Friday, 22nd November 2024

ಒಕ್ಕೂಟದ ಸ್ವಸಹಾಯ ಸಂಘದ ಮಹಿಳೆಯರಿಗೆ ಚೆಕ್ ವಿತರಣೆ

ಚಿಕ್ಕಮಗಳೂರು: ತಾಲ್ಲೂಕಿನ ಹರಿಹರದಹಳ್ಳಿ ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ಎನ್.ಆರ್.ಎಂ.ಎಲ್. ಯೋಜನೆಯಡಿಯ ಸಿಐಎಫ್ ಫಂಡ್‌ನಲ್ಲಿ ಒಕ್ಕೂಟದ ಸ್ವಸಹಾಯ ಸಂಘದ ೯ ಮಹಿಳಾ ತಂಡಗಳಿಗೆ ಕೃಷಿ ಚಟುವಟಿಕೆ ವೃದ್ದಿಸಿಕೊಳ್ಳಲು ೧೩.೫೦ ಲಕ್ಷ ರೂ.ಗಳ ಚೆಕ್‌ನ್ನು ಪಿಡಿಓ ಪಿ.ಲಕ್ಷö್ಮಣ್ ಅವರ ಅಧ್ಯಕ್ಷತೆ ಯಲ್ಲಿ ವಿತರಿಸಲಾಯಿತು.

ಬಳಿಕ ಪಿಡಿಓ ಪಿ.ಲಕ್ಷö್ಮಣ್ ಮಾತನಾಡಿ ಒಕ್ಕೂಟದ ಸಂಘಗಳಿಗೆ ಕೃಷಿ ಚಟುವಟಿಕೆ ಕೈಗೊಳ್ಳಲು ವೈಯಕ್ತಿಕ ಸೌಲಭ್ಯಗಳಲ್ಲಿ ಜಮೀನುಗಳಿಗೆ ಅಡಿಕೆ, ತೆಂಗು, ಪಾಪಯ, ಮನೆಗಳಲ್ಲಿ ಕೈತೋಟಗಳನ್ನು ನಿರ್ಮಿಸಿಕೊಳ್ಳಲು ಒಟ್ಟು ೯ ಸಂಘಗಳ ಪೈಕಿ ತಲಾ ಒಂದಕ್ಕೆ ೧.೫೦ ಲಕ್ಷ ರೂ. ಸಾಲದ ಚೆÀಕ್‌ನ್ನು ವಿತರಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಮಹಿಳಾ ಒಕ್ಕೂಟದ ಅಧ್ಯಕ್ಷೆ ಶಿಲ್ಪಾ, ತಾಲ್ಲೂಕು ಸಂಯೋಜಕರಾದ ಗೀತಾ. ವಿಕ್ರಮ್, ಮೋಹನ್, ಆರೋಗ್ಯ ಇಲಾಖೆ ಸಂಪನ್ಮೂಲ ವ್ಯಕ್ತಿಗಳಾದ ವಿನೋದ, ಬೇಬಿ, ಸಂಘದ ಎಲ್ ಸಿ.ಆರ್.ಪಿ, ಕೃಷಿಸಖಿ, ಪಶುಸಖಿ, ಆರೋಗ್ಯ ಸಖಿ ಸಂಯೋಜಕರು, ಮೇಘನ ಮತ್ತಿತರರು ಹಾಜರಿದ್ದರು.