Saturday, 21st September 2024

ಪ್ಲಾಸ್ಮಾದಿಂದ ಪ್ರತಿಕಾಯಗಳು

ವೈದ್ಯಕೀಯ

ಜಿ.ಪದ್ಮನಾಭನ್

ಗಂಭೀರ ಕೋವಿಡ್ ಪ್ರಕರಣಗಳ ಚಿಕಿತ್ಸೆಗೆ ಭಾರತವು ಕೋವಿಡ್‌ನಿಂದ ಗುಣಮುಖವಾದ ವ್ಯಕ್ತಿಗಳಿಂದ ಪ್ಲಾಸ್ಮಾ ಪಡೆಯುವು ದನ್ನು ಪ್ರಮುಖ ಆಯ್ಕೆಯಾಗಿಸಿಕೊಂಡಿದೆ. ಬಹುತೇಕ ಎಲ್ಲಾ ರಾಜ್ಯಗಳೂ ಗುಣಮುಖರಾದ ವ್ಯಕ್ತಿಗಳಿಂದ ಪ್ಲಾಸ್ಮಾ ದಾನಕ್ಕಾಗಿ ಮನವಿ ಮಾಡುತ್ತಿವೆ. ರಾಜ್ಯಗಳು ಪ್ಲಾಸ್ಮಾ ದಾನಿಗಳಿಗೆ ವಿತ್ತೀಯ ಪರಿಹಾರವನ್ನು ಘೋಷಿಸಿವೆ ಮತ್ತು ಪ್ಲಾಸ್ಮಾ ಬ್ಯಾಂಕುಗಳನ್ನು ತೆರೆಯಲು ಯೋಜಿಸಿವೆ. ಕೋವಿಡ್‌ನಿಂದ ಗುಣಮುಖವಾಗಿರುವ ವ್ಯಕ್ತಿಯ ಪ್ಲಾಸ್ಮಾದಲ್ಲಿರುವ ಪ್ರತಿಕಾಯಗಳು (Antibodies)(ಪ್ರತ್ಯೇಕವಾಗಿ IgG) ವೈರಾಣುವನ್ನು ತಟಸ್ಥೀಕರಣಗೊಳಿಸುತ್ತವೆ. ನಿರ್ದಿಷ್ಟವಾಗಿ ಹೇಳುವುದಾದರೆ ವೈರಾಣುವಿನ ಮೇಲ್ಮೆೆ ನಲ್ಲಿರುವ ಸ್ಪೆಕ್ ಪ್ರೊಟೀನ್ ನನ್ನು ACE2 ಗ್ರಾಹಕವು (receptor) ಬಂಧಿಸುತ್ತದೆ. ಈ ತತ್ತ್ವದ ಆಧಾರದ ಮೇಲೆ ಪ್ರತಿಕಾಯಗಳು ಕೆಲಸ ಮಾಡುತ್ತವೆ.

ಶ್ವಾಸಕೋಶದ ಜೀವಕೋಶಗಳ ಮೇಲೆ ಮತ್ತು ಇನ್ನಿತರ ಅಂಗಗಳಲ್ಲಿರುವ ACE2 ಗ್ರಾಹಕವು ಜೀವಕೋಶದೊಳಗೆ ಪ್ರವೇಶಿಸುವ ವೈರಾಣುಗಳ ಮಧ್ಯಸ್ಥಿಕೆ ವಹಿಸುತ್ತದೆ. ತೀವ್ರ ಉಸಿರಾಟದ ತೊಂದರೆ ವ್ಯವಸ್ಥೆ ((Acute Respiratory Distress Syndrome (ARDS) ಯಂಥ ಗಂಭೀರ ಪರಿಸ್ಥಿತಿಯಲ್ಲಿ ಉಸಿರಾಟಕ್ಕೆ ಯಾಂತ್ರಿಕ ನೆರವಿನ ಅಗತ್ಯವಿರುತ್ತದೆ. ಈ ಸಿಂಡ್ರೋಮ್‌ನ ಕಾರಣದಿಂದ ಬಹು ಅಂಗಾಂಗ ವೈಫಲ್ಯ ಸಂಭವಿಸಬಹುದು. ಪ್ಲಾಸ್ಮಾ ಚಿಕಿತ್ಸೆಯನ್ನು ಶೀಘ್ರವಾಗಿ ಮಾಡಬೇಕಾಗುತ್ತದೆ, ಒಂದು ವೇಳೆ ಚಿಕಿತ್ಸೆ ತಡವಾದರೆ ಇತರೆ ವಿಷಮತೆಗಳನ್ನು ಎದುರಿಸಬೇಕಾಗುತ್ತದೆ.

ಪ್ಲಾಸ್ಮಾ ಥೆರಪಿ ಚಿಕಿತ್ಸೆಯು ತೀರಾ ಹೊಸದೇನಲ್ಲ, 1918ರಲ್ಲಿ ಪ್ರಾರಂಭವಾದ ಸ್ಪ್ಯಾನಿಶ್ ಫ್ಲ್ಯೋ (Spanish Flu)ನಿಂದ ತೀರಾ ಇತ್ತೀಚಿನ ಸಾಂಕ್ರಾಮಿಕ ರೋಗಗಳಾದ Ebola, MERS, SARS, H1N1 ಗಳಿಗೂ ಬಳಸಲಾಗುತ್ತದೆ. ದಾನಿಗಳ ಪ್ಲಾಸ್ಮಾದಲ್ಲಿರುವ ತಟಸ್ಥೀಕರಣಗೊಳಿಸುವ ಪ್ರತಿಕಾಯಗಳ ಪ್ರಮಾಣ ಪ್ರತಿಯೊಬ್ಬರಿಗೂ ವ್ಯಾತ್ಯಾಸ ವಾಗುತ್ತದೆ. ಪ್ಲಾಸ್ಮಾ ಚಿಕಿತ್ಸೆಗೆ ರಕ್ತದ ಹೊಂದಾಣಿಕೆಯ ಅಗತ್ಯವಿರುತ್ತದೆ. ಚಿಕಿತ್ಸೆಗೂ ಮುನ್ನ ಪ್ರತೀ ಪ್ಲಾಸ್ಮಾಕಣದ ಉತ್ಪಾದನೆಯೂ ರಕ್ತ ಜನ್ಯ ಪ್ಯಾಥೋಜನ್‌ಗಳಾದ ಹೆಪಟೈಟಿಸ್ ವೈರಾಣುಗಳು, HIV ಮಲೇರಿಯಾ ಮತ್ತು ಇತರ ಪ್ಯಾರಾಸೈಟ್‌ಗಳಿಂದ ಮುಕ್ತಗೊಂಡಿವೆಯೆಂದು ಖಚಿತಪಡಿಸಿ ಕೊಳ್ಳಬೇಕಾಗುತ್ತದೆ.

ನಮ್ಮ ಮುಂದಿರುವ ಪರಿಗಣಿಸಲ್ಪಡಬೇಕಾಗಿರುವ ಉತ್ತಮವಾದ ಆಯ್ಕೆಯೆಂದರೆ ಕೋವಿಡ್ ಗುಣಮುಕ್ತ ವ್ಯಕ್ತಿಯಿಂದ ತೆಗೆದಿರುವ ಪ್ಲಾಸ್ಮಾದಿಂದ IgGನ್ನು (Antibodies) ಪ್ರತ್ಯೇಕಿಸುವುದು. ಇದು ಅನೇಕ ಉಪಯುಕ್ತತೆಗಳನ್ನು ಹೊಂದಿದೆ.  ಬ್ಯಾಚ್ ‌ಗಳಲ್ಲಿ ತಟಸ್ಥೀಕರಣಗೊಳಿಸುವ ಪ್ರತಿಕಾಯಗಳ ಪ್ರಮಾಣ ಮತ್ತು ಮಾಲಿನ್ಯಕಾರಕಗಳನ್ನು ವಿತರಿಸುವ ಮುನ್ನ ಬಾಟಲ್‌ಗಳ ಮೇಲೆ ನಮೂದಿಸಬಹುದು. ಪ್ರತೀ ರೋಗಿಗೂ ನೀಡಬೇಕಾದ ಷ್ಲಾಸ್ಮಾದ ಪ್ರಮಾಣವು ದೊರೆಯುವ ಪ್ಲಾಸ್ಮಾಕ್ಕಿಂತ ಕಡಿಮೆ ಪ್ರಮಾಣದಲ್ಲಿರುತ್ತದೆ. ಪ್ಲಾಸ್ಮಾದಲ್ಲಿರುವ ಪ್ರೋಟಿನ್ ಅ ಮತ್ತು ಸ್ಪೆಕ್ ಪ್ರೋಟಿನ್‌ಗಳಿಂದ IgG ಪ್ರತಿಕಾಯಗಳನ್ನು ಶುದ್ಧೀಕರಿಸಲು ಅಫಿನಿಟಿ ಮ್ಯಾಟ್ರಿಕ್ಸ್ಗಳು ಲಭ್ಯವಿದೆ. ಇದನ್ನು ಅಯಾನು ವಿನಿಮಯದೊಂದಿಗೆ (Ion exchange ಸಂಯೋಜಿಸಬಹುದು.
ಕ್ರೊಮ್ಯಾಟೊಗ್ರಫಿ, ನ್ಯಾನೋ ಫಿಲ್ಟರೇಶನ್‌ಗಳಿಂದ ಪ್ಲಾಸ್ಮಾವನ್ನು ಶುದ್ಧೀಕರಿಸಬಹುದು. ಇದು ಕೈಗಾರಿಕಾ ಪ್ರಕ್ರಿಯೆಯಾಗಿದೆ. ಪ್ಲಾಸ್ಮಾ ಬ್ಯಾಂಕುಗಳು ಈ ಮೂಲಕ ಶುದ್ಧೀಕರಿಸಿದ ಪ್ಲಾಸ್ಮಾವನ್ನು ಒದಗಿಸುತ್ತವೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಟಿಸಲು ಸಾಮಾನ್ಯ ಪ್ಲಾಸ್ಮಾದಿಂದ ತೆಗೆದ ಅಭಿದಮನಿ IgG ಯನ್ನು ಬಳಸಬಹುದು. ಇದನ್ನು ಮೆಡಿಕಲ್ ಫ್ರೆಟರ್ನಿಟಿ ಎಂದು ಕರೆಯಬಹುದು. ಗುಣಮುಖರಾದ ವ್ಯಕ್ತಿಯ ಪ್ಲಾಸ್ಮಾವನ್ನು ಕೋವಿಡ್ ಹೊಂದಿರುವ ರೋಗಿಯ ದೇಹಕ್ಕೆ ನೀಡಲು ಹೊಸ ಪ್ರಮಾಣಿತ ಮಾನದಂಡಗಳನ್ನು ರೂಪಿಸಬೇಕಾಗಿದೆ. ಸ್ಪೆೆಕ್ ಪ್ರೋಟಿನ್ ತಟಸ್ಥಗೊಳಿಸು ವಿಕೆಯ ಸಾಮರ್ಥ್ಯ, ವೈರಲ್ ಫ್ಲೇಕ್ ಕಡಿತದ ಮೌಲ್ಯಮಾಪನ ಮತ್ತು ಸಂತಾನಹೀನತೆಗಳನ್ನು ಗುರುತಿಸಲು ಕೋವಿಡ್ ವೈರಸ್ ಇಲ್ಲದಿರುವಿಕೆಯನ್ನು ದೃಢಪಡಿಸಿಕೊಳ್ಳಲು IgG ತಯಾರಿಕೆಯನ್ನು ಹೆಚ್ಚುವರಿ ಯಾಗಿ ನಿರ್ಣಯಿಸಬೇಕಾಗಿದೆ. ಇದರ ಮೂಲಕ ಪ್ರತೀ ವೈರಾಣುವಿನಲ್ಲಿರುವ ತಟಸ್ಥಗೊಳಿಸುವ ಪ್ರತಿಕಾಯದ ನಿಖರವಾದ ಪ್ರಮಾಣವನ್ನು ನಾವು ತಿಳಿದುಕೊಳ್ಳಬಹುದು.

ಪ್ರಕ್ರಿಯೆಯನ್ನು ಹಂತ 1 ಮತ್ತು ಹಂತ 2 ಕ್ಲಿನಿಕಲ್ ಪ್ರಯೋಗಗಳ ಮೂಲಕ ಮಾಡಬಹುದು (ಸುರಕ್ಷತೆ ಮತ್ತು ಸೀಮಿತ
ಪರಿಣಾಮಕಾರಿ ಪ್ರಯೋಗ) ಎರಡೂ ಹಂತಗಳನ್ನು ಸಂಯೋಜಿಸಿದಾಗ 2 ಅಥವಾ 3 ತಿಂಗಳಿಗಿಂತ ಹೆಚ್ಚು ಸಮಯ ತೆಗೆದು ಕೊಳ್ಳಬಾರದು. ಇವುಗಳು ಪಾಲಿಕ್ಲೋನಲ್ ಪ್ರತಿಕಾಯಗಳಾಗಿವೆ. ಈ ಪ್ರತಿಕಾಯಗಳ ಪ್ರಕ್ರಿಯೆಯನ್ನು ವಾಣಿಜ್ಯಿಕವಾಗಿ ಬಳಸು ವಲ್ಲಿ ಇಸ್ರೇಲಿ ಕಂಪನಿಯು ಬಹುಶಃ ಮೊದಲನೆಯದಾಗಿದೆ. ಕೋವಿಡ್-19ನ ವಿರುದ್ಧ ಇಸ್ರೇಲ್‌ನಲ್ಲಿ ಇದು ಸಹಾನು ಭೂತಿಯ ಬಳಕೆಗೆ ಲಭ್ಯವಿದೆ. ಈ ಸವಾಲನ್ನು ಭಾರತದ ಪ್ರಖ್ಯಾತ ಜೈವಿಕ ತಂತ್ರಜ್ಞಾನ ಕಂಪನಿಗಳು ತೆಗೆದುಕೊಂಡಿದ್ದೇ ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಹಾಗೂ ಭವಿಷ್ಯದ ಸಾಂಕ್ರಾಮಿಕ ಪಿಡುಗುಗಳ ವಿರುದ್ಧ ಹೋರಾಡಲು ಸಹಾಯಕವಾಗುತ್ತದೆ.