ಅಹಮದಾಬಾದ್: ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಔಟಾಗಬಾರದು ಎಂದು ವಿಕೆಟ್ ತ್ಯಾಗ ಮಾಡಲು ಮುಂದಾದ ವಿಡಿಯೊ ಇದೀಗ ಎಲ್ಲಡೆ ವೈರಲ್ ಆಗಿದೆ.
ಇನ್ನಿಂಗ್ಸ್ನ ಒಂಬತ್ತನೇ ಓವರ್‌ನಲ್ಲಿ ರೋಹಿತ್ ಶರ್ಮಾ ಅವರಿಂದ ಸರಿಯಾದ response ಸಿಗದ ಕಾರಣ ವಿರಾಟ್ ಕೊಹ್ಲಿ ರನ್ ಓಡಲು ಮುಂದಾಗಿಲ್ಲ. ಆದರೆ ರೋಹಿತ್ ಅವರು ಸುಮಾರು ಅರ್ಧ ಪಿಚ್ ವರೆಗೆ ಬಂದು ವಾಪಸ್ ಹಿಂದಿರುಗಿ ಹೋಗಲು ಸಾಧ್ಯವಾಗದಿದ್ದಾಗ ಕೊಹ್ಲಿ ಕ್ರೀಸ್ ಬಿಟ್ಟು ಓಡಿದರು. ಉತ್ತಮವಾಗಿ ಆಡುತ್ತಿದ್ದ ರೋಹಿತ್ ಔಟಾಗಬಾರದು ಎನ್ನುವುದು ಅವರ ಉದ್ದೇಶವಾಗಿತ್ತು.
ಕೊಹ್ಲಿ ನಿಷ್ಕಲ್ಮಶ ಮನಸ್ಸಿನಿಂದ ರೋಹಿತ್ ಅವರು ಔಟಾಗಬಾರದೆಂದು ತನ್ನ ವಿಕೆಟ್ ಕೊಡಲು ಮುಂದಾ ದರು. ಈ ವಿಡಿಯೊವನ್ನು ಟೀಮ್ ಇಂಡಿಯಾ ಮತ್ತು ಕೊಹ್ಲಿ ಅಭಿಮಾನಿಗಳು ತಮ್ಮ ಸಾಮಾಜಿಕ ಜಾಲತಾಣ ದಲ್ಲಿ ಶೇರ್ ಮಾಡಿದ್ದಾರೆ.
ಕೊಹ್ಲಿಯಿಂದ ಜೀವದಾನ ಪಡೆದ ರೋಹಿತ್ ಶರ್ಮ ಅಬ್ಬರದ ಬ್ಯಾಟಿಂಗ್ ನಡೆಸಿ ಗಮನ ಸೆಳೆದರು.ಅವರ ಸೊಗಸಾದ ಈ ಇನಿಂಗ್ಸ್ನಲ್ಲಿ ಬರೋಬ್ಬರಿ 6 ಸಿಕ್ಸರ್ ಮತ್ತು 6 ಬೌಂಡರಿ ಸಿಡಿಯಿತು.
ಅಫ್ಘಾನಿಸ್ತಾನ ಪಂದ್ಯದಲ್ಲಿ, ರೋಹಿತ್ 554 ಸಿಕ್ಸರ್ಗಳ ಮೂಲಕ ಕ್ರಿಸ್ ಗೇಲ್ ಅವರನ್ನು ಹಿಂದಿಕ್ಕಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎನಿಸಿಕೊಂಡ ಮರು ಪಂದ್ಯದಲ್ಲೇ ಮತ್ತೊಂದು ದಾಖಲೆ ಬರೆದಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 300 ಸಿಕ್ಸರ್‌ಗಳನ್ನು ಬಾರಿಸಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಮತ್ತು ಭಾರತದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.