Friday, 22nd November 2024

₹400ರಂತೆ ಅಡುಗೆ ಅನಿಲ ಸಿಲಿಂಡರ್: ಬಿಆರ್‌’ಎಸ್‌ ಪ್ರಣಾಳಿಕೆ

ಹೈದರಾಬಾದ್: ತೆಲಂಗಾಣದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಅರ್ಹ ಕುಟುಂಬಗಳಿಗೆ ₹400ರಂತೆ ಅಡುಗೆ ಅನಿಲ ಸಿಲಿಂಡರ್ ನೀಡುವುದಾಗಿ ಭಾರತ ರಾಷ್ಟ್ರ ಸಮಿತಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.

ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ (ಕೆಸಿಆರ್‌) ಅವರು ಪ್ರಣಾಳಿಕೆ ಯನ್ನು ಬಿಡುಗಡೆ ಮಾಡಿದ್ದಾರೆ. ನವೆಂಬರ್ 30ರಂದು ತೆಲಂಗಾಣ ವಿಧಾನಸಭೆ ಚುನಾವಣೆ ನಡೆಯಲಿದ್ದು, ಡಿಸೆಂಬರ್‌ 3ರಂದು ಮತ ಎಣಿಕೆ ನಡೆಯಲಿದೆ.

ಪ್ರಣಾಳಿಕೆ ಅಂಶಗಳು:

* ಎಲ್ಲ ಅರ್ಹರಿಗೆ ₹15 ಲಕ್ಷ ಮೊತ್ತದ ವರೆಗೆ ಆರೋಗ್ಯ ವಿಮೆ ನೀಡುವುದು.

* ‘ರೈತ ಬಂಧು’ ಯೋಜನೆಯಡಿ ನೀಡಲಾಗುವ ಸಹಾಯಧನವನ್ನು ₹10,000ದಿಂದ ₹16,000ಕ್ಕೆ ಹೆಚ್ಚಳ.

* ದಿವ್ಯಾಂಗರಿಗೆ ನೀಡುವ ಸಾಮಾಜಿಕ ಭದ್ರತಾ ಪಿಂಚಣಿಯನ್ನು ₹6,000ಕ್ಕೆ ಹೆಚ್ಚಿಸುವುದು.

* ತೆಲಂಗಾಣದಲ್ಲಿ 93 ಲಕ್ಷ ಬಿಪಿಎಲ್ ಕುಟುಂಬಗಳಿಗೆ ಕೆಸಿಆರ್ ಬಿಮಾ ಯೋಜನೆಯಡಿ ₹5 ಲಕ್ಷ ವಿಮೆ ಸೌಲಭ್ಯ.

* ಪ್ರತಿ ಕುಟುಂಬಕ್ಕೆ ₹10 ಲಕ್ಷ ಅನುದಾನದ ‘ದಲಿತ ಬಂಧು’ ಯೋಜನೆ ಮುಂದುವರಿಕೆ.