ಸಿರವಾರ: ಮುಂದಿನ ಮಳೆ ಬೆಳೆ ಬಗ್ಗೆ ಕಾರ್ಣಿಕ ( ಹೇಳಿಕೆ) ಹೇಳುವ ಮೂಲಕ ಈ ಭಾಗದಲ್ಲಿ ಐತಿಹಾಸಿಕ ಪ್ರಾಮುಖ್ಯತೆ ಪಡೆದಿರುವ ತಾಲೂಕಿನ ಹಳ್ಳಿ ಹೊಸೂರು ಗ್ರಾಮದ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ಬುಧವಾರ ವಿಜೃಂಭಣೆಯಿಂದ ನೆರವೇರಿತು.
ಕಾರ್ಣಿಕ ನುಡಿದ ಬೀರಪ್ಪ ಪೂಜಾರಿ, ಮುಂಗಾರಿಗೆ….ಹಿಂಗಾರಿಗೆ ಬಿಳಿ ಕೊಡೆ ನಡಾಕಿನಿ ಲಕ್ಷ್ಮಿ ಲೋಲ್ಯಾಡ್ಯಾಳ ಎಂದು ನುಡಿದರು.
ಜಾತ್ರಾ ಮಹೋತ್ಸವದಲ್ಲಿ ಕ್ಷೇತ್ರದ ಶಾಸಕರಾದ ಹಂಪಯ್ಯ ಸಾಹುಕಾರ್, ತಹಶೀಲ್ದಾರ್ ರವಿ ಎಸ್.ಅಂಗಡಿ, ಕಾಂಗ್ರೆಸ್ ಮುಖಂಡರಾದ ಶರಣಯ್ಯ ನಾಯಕ್, ಎಂ.ಪ್ರವೀಣ್ ಕುಮಾರ್, ಶಿವಕುಮಾರ್ ಅತ್ತನೂರು, ಶಿವಪ್ಪಗೌಡ ಹಾಗೂ ಗ್ರಾಮದ ಹಿರಿಯ ಮುಖಂಡರಾದ ಶರಣಪ್ಪಗೌಡ ಮತ್ತಿತರರು ಪಾಲ್ಗೊಂಡು ದೇವರ ದರ್ಶನ ಪಡೆದರು. ಜಾತ್ರಾ ಮಹೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಮಂದಿ ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.