಿ ಸಂದೇಶಗಳನ್ನು ರವಾನಿಸಿದ್ದು ಮೋಬೈಲ್ ವೈಬ್ರೇಟ್ ಮೋಡ್ ಮಾದರಿ ಸಂದೇಶ ಬಂದಿದ್ದು ಜನರು ತಕ್ಷಣ ಅದನ್ನು ನೋಡಿ ಒಂದು ಕ್ಷಣ ವಿಚಲಿತರಾಗಿದ್ದು ತದ ನಂತರ ಸಂದೇಶದಲ್ಲಿ ಉಲ್ಲೇಖಿಸಿದಂತೆ ಸಂದೇಶಕ್ಕೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ.
ಇದು ಭಾರತ ಸರ್ಕಾರದ ದೂರ ಸಂಪರ್ಕ ಇಲಾಖೆಯ ವಿಪತ್ತು ನಿರ್ವಹಣಾ ಪರೀಕ್ಷಾರ್ಥ ಸಂದೇಶವೆಂಬ ಮಾಹಿತಿ ಅರಿತು ಜನರು ನಿಟ್ಟುಸಿರು ಬಿಟ್ಟಿದ್ದಾರೆ.