Thursday, 19th September 2024

ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್‌ಗೆ ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು: ಸ್ಯಾಂಡಲ್ವುಡ್ ನ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್‌ಗೆ ಶನಿವಾರ 28ನೇ ಹುಟ್ಟುಹಬ್ಬದ ಸಂಭ್ರಮ.

ಮೊದಲು ಕಿರುತೆರೆಯಲ್ಲಿ ನಟಿಸಿ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ‘ಬುಲ್ ಬುಲ್’ ಚಿತ್ರದ ಮೂಲಕ 2013 ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಟಿ ರಚಿತಾ ರಾಮ್ ಕನ್ನಡ ಚಿತ್ರರಂಗದಲ್ಲಿ ಇದೀಗ ಸಾಕಷ್ಟು ಬೇಡಿಕೆಯ ನಟಿ.

ಸ್ಯಾಂಡಲ್ವುಡ್ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ರಚಿತಾ ರಾಮ್ 1992 ಅಕ್ಟೋಬರ್‌ 3ರಂದು ಜನಿಸಿದರು.

ಐ ಲವ್ ಯೂ ಚಿತ್ರದ ಮೂಲಕ ವಿವಾದಕ್ಕೆ ಆಹಾರವಾದರೂ, ಕೆಲವೊಂದು ಉತ್ತಮ ಚಿತ್ರ ಗಳಲ್ಲಿ ನಟಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿ ಜತೆ ಸೀತಾರಾಮ ಕಲ್ಯಾಣ, ಪುನೀತ್‌ ರಾಜಕು ಮಾರ್‌ ಅವರೊಂದಿಗೆ ಚಕ್ರವ್ಯೂಹ, ನಟಸಾರ್ವಭೌಮ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್‌ ಜತೆ ಆಯುಷ್ಮಾನ್‌ ಭವ, ಕಿಚ್ಚ ಸುದೀಪ್‌ ಜತೆ ರನ್ನ, ಧ್ರುವ ಸರ್ಜಾ ಜತೆ ಭರ್ಜರಿ ಮುಂತಾದ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.