Saturday, 23rd November 2024

ಸಚಿನ್ ಅರ್ಧಶತಕ-ಮಿಚೆಲ್ ಶತಕ: ಶಮಿಗೆ ಐದು ವಿಕೆಟ್

ಧರ್ಮಶಾಲಾ: ಏಕದಿನ ವಿಶ್ವಕಪ್​ ಟೂರ್ನಿಯ ಮಹತ್ವದ ಪಂದ್ಯದಲ್ಲಿ ನ್ಯೂಜಿಲೆಂಡ್​ ವಿರುದ್ಧ ಭಾರತ ಟಾಸ್​ ಗೆದ್ದು ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ.

ಭಾನುವಾರದ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು, ಬೌಲಿಂಗ್ ಆಯ್ದುಕೊಂಡಿತು. ಆರಂಭದದಲ್ಲೇ ಎರಡು ವಿಕೆಟ್ ಕಿತ್ತ ಭಾರತಕ್ಕೆ ಬಳಿಕ ಸಚಿನ್ ಹಾಗೂ ಮಿಚೆಲ್ ಭರ್ಜರಿ ಜತೆಯಾಟದ ಮೂಲಕ ಮೇಲುಗೈ ಸಾಧಿಸಿದರು. ಇಬ್ಬರ ಅರ್ಧಶತಕಗಳ ನೆರವಿನಿಂದ ನ್ಯೂಜಿಲೆಂಡ್ ತಂಡ, ಈಗಾಗಲೇ ಏಳು ವಿಕೆಟ್ ನಷ್ಟಕ್ಕೆ 260 ರನ್‌ ಮಾಡಿದೆ. ತಂಡದಲ್ಲಿ ಮೊದಲ ಅವಕಾಶ ಪಡೆದ ವೇಗಿ ಮೊಹಮ್ಮದ್ ಶಮಿ ಐದು ವಿಕೆಟ್ ಕಿತ್ತರು. ಶಮಿಗೆ ಹ್ಯಾಟ್ರಿಕ್ ಅವಕಾಶವನ್ನು ಮತ್ತೋರ್ವ ಬ್ಯಾಟ್ಸ್ ಮನ್ ನಿರಾಕರಿಸಿದರು. ಸ್ಪಿನ್ನರ್‌ ಕುಲದೀಪ್ ಯಾದವ್ ಎರಡು ವಿಕೆಟ್ ಕಬಳಿಸಿದರೂ, ದುಬಾರಿಯಾದರು.

ಅದಕ್ಕೂ ಮುನ್ನ ರವೀಂದ್ರ ಜಡೇಜಾ ಸಚಿನ್ ಕ್ಯಾಚ್ ಚೆಲ್ಲಿದ್ದು, ಅದಕ್ಕೆ ಭಾರಿ ಬೆಲೆ ತೆರಬೇಕಾಯಿತು.

ಟೀಂ ಇಂಡಿಯಾದ ಆಟಗಾರರಲ್ಲಿ ಎರಡು ಬದಲಾವಣೆಗಳು ಆಗಿದ್ದು, ಮೊಹಮ್ಮದ್​ ಶಮಿ ಹಾಗೂ ಸೂರ್ಯಕುಮಾರ್ ಯಾದವ್ ಕಣಕ್ಕೆ ಇಳಿದಿದ್ದಾರೆ.

ಭಾರತ ಮತ್ತು ನ್ಯೂಜಿಲೆಂಡ್ ಉಭಯ ತಂಡಗಳು ವಿಶ್ವಕಪ್​ ಟೂರ್ನಿಯಲ್ಲಿ ಇದುವರೆಗೆ ಆಡಿದ ಎಲ್ಲ ನಾಲ್ಕು ಪಂದ್ಯಗಳನ್ನು ಗೆದ್ದಿವೆ.

ವಿಶ್ವಕಪ್ ಇತಿಹಾಸದಲ್ಲಿ ಭಾರತ ತಂಡದ ಮೇಲೆ ನ್ಯೂಜಿಲೆಂಡ್ ಮೈಲುಗೈ ಹೊಂದಿದೆ. ಇಲ್ಲಿಯವರೆಗೆ ಎರಡೂ ತಂಡಗಳು 9 ಬಾರಿ ಮುಖಾಮುಖಿ ಯಾಗಿವೆ. ಈ ಪೈಕಿ ನ್ಯೂಜಿಲೆಂಡ್ 5 ಬಾರಿ ಗೆದ್ದಿದ್ದರೆ, ಭಾರತ 3 ಬಾರಿ ಪಂದ್ಯವನ್ನು ಗೆದ್ದಿದೆ. ಉಳಿದಂತೆ 1 ಪಂದ್ಯ ಮಳೆಯಿಂದಾಗಿ ರದ್ದಾಗಿದೆ.

2019ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಎರಡೂ ತಂಡಗಳು ಕೊನೆಯದಾಗಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭಾರತವನ್ನು 18 ರನ್‌ಗಳಿಂದ ಸೋಲಿಸಿತ್ತು.

ತಂಡಗಳು ಇಂತಿವೆ:

ಭಾರತ: ರೋಹಿತ್​ ಶರ್ಮಾ(ನಾಯಕ), ಶುಭಮನ್​ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್​ ಕೀಪರ್​), ಸೂರ್ಯಕುಮಾರ್​ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲ್ದೀಪ್​ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ.

ನ್ಯೂಜಿಲೆಂಡ್: ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ/ವಿಕೆಟ್​ ಕೀಪರ್ ), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್