ನವದೆಹಲಿ: ಹಿಂದೂಗಳು, ಜೈನರು, ಬೌದ್ಧರು ಹಾಗೂ ಸಿಖ್ಖರು ಧಾರ್ಮಿಕ ಸ್ಥಳಗಳನ್ನು ಸ್ಥಾಪನೆ ಮಾಡುವ ಹಾಗೂ ನಿರ್ವಹಣೆ ಮಾಡುವ ಹಕ್ಕು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ.
ಇದು ಶಾಸಕಾಂಗದ ವ್ಯಾಪ್ತಿಗೆ ಬರುತ್ತದೆ ಇದರಲ್ಲಿ ಪ್ರವೇಶಿಸಲು ನ್ಯಾಯಾಲಯ ಇಚ್ಛಿಸುವುದಿಲ್ಲ ಎಂದು ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ, ಉಪಾಧ್ಯಾಯರೇ, ಸೂಕ್ತ ಅರ್ಜಿ ಸಲ್ಲಿಕೆ ಮಾಡಿ. ಇದಕ್ಕೆ ಪರಿಹಾರ ನೀಡಲು ಸಾಧ್ಯವೇ,.? ಇಂಥಹ ಅರ್ಜಿಗಳನ್ನು ಹಿಂತೆಗೆದುಕೊಳ್ಳಿ. ಇವುಗಳಲ್ಲಿ ಯಾವುದೇ ಧಮ್ ಇಲ್ಲ. ಈ ಅರ್ಜಿಯು ವಿಚಾರಣೆಗೆ ಅರ್ಹವೇ ಅಲ್ಲ ಎಂದು ಹೇಳಿದೆ.
ಈ ಅರ್ಜಿಯನ್ನು ಸುಪ್ರೀಂಕೋರ್ಟ್ ವಕೀಲ ಆಶ್ವಿನಿ ಉಪಾಧ್ಯಾಯ ಸಲ್ಲಿಕೆ ಮಾಡಿದ್ದರು. ಮುಸ್ಲಿಮರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಂತೆ ಹಿಂದೂ ಗಳು, ಜೈನರು, ಬೌದ್ಧರು ಮತ್ತು ಸಿಖ್ಖರು ತಮ್ಮ ಧಾರ್ಮಿಕ ಸ್ಥಳಗಳನ್ನು ಸ್ಥಾಪಿಸುವ, ನಿರ್ವಹಿಸುವ ಮತ್ತು ನಿರ್ವಹಿಸುವ ಹಕ್ಕನ್ನು ನೀಡಬೇಕು ಎಂದು ಈ ಅರ್ಜಿಯಲ್ಲಿ ಒತ್ತಾಯಿಸಲಾಗಿತ್ತು.
ಈ ಅರ್ಜಿಯಲ್ಲಿ ಅಶ್ವಿನಿ ಉಪಾಧ್ಯಾಯ ದೇಶಾದ್ಯಂತ ಹಿಂದೂ ದೇವಾಲಯಗಳ ಮೇಲೆ ಸರ್ಕಾರದ ನಿಯಂತ್ರಣವನ್ನೂ ಅವರು ಪ್ರಶ್ನಿಸಿದ್ದರು. . ದೇಶದಾದ್ಯಂತ ಇರುವ ಸರಿಸುಮಾರು ಒಂಬತ್ತು ಲಕ್ಷ ಹಿಂದೂ ದೇವಾಲಯಗಳಲ್ಲಿ ಸುಮಾರು ನಾಲ್ಕು ಲಕ್ಷವು ಸರ್ಕಾರದ ನಿಯಂತ್ರಣದಲ್ಲಿದೆ.