ಥಾಣೆ: ಮಹಾರಾಷ್ಟ್ರದ ಥಾಣೆ ನಗರದ ಆಸ್ಪತ್ರೆಯೊಂದರಲ್ಲಿ ಮಧ್ಯರಾತ್ರಿಯ ಸಿಲಿಂಡರ್‌ನಿಂದ ಆಮ್ಲಜನಕದ ಅನಿಲ ಸೋರಿಕೆಯಾಗಿದೆ.
ವಾಗ್ಲೆ ಎಸ್ಟೇಟ್‍ನ ಶ್ರೀನಗರ ಪ್ರದೇಶದಲ್ಲಿರುವ ಮಾತೋಶ್ರೀ ಗಂಗೂಬಾಯಿ ಸಂಭಾಜಿ ಶಿಂಧೆ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ.
ಅನಿಲ ಸೋರಿಕೆಯಿಂದಾಗಿ ಯಾವುದೇ ರೋಗಿಗೆ ತೊಂದರೆಯಾಗಿಲ್ಲ ಎಂದು ಥಾಣೆ ಮುನ್ಸಿಪಲ್ ಕಾಪೆರ್ರೇ ಷನ್‍ನ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ಯಾಸಿನ್ ತಾದ್ವಿ ತಿಳಿಸಿದ್ದಾರೆ. 390 ಕೆಜಿ ಸಿಲಿಂಡರ್‍ನಲ್ಲಿ ಒತ್ತಡ ಹೆಚ್ಚಾದಂತೆ ಅದರ ಸುರಕ್ಷತಾ ಕವಾಟ ಬಾಗಿ ಅನಿಲ ಸೋರಿಕೆಯಾಗ ತೊಡಗಿತು. ಎಚ್ಚೆತ್ತ ಅಟೆಂಡೆಂಟ್ ಒತ್ತಡವನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಸುಮಾರು 45 ನಿಮಿಷ ಆಮ್ಲಜನಕದ ಅನಿಲ ಸೋರಿಕೆಯಾಗಿ ನಂತರ ಅದನ್ನು ಮುಚ್ಚಲಾಯಿತು ಆಸ್ಪತ್ರೆಯಲ್ಲಿ 390 ಕೆಜಿಯ ಮತ್ತೊಂದು ಆಮ್ಲಜನಕ ಗ್ಯಾಸ್ ಸಿಲಿಂಡರ್ ಇದ್ದು ಯಾವುದೇ ತೊಂದರೆಯಾಗಿಲ್ಲ. ತುರ್ತು ಸಂಸರ್ಭದಲ್ಲಿ ರೋಗಿಗಳಿಗೆ ಪೂರೈಕೆಯಲ್ಲಿ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.