Sunday, 24th November 2024

ಶಾಲಾ ಪಠ್ಯಕ್ರಮದಲ್ಲಿ INDIA ಬದಲು ‘ಭಾರತ’ ಬಳಕೆಗೆ NCERT ಶಿಫಾರಸ್ಸು

ನವದೆಹಲಿ: ಜಿ20 ಶೃಂಗಸಭೆ 2023ರ ಸಂದರ್ಭದಲ್ಲಿ ದೇಶದ ಹೆಸರನ್ನು ಬದಲಾಯಿಸುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿತ್ತು.

INDIA ಬದಲು ‘ಭಾರತ’ ಎಂದು ಬರೆಯಲಾಗುವುದು ಎಂದು ಹೇಳಲಾಗಿತ್ತು. ಜಿ20 ರಾಷ್ಟ್ರಪತಿಗಳ ಭೋಜನಕೂಟದ ಆಹ್ವಾನ ಪತ್ರದಲ್ಲೂ INDIA ಬದಲಿಗೆ ಭಾರತ ಎಂದು ಬರೆಯಲಾಗಿತ್ತು.

ಈಗ ಶಾಲಾ ಪುಸ್ತಕಗಳಲ್ಲಿ ದೇಶದ ಹೆಸರನ್ನು ಬದಲಾಯಿಸಲು ಶಿಫಾರಸು ಮಾಡಲಾಗಿದೆ. ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್ಸಿಇಆರ್ಟಿ) ಉನ್ನತ ಮಟ್ಟದ ಸಮಿತಿಯು ಶಿಫಾರಸು ಮಾಡಿದೆ. ಸಮಿತಿಯ ಅಧ್ಯಕ್ಷ ಸಿಐ ಐಸಾಕ್ ಪ್ರತಿಕ್ರಿಯಿಸಿದ್ದು INDIA ಎಂಬ ಹೆಸರನ್ನು ಶಾಲಾ ಪಠ್ಯಕ್ರಮದಿಂದ ‘ಭಾರತ’ ಎಂದು ಬರೆಯಬೇಕು ಎಂದು ಹೇಳಿದ್ದಾರೆ.

ಪಠ್ಯಕ್ರಮದಿಂದ ಪ್ರಾಚೀನ ಇತಿಹಾಸವನ್ನು ತೆಗೆದುಹಾಕಿ ಅದರ ಬದಲಿಗೆ ‘ಶಾಸ್ತ್ರೀಯ ಇತಿಹಾಸ’ವನ್ನು ಕಲಿಸುವುದು ಮತ್ತೊಂದು ಶಿಫಾರಸು ಮಾಡಿ ದ್ದಾರೆ. ‘ಬ್ರಿಟಿಷರು ಕೊಟ್ಟ ಹೆಸರು INDIA, ಭಾರತ ದೇಶದ ಪ್ರಾಚೀನ ಹೆಸರು ಏಳು ಸದಸ್ಯರ ಸಮಿತಿಯು ಸರ್ವಾನುಮತದಿಂದ ಈ ಶಿಫಾರಸು ಮಾಡಿದೆ ಎಂದು ಐಸಾಕ್ ಹೇಳಿದರು. ಭಾರತವು ಹಳೆಯ ಹೆಸರು ಎಂದು ಅವರು ಹೇಳಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ನೀಡಿದ ಭೋಜನ ಆಹ್ವಾನದಲ್ಲಿ ‘President of India’ ಬದಲಿಗೆ ‘ಭಾರತದ ರಾಷ್ಟ್ರಪತಿ’ ಎಂದು ಬರೆಯಲಾಗಿತ್ತು. ಈ ಬಗ್ಗೆ ವಿರೋಧ ಪಕ್ಷಗಳು ಭಾರೀ ಗದ್ದಲ ಎಬ್ಬಿಸಿದವು. ನಂತರ G20 ವೇದಿಕೆಯಿಂದ ಪ್ರಧಾನಿ ಮೋದಿಯವರ ನಾಮಫಲಕದಲ್ಲಿ ‘ಭಾರತ’ ಎಂದು ಬರೆಯಲಾಗಿದೆ.