Friday, 22nd November 2024

ಅ.31ರವರೆಗೆ ತಮಿಳುನಾಡಿಗೆ ನೀರು ಬಿಡಿ: ಕರ್ನಾಟಕಕ್ಕೆ ಬಿಗ್ ಶಾಕ್

ಬೆಂಗಳೂರು: ಅಕ್ಟೋಬರ್1ರಿಂದ 16ರವರೆಗೆ ಪ್ರತಿ ದಿನ 3000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶ ಪರಿಷ್ಕರಿಸುವಂತೆ ಕರ್ನಾಟಕ CWRAಗೆ ಮನವಿ ಮಾಡಿತ್ತು. ಆದರೆ CWMA, CWRA ಆದೇಶವನ್ನು ಎತ್ತಿ ಹಿಡಿದು, ಅಕ್ಟೋಬರ್31 ರವರೆಗೆ ತಮಿಳುನಾಡಿಗೆ ಪ್ರತಿದಿನ 3000 ಕ್ಯೂಸೆಕ್ ನೀರು ಹರಿಸುವಂತೆ ಆದೇಶಿಸಿದೆ.

ಈ ಸಂಬಂಧ ದೆಹಲಿಯಲ್ಲಿ ಮಹತ್ವದ ಸಭೆ ನಡೆಯಿತು.

ಕಾವೇರಿ ನದಿ ನೀರು ಬಿಡುಗಡೆ ವಿಚಾರವಾಗಿ ಇಂದಿನ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಿತು. ಅಂತಿಮವಾಗಿ ಅಕ್ಟೋಬರ್ 16ರಿಂದ 31ರವರೆಗೆ ನಿತ್ಯ 3000 ಕ್ಯೂಸೆಕ್ ನೀರು ಹರಿಸುವಂತೆ ಸೂಚನೆ ನೀಡಿದೆ. ಅಲ್ಲದೇ CWRA ಆದೇಶವನ್ನು ತಪ್ಪದೇ ಪಾಲಿಸುವಂತೆ CWMA ಖಡಕ್ ಸೂಚನೆ ನೀಡುವ ಮೂಲಕ ಬಿಗ್ ಶಾಕ್ ನೀಡಿದೆ.

ರಾಜ್ಯದಲ್ಲಿ ಮುಂಗಾರು ಕೈಕೊಟ್ಟ ಕಾರಣ ಮಳೆಯ ಪ್ರಮಾಣ ಕುಂಠಿತವಾಗಿದೆ. ಡ್ಯಾಂಗಳಿಗೆ ಒಳ ಹರಿವಿನ ಪ್ರಮಾಣ ಇಳಿಕೆಯಾಗಿದೆ. ನೀರಿನ ಮಟ್ಟ ಕೂಡ ಪ್ರತಿವರ್ಷದಂತೆ ಸಂಗ್ರಹ ಆಗಿಲ್ಲ. ಕರ್ನಾಟಕದ ರೈತರ ಬೆಳಗಳಿಗೆ ನೀರು ಸಾಕಾಗುವುದಿಲ್ಲ ಅನ್ನೋ ಕರ್ನಾಟಕದ ಅಧಿಕಾರಿಗಳ ವಾದವನ್ನು CWMA ನಿರಾಕರಿಸಿದೆ.