Friday, 22nd November 2024

ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಮೀಕ್ಷೆ: ಬೈಡನ್‌ ಹಿಂದಿಕ್ಕಿದ ನಿಕ್ಕಿ ಹ್ಯಾಲೆ

ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಗಳಾದ ನಿಕ್ಕಿ ಹ್ಯಾಲೆ ಮತ್ತು ರಾನ್ ಡೆಸಾಂಟಿಸ್ ವಿರುದ್ಧ ಸೋಲು ಕಾಣಲಿದ್ದಾರೆ.

2024 ರ ಚುನಾವಣೆ ಈಗ ನಡೆದರೆ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿಂತ ಕೊಂಚ ಮುನ್ನಡೆ ಸಾಧಿಸ ಬಹುದು ಎಂದು ಹೊಸ ಸಮೀಕ್ಷೆ ತಿಳಿಸಿದೆ.

ಬೈಡನ್ ಟ್ರಂಪ್ (49 ಪ್ರತಿಶತದಿಂದ 48 ಪ್ರತಿಶತ) ಗಿಂತ ಒಂದು ಪಾಯಿಂಟ್ ಮುನ್ನಡೆ ಸಾಧಿಸಿದರೆ, ಹ್ಯಾಲೆ ಬೈಡನ್ ಅವರಿಗಿಂತ ನಾಲ್ಕು ಅಂಕಗಳಿಂದ (49 ರಿಂದ 45 ಪ್ರತಿಶತ) ಮತ್ತು ಡೆಸಾಂಟಿಸ್ ಅವರಿಗಿಂತ ಎರಡು ಅಂಕಗಳಿಂದ ಹಿಂದುಳಿದಿದ್ದಾರೆ.

ಅಕ್ಟೋಬರ್ 6-9 ರ ನಡುವೆ ನಡೆಸಲಾದ ಸಮೀಕ್ಷಾ ವರದಿಯ ಪ್ರಕಾರ, ಭಾರತೀಯ-ಅಮೆರಿಕನ್ ಮಾಜಿ ದಕ್ಷಿಣ ಕೆರೊಲಿನಾ ಗವರ್ನರ್ ನಿಕ್ಕಿ ಹ್ಯಾಲೆ ಸೆಪ್ಟೆಂಬರ್​ನಿಂದ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದ್ದು, ಶೇಕಡಾ 10 ರಷ್ಟು ಬೆಂಬಲದೊಂದಿಗೆ ತಮ್ಮ ಜನಪ್ರಿಯತೆಯನ್ನು ದ್ವಿಗುಣಗೊಳಿಸಿ ಕೊಂಡಿದ್ದಾರೆ.

“ಹ್ಯಾಲೆ ಬೈಡನ್ ವಿರುದ್ಧ ಮುನ್ನಡೆ ಸಾಧಿಸಿದ ಏಕೈಕ ರಿಪಬ್ಲಿಕನ್ ಅಭ್ಯರ್ಥಿಯಾಗಿದ್ದಾರೆ. ಇಬ್ಬರ ನಡುವಿನ ಕಾಲ್ಪನಿಕ ಸ್ಪರ್ಧೆಯಲ್ಲಿ ಬೈಡನ್ 49 ಪ್ರತಿಶತ ಮತ್ತು ಬೈಡನ್ 43 ಪ್ರತಿಶತದಷ್ಟು ಮತಗಳನ್ನು ಪಡೆದಿದ್ದಾರೆ” ಎಂದು ವರದಿ ಮಾಡಿದೆ.