Sunday, 15th December 2024

ವಾಲ್ಮೀಕಿ ಹಾಗೂ ರಾಮಾಯಣ: ಈ ಭುವನದ ಭಾಗ್ಯಗಳು

ಸಂಸ್ಮರಣೆ

ಬಸವನಗೌಡ ಹೆಬ್ಭಳಗೆರೆ

ಇಂದು ವಾಲ್ಮೀಕಿ ಜಯಂತಿ. ಭಾರತದಲ್ಲಿ ಅನೇಕ ಋಷಿಗಳು, ಕವಿಗಳೂ ಇದ್ದಾರೆ. ಆದರೆ ಒಬ್ಬ ಋಷಿ ಕವಿಯಾದದ್ದು, ಮಹಾನ್ ಕವಿಯಾ ದದ್ದು ವಾಲ್ಮೀಕಿ ಮಾತ . ಆದ್ದರಿಂದ ಇವರನ್ನು ಕವಿಋಷಿ, ರಸಋಷಿ ಎಂದೂ ಕರೆಯುತ್ತಾರೆ. ಕುವೆಂಪುರವರು ‘ರಾಮಾಯಣ ಎಂಬ ಮಹಾ ಕಾವ್ಯ, ವಾಲ್ಮೀಕಿ ಎಂಬ ಮಹಾಕವಿ ಈ ಎರಡೂ ಈ ಭುವನದ ಭಾಗ್ಯಗಳು’ ಎಂದಿದ್ದಾರೆ.

ರಾಮಾಯಣ- ಇದೊಂದು ಆದರ್ಶ ಜೀವನದ ನೀತಿ ನಿರೂಪಣೆಯ ಗ್ರಂಥ. ಇದು ಧರ್ಮಗ್ರಂಥ ಮಾತ್ರವಲ್ಲ. ಮಹಾಕಾವ್ಯ ಮಾತ್ರಾನಾ? ಅದೂ ಅಲ್ಲ! ಇದು ಸಂಸ್ಕಾರ- ವಿಕಾರಗಳ ನಡುವಿನ ಸಂಘರ್ಷವನ್ನು, ಒಳಿತು- ಕೆಡುಕುಗಳ ವ್ಯತ್ಯಾಸವನ್ನು ದರ್ಶನ ಮಾಡಿಸುವ, ನೀತಿ- ನಿಯಮಗಳನ್ನು ಅರಿಯುವಂತೆ ಮಾಡುವ ಮಹಾಗ್ರಂಥ. ಸುಂದರ ಬದುಕನ್ನು ಕಟ್ಟಿಕೊಳ್ಳಲು ಪ್ರೇರೇಪಿಸುವ ಗ್ರಂಥ. ಗುರು ಮಹಿಮೆ, ಅಣ್ಣ ತಮ್ಮಂದಿರ ಸಂಬಂಧ,
ಮಾತಾ-ಪಿತೃ ಪ್ರೇಮ, ಗುರು- ಶಿಷ್ಯ ಬಾಂಧವ್ಯ ಹೀಗೆ ಯಾವುದಿದೆ? ಯಾವುದಿಲ್ಲ? ಎಂಬಂತೆ ಎಲ್ಲಾ ಮೌಲ್ಯಗಳ ಸಂಪೂರ್ಣ ಪ್ಯಾಕೇಜ್ ಆಗಿರುವ ಮಹಾಗ್ರಂಥ.

ಯಾವುದೋ ಒಂದು ದೇಶ, ಧರ್ಮಕ್ಕಷ್ಟೇ ಸೀಮಿತವಾಗದೆ ಸರ್ವರೂ ಓದಬೇಕಾದ ಗ್ರಂಥ. ಇಂಥ ಅಮೂಲ್ಯ ಗ್ರಂಥವನ್ನು ನಮಗೆ ಕೊಟ್ಟ ವಾಲ್ಮೀಕಿ ಮಹರ್ಷಿಗಳು ಪ್ರಾತಃಸ್ಮರಣೀಯರು. ಕಾಳಿದಾಸ ಕವಿಯು ವಾಲ್ಮೀಕಿಯವರನ್ನು ‘ಕವಿಗಳ ಕವಿ ವಾಲ್ಮೀಕಿ’ ಎನ್ನುತ್ತಾರೆ. ಕುವೆಂಪುರವರು ‘ರಾಮಾಯಣ ಎಂಬ ಮಹಾಕಾವ್ಯ, ವಾಲ್ಮೀಕಿ ಎಂಬ ಮಹಾಕವಿ ಈ ಎರಡೂ ಈ ಭುವನದ ಭಾಗ್ಯಗಳು’ ಎಂದು ತಿಳಿಸುತ್ತಾರೆ.

ಶ್ರೀರಾಮರಕ್ಷಾ ಸ್ತೋತ್ರದ ಒಂದು ಶ್ಲೋಕದಲ್ಲಿ ‘ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಂ, ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿ ಕೋಕಿಲಮ್’ ಎಂದಿದೆ. ಇಲ್ಲಿ ಕವಿ ವಾಲ್ಮೀಕಿಯವರನ್ನು ಒಂದು ಕೋಗಿಲೆಗೆ ಹೋಲಿಸಿ ಬರೆದಿದ್ದಾರೆ. ‘ರಾಮ ರಾಮ ರಾಮ ಎಂದು ಕೂಗುತ್ತಿರುವ ಕೋಗಿಲೆಯು, ರಾಮಾಯಣ ಎಂಬ ಕವಿತಾಶಾಖೆಯ ಮೇಲೆ ಕುಳಿತು ಈಗಾಗಲೇ ಮಧುರವಾಗಿರುವ ರಾಮ ಎಂಬಕ್ಷರವನ್ನು ಮತ್ತಷ್ಟು ಮಧುರವಾಗಿ ಹಾಡುತ್ತಾ ಇದೆ’ ಎಂಬುದು ಇದರರ್ಥ.

ಹಿಂದೆ ತ್ರೇತಾಯುಗದ ಕಾಲದಲ್ಲಿ ಪ್ರಚೇತಸ ಎಂಬ ಋಷಿಯಿದ್ದರು. ಇವರ ಮಗನೇ ರತ್ನಾಕರ. ಇವನಿಗೆ ಪ್ರಾಚೇತಸ ಎಂದೂ ಕರೆಯುತ್ತಾರೆ. ಇವನೂ ತಂದೆಯ ಪೂಜೆ, ಯಜ್ಞ-ಯಾಗಾದಿಗಳಲ್ಲಿ ತೊಡಗಿಸಿಕೊಂಡಿರು ತ್ತಿದ್ದನು. ರತ್ನಾಕರನ ಮಡದಿಯೂ ದೈವಭಕ್ತೆಯಾಗಿದ್ದಳು. ಕಾಲಾನಂತರ, ಕೆಲ ಉಲ್ಲೇಖದ ಪ್ರಕಾರ, ರತ್ನಾಕರ ಕಾಡಿನಲ್ಲಿ ದಾರಿ ತಪ್ಪಿ ಬೇಡರ ಗುಂಪಿನಲ್ಲಿ ಬೆಳೆಯುತ್ತಾನೆ ಎಂದು ಹೇಳಲಾಗಿದೆ. ಕೆಲವೆಡೆ, ಒಮ್ಮೆ ಅವರ ತಾಯಿ ನದಿಯ ಸ್ನಾನಕ್ಕೆಂದು ಹೋದಾಗ ಪುಟ್ಟ ಮಗುವನ್ನು ನದಿಯ ದಡದಲ್ಲಿ ಮಲಗಿಸಿದ್ದಾಗ ಒಂದು ಹದ್ದು ಹಾರಿ ಬಂದು ಅವನನ್ನು ಎತ್ತಿಕೊಂಡು ಹೋಗಿ ಕಾಡಿನಲ್ಲಿ ಬೇಟೆಗಾರರ ಬಳಿಯಲ್ಲಿ ಬಿಡುತ್ತದೆ ಎಂದೂ ಹೇಳುತ್ತಾರೆ.

ಹಾಗೆ ಆ ಮಗು ಬೆಳೆಯುತ್ತ ಹೋಗುತ್ತದೆ. ಕಾಡಿನಲ್ಲಿ ಬೇಡರ ಗುಂಪು ಸೇರಿದ ಅವನು ತನ್ನ ಜೀವನೋಪಾಯಕ್ಕಾಗಿ ದರೋಡೆಕೋರನಾಗುತ್ತಾನೆ. ಕಾಡಿನ ಮಾರ್ಗಮಧ್ಯದಲ್ಲಿ ಬರುವ ದಾರಿಹೋಕರನ್ನು ಹೆದರಿಸಿ ಅವರ ಬಳಿಯಿ ದ್ದುದೆಲ್ಲವನ್ನೂ ದೋಚಿಕೊಂಡು ಬದುಕುತ್ತಿರುತ್ತಾನೆ. ಹೀಗೆ ಒಮ್ಮೆ ನಾರದ ಮಹರ್ಷಿಗಳು ಆ ದಾರಿಯಲ್ಲಿ ಬರುತ್ತಿದ್ದಾಗ ಅವರನ್ನು ಅಡ್ಡಗಟ್ಟಿ ದೋಚಲು ಮುಂದಾಗುತ್ತಾನೆ. ಆಗ ನಾರದರು, ‘ನೀನು ಈ ರೀತಿ ಹಿಂಸೆ ಮಾಡಿ
ಜನರ ಹಣ ದೋಚಿ ಪಾಪ ಮಾಡುತ್ತಿದ್ದೀಯಲ್ಲಾ, ನಿನ್ನ ಪಾಪದ ಫಲವನ್ನು ನಿನ್ನ ಮನೆಯವರು ಹಂಚಿ ಕೊಳ್ಳುವರಾ?’ ಎಂದು ಪ್ರಶ್ನಿಸುತ್ತಾರೆ. ಆಗ ಅವನು ‘ಯಾಕಿಲ್ಲ? ಖಂಡಿತಾ ಅವರೂ ಈ ಪಾಪದ ಫಲವನ್ನು ತೆಗೆದುಕೊಳ್ಳುವರು’ ಎಂದುತ್ತರಿಸುತ್ತಾನೆ.

ಆಗ ನಾರದರು, ‘ನೀನು ಮನೆಗೆ ಹೋಗಿ ಕೇಳಿಕೊಂಡು ಬಾ’ ಎಂದಾಗ, ರತ್ನಾಕರನು ಅವರನ್ನು ಒಂದು ಮರಕ್ಕೆ ಕಟ್ಟಿ ಹಾಕಿ ಮನೆಗೆ ಹೋಗಿ ತನ್ನ ಹೆಂಡತಿಯನ್ನು ಕೇಳಿದಾಗ ಅವಳು, ‘ನಿನ್ನ ಪಾಪದ ಫಲವನ್ನು ನಾವೇಕೆ ಸ್ವೀಕರಿಸಬೇಕು, ನೀನೇ ಅನುಭವಿಸು’ ಎನ್ನುತ್ತಾಳೆ. ಆಗ ಅವನು ಮರಳಿ ನಾರದರ ಬಳಿಗೆ ಬಂದು, ‘ಈ ಪಾಪವನ್ನು ಕಡಿಮೆ ಮಾಡಿಕೊಳ್ಳಲು ಏನು ಮಾಡಬೇಕು?’ ಎಂದು ಕೇಳಿದಾಗ ಅವರು, ‘ರಾಮ ಮಂತ್ರವನ್ನು ಜಪಿಸು’ ಎಂದರಂತೆ. ಆದರೆ ಅವನಿಗೆ ಅದನ್ನು ಉಚ್ಚರಿಸಲು ಕಷ್ಟವಾದಾಗ ನಾರದರು ‘ಮರಾ… ಮರಾ…’ ಎಂದು ಹೇಳಲು ತಿಳಿಸಿದರಂತೆ.

ಆಗ ರತ್ನಾಕರನು ಈ ರೀತಿಯಾಗಿ ಹೇಳುತ್ತಾ ಧ್ಯಾನಸ್ಥನಾಗಿ ಕುಳಿತ ನಂತೆ. ಅವನ ಮೇಲೆ ಒಂದು ಹುತ್ತವು ಬೆಳೆಯುತ್ತಾ ಹೋದರೂ ಅದರ ಪರಿವೆಯೇ ಇಲ್ಲದೆ ಧ್ಯಾನದಲ್ಲಿ ಕುಳಿತ್ತಿದ್ದನಂತೆ. ಕೆಲ ದಿನಗಳ ನಂತರ ನಾರದರು ಮರಳಿ ಬರುವಾಗ ‘ರಾಮ ರಾಮ..’ ಎಂಬ ಶಬ್ದವು ಹುತ್ತದೊಳಗಿನಿಂದ ಬರುತ್ತಿದ್ದು ದನ್ನು ಕೇಳಿಸಿತು. ಅವರು ಕಮಂಡಲದಿಂದ ನೀರನ್ನು ಪ್ರೋಕ್ಷಣೆ ಮಾಡಿದಾಗ ಹುತ್ತವೆಲ್ಲಾ ಕರಗಿ ಅದರಿಂದ ರತ್ನಾಕರ ಎದ್ದು ಬಂದನಂತೆ. ಹೀಗಾಗಿ ಅವನಿಗೆ ವಾಲ್ಮೀಕಿ ಎಂಬ ಹೆಸರು ಬಂತು ಎಂದು ಹೇಳುತ್ತಾರೆ. ಸಂಸ್ಕೃತದಲ್ಲಿ ಹುತ್ತಕ್ಕೆ ‘ವಲ್ಮೀಕ’ ಎನ್ನುತ್ತಾರೆ. ವಲ್ಮೀಕದಿಂದ ಉಗಮವಾದ್ದರಿಂದ ರತ್ನಾಕರನಿಗೆ ‘ವಾಲ್ಮೀಕಿ’ ಎಂಬ ಹೆಸರು ಬಂತೆಂದು ಹೇಳುತ್ತಾರೆ.

ವಾಲ್ಮೀಕಿಯವರು ಒಮ್ಮೆ ನದೀ ತಟದಲ್ಲಿ ಸ್ನಾನ ಮಾಡುತ್ತಿರುವಾಗ ಕ್ರೌಂಚ ಪಕ್ಷಿಗಳು ಪ್ರೇಮ ಸಲ್ಲಾಪದಲ್ಲಿ ತೊಡಗಿದ್ದವು. ವಾಲ್ಮೀಕಿ ಅದನ್ನು ನೋಡಿ ಸಂತಸದಿಂದ ಇದ್ದಾಗ ಒಬ್ಬ ಬೇಡನು ಗಂಡು ಕ್ರೌಂಚ ಪಕ್ಷಿಯನ್ನು ಬಾಣದಲ್ಲಿ ಗುರಿಯಿಟ್ಟು ಹೊಡೆದು ಕೊಂದನು. ಆಗ ಹೆಣ್ಣು ಪಕ್ಷಿ ದುಃಖಭರಿತವಾಗಿ ತನ್ನ ನೋವನ್ನು ವ್ಯಕ್ತಪಡಿಸುತ್ತಿತ್ತು. ಇದನ್ನು ನೋಡಿದ ವಾಲ್ಮೀಕಿ ಮಹರ್ಷಿಗೆ ತುಂಬಾ ಕೋಪ ಬಂದು ಅವನಿಗೆ ಶಾಪವಿತ್ತರು. ಆ ಶಾಪವು ಒಂದು
ಶ್ಲೋಕದ ರೂಪದಲ್ಲಿತ್ತು. ಅದರರ್ಥ: ‘ಎಲೈ ಬೇಡನೇ, ಕಾಮಮೋಹಿತನಾಗಿರುವ ಕ್ರೌಂಚ ದಂಪತಿಗಳಲ್ಲಿ ಒಂದನ್ನು ನೀನು ಕೊಂದೆಯಾದ್ದರಿಂದ ನೀನು ಬಹಳ ಕಾಲ ಬದುಕದಂಥ ಸ್ಥಿತಿಯನ್ನು ಪಡೆ’ ಎಂದು.

ಇದು ಛಂದೋ ಬದ್ಧವಾಗಿ ಪ್ರಾಸಬದ್ಧವಾಗಿ ಹೊರಹೊಮ್ಮಿದ್ದನ್ನು ಕಂಡು ಸ್ವತಃ ವಾಲ್ಮೀಕಿಗೆ ಆಶ್ಚರ್ಯವಾಗಿತ್ತಂತೆ. ತಮ್ಮ ಕುಟೀರಕ್ಕೆ ತೆರಳಿದಾಗಲೂ ವಾಲ್ಮೀಕಿ ಇದರ ಬಗ್ಗೆಯೇ ಆಲೋಚಿಸುತ್ತಾ ಕುಳಿತಿದ್ದರಂತೆ. ‘ಅಷ್ಟಕ್ಕೂ ತಾವು ಬೇಡನಿಗೆ ಶಾಪ ವಿತ್ತಿದ್ದೇಕೆ? ಬೇಟೆಯಾಡುವುದು ಅವನ ದಿನನಿತ್ಯದ
ಕಾರ್ಯವಲ್ಲವೇ?’ ಎಂದು ತಮ್ಮಷ್ಟಕ್ಕೆ ತಾವೇ ಅದರ ಬಗ್ಗೆ ಚಿಂತನೆ ಮಾಡುತ್ತಿದ್ದಾಗ ಬ್ರಹ್ಮ ಪ್ರತ್ಯಕ್ಷನಾಗಿ, ‘ಪಕ್ಷಿಯ ಮೇಲಿದ್ದ ಶೋಕ ನಿಮ್ಮ ಬಾಯಿಂದ ಶ್ಲೋಕವಾಗಿ ಬಂದಿದೆ.

ಈ ಶ್ಲೋಕ ಜಗತ್ತಿನ ಜನರ ಶೋಕವನ್ನು ಕಳೆಯುವ ಮಹಾಕಾವ್ಯವಾಗಲಿ. ನೀವು ರಾಮಾಯಣವನ್ನು ರಚಿಸಿ. ಸಾಕ್ಷಾತ್ ಸರಸ್ವತಿದೇವಿ ನಿಮ್ಮ ಬಾಯಿಂದ ಈ ಶ್ಲೋಕವನ್ನು ಹೇಳಿಸಿದ್ದಾಳೆ. ಇದು ನೀವು ಮುಂದೆ ರಚಿಸಲಿರುವ ರಾಮಾಯಣದ ೨೪,೦೦೦ ಶ್ಲೋಕಗಳಿಗೆ ನಾಂದಿ ಶ್ಲೋಕವಾಗಿ ಪರಿಣಮಿಸುತ್ತದೆ’ ಎಂದು ಹೇಳಿ ಅದೃಶ್ಯರಾದರಂತೆ. ಹೀಗೆ ವಾಲ್ಮೀಕಿ ರಾಮಾಯಣ ರಚಿಸಿದರು ಎಂಬ ಕಥೆಯಿದೆ. ನವಭಾರತದಲ್ಲಿ ಅನೇಕ ಋಷಿಗಳು ಇದ್ದಾರೆ. ಅದೇ ರೀತಿ ಕವಿಗಳೂ ಇದ್ದಾರೆ. ಆದರೆ ಒಬ್ಬ ಋಷಿ ಕವಿ ಯಾದದ್ದು, ಒಬ್ಬ ಋಷಿ ಮಹಾನ್ ಕವಿಯಾದದ್ದು ವಾಲ್ಮೀಕಿ ಮಾತ್ರ. ಆದ್ದರಿಂದ ಇವರನ್ನು ಕವಿಋಷಿ, ರಸಋಷಿ ಎಂದೂ ಕರೆಯುತ್ತಾರೆ.

ಇವರ ಬದುಕಿನ ವೃತ್ತಾಂತ ತಿಳಿಯುವುದಾದರೆ, ಇವರ ಬಗ್ಗೆ ರಾಮಾಯಣದಲ್ಲಿ ಹೆಚ್ಚೇನೂ ಮಾಹಿತಿ ಸಿಗದಿದ್ದರೂ ಉತ್ತರಕಾಂಡದಲ್ಲಿ ಕೊನೆಯಲ್ಲಿ ಸೀತೆಯನ್ನು ರಾಮನಿಗೆ ಒಪ್ಪಿಸುವ ಪ್ರಸಂಗ ದಲ್ಲಿ ವಾಲ್ಮೀಕಿ ಮಹರ್ಷಿಗಳು ತಮ್ಮನ್ನು ತಾವು ಪರಿಚಯಿಸಿಕೊಳ್ಳುವಾಗ ‘ನಾನು ಪ್ರಚೇತಸ ಎಂಬ ಮಹರ್ಷಿಯ ಹತ್ತನೇ ಮಗ’ ಎಂದು ಹೇಳಿಕೊಳ್ಳುವ ಸಂದರ್ಭ ಬರುತ್ತದೆ. ರಾಮಾಯಣ ಬರೆದ ವಾಲ್ಮೀಕಿ ತಾವು ಅದರ ಪಾತ್ರ ವಾಗಿಯೂ ಇದ್ದಾರೆ. ಅರಣ್ಯಕಾಂಡದಲ್ಲಿ ರಾಮ-ಲಕ್ಷ್ಮಣ -ಸೀತೆ ವನವಾಸ ಮಾಡುವಾಗ ವಾಲ್ಮೀಕಿ ಮಹರ್ಷಿಗಳ ಆಶ್ರಮಕ್ಕೆ ಹೋದರು ಎಂಬ ಪ್ರಸ್ತಾಪ ಬರುತ್ತದೆ. ನಂತರ
ವಿವರವಾಗಿ ಉತ್ತರಕಾಂಡದಲ್ಲಿ, ಗರ್ಭವತಿಯಾದ ಸೀತೆ ಯನ್ನು ಕಾಡಿಗೆ ಕಳಿಸಿದಾಗ ಅವಳನ್ನು ತಮ್ಮ ಮಗಳಂತೆ  ಪೋಷಿಸಿ ಅವರ ಮಕ್ಕಳಾದ ಲವ-ಕುಶರಿಗೆ ವಿದ್ಯಾಭ್ಯಾಸ ಕೊಡಿಸಿ ಅವರನ್ನು ಬೆಳೆಸಿದ್ದು ಇದೇ ವಾಲ್ಮೀಕಿ ಮಹರ್ಷಿಯೇ ಎಂದೂ ತಿಳಿಸಲಾಗಿದೆ.

ಕೊನೆಯಲ್ಲಿ ಯುದ್ಧವಾದಾಗ ಸೀತೆಯನ್ನು ಮರಳಿ ರಾಮನ ಜತೆ ಸೇರಿಸಬೇಕು ಎಂದು ವಾಲ್ಮೀಕಿ ಪ್ರಯತ್ನಿಸುತ್ತಾರೆ. ಆದರೆ ಸೀತೆಯು ಭೂದೇವಿಯ ಒಳಗೆ ಸೇರಿಕೊಳ್ಳುತ್ತಾಳೆ. ನಾವು ವಾಲ್ಮೀಕಿಯವರಿಂದ ಕಲಿಯಬೇಕಾದುದು ಬೇಕಾದಷ್ಟಿದೆ. ‘ಪ್ರತಿಯೊಬ್ಬ ಸಂತನಿಗೂ ಒಂದು ಗತಕಾಲವಿದೆ. ಪ್ರತಿಯೊಬ್ಬ ಕಳ್ಳನಿಗೂ ಒಂದು ಭವಿಷ್ಯವಿದೆ’ ಎಂಬು ದಕ್ಕೆ ಇವರ ಜೀವನವೇ ಸಾಕ್ಷಿ. ಇಂದು ನಾವು ಏನೋ ಆಗಿರಬಹುದು. ಆದರೆ ಬದಲಾವಣೆಗೆ ಅವಕಾಶವಿದೆ. ನಾವೂ ಅವರ ಆದರ್ಶಗಳನ್ನು ಅನುಸರಿಸೋಣ, ಸತ್ಪ್ರಜೆ ಗಳಾಗಿ ಬದಲಾಗೋಣ.

(ಲೇಖಕರು ಪ್ರೌಢಶಾಲಾ ಶಿಕ್ಷಕರು)