Sunday, 24th November 2024

ಯುವ ಮಹಿಳೆಯರಲ್ಲಿ ಹೆಚ್ಚುತ್ತಿರುವ ಹೃದಯಾಘಾತಗಳು ಎಚ್ಚರಿಕೆಯ ಗಂಟೆಗಳಾಗಿವೆ!

– ಡಾ. ನರಸಿಂಹ ಪೈ, ಹೃದಯರೋಗ ಶಾಸ್ತç ವಿಭಾಗದ ಸಮಾಲೋಚನಾತಜ್ಞರು ಮತ್ತು ವಿಭಾಗೀಯ ಮುಖ್ಯಸ್ಥರು, ಕೆಎಂಸಿ ಆಸ್ಪತ್ರೆ, ಮಂಗಳೂರು.

ವಿಶ್ವದ ಎಲ್ಲೆಡೆ ಹೃದಯ ರಕ್ತನಾಳಗಳ ರೋಗ(ಸಿವಿಡಿ) ಪ್ರಸ್ತುತ ಸಾವು ಮತ್ತು ವೈಕಲ್ಯಗಳ ಮುಂಚೂಣಿಯಕಾರಣವಾಗಿದೆ. ಸಿವಿಡಿಯಲ್ಲಿ ಮಯೋ ಕಾರ್ಡಿಯಲ್‌ಇನ್‌ಫಾರ್‌ಕ್ಷನ್ ಸೇರಿದ್ದು, ಇದರಲ್ಲಿ ಸಾಮಾನ್ಯವಾಗಿ ಹೃದಯಾಘಾತ, ಸ್ಕೊçÃಕ್, ಪೆರಿಫೆರಲ್ ವ್ಯಾಸ್ಕೂö್ಯಲಾರ್ ರೋಗಗಳು ಸೇರಿರು ತ್ತವೆ. ಇವು ಭಾರತದಎಲ್ಲೆಡೆ ವಾರ್ಷಿಕವಾಗಿ ಸುಮಾರು ಶೇ.೨೮ರಷ್ಟು ಸಾವುಗಳಿಗೆ ಕಾರಣವಾಗಿವೆ. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲುö್ಯಎಚ್‌ಒ) ಮತ್ತುಗ್ಲೋಬಲ್ ಬರ್ಡನ್‌ಆಫ್ ಡಿಸೀಸ್(ಜಿಬಿಡಿ) ಅಧ್ಯಯನಗಳು ಕಳೆದ ಕೆಲವು ದಶಕಗಳಲ್ಲಿ ಭಾರತದಲ್ಲಿಇಷೆಮಿಕ್ ಹೃದಯರೋಗದಿಂದ ಸಾವು ಮತ್ತು ವೈಕಲ್ಯ, ಹೊಂದಿಸಿಕೊಳ್ಳಬೇಕಾದ ಬದುಕಿನ ವರ್ಷಗಳು(ಡಿಎಎಲ್‌ವೈಎಸ್) ಹೆಚ್ಚಾಗುತ್ತಿರುವುದನ್ನು ವರದಿ ಮಾಡಿವೆೆ. ಯುರೋಪಿಯನ್ ವಂಶದಜನರಿಗೆ ಹೋಲಿಸಿದಲ್ಲಿ ಭಾರತೀಯರಿಗೆ ಕನಿಷ್ಟ ದಶಕಕ್ಕೂ ಮುಂಚಿತವಾಗಿ ಅ0ದರೆ ಅವರ ಅತ್ಯಂತ ಹೆಚ್ಚಿನಉತ್ಪಾದಕತೆ ಸಾಮರ್ಥ್ಯದ ಮಧ್ಯ ವಯಸ್ಸಿನ ಅವಧಿಯಲ್ಲಿ ಸಿವಿಡಿ ಹೆಚ್ಚಾಗಿ ಕಾಡುತ್ತದೆ. ಯುವಜನತೆಯಲ್ಲಿ ಸಿವಿಡಿ ಪ್ರಕರಣಗಳು ಬಹಳವಾಗಿ ಹೆಚ್ಚಿರುವುದಲ್ಲದೆ, ಜನಪ್ರಿಯ ನಂಬಿಕೆಗೆ ವಿರುದ್ಧವಾಗಿಯುವ ಮಹಿಳೆಯರಲ್ಲಿ ಇದು ಅಪಾರವಾಗಿ ಹೆಚ್ಚುತ್ತಿದೆ.

ಹೃದಯ ರಕ್ತನಾಳಗಳ ರೋಗದಅಪಾಯದ ಅಂಶಗಳನ್ನು ಎರಡು ವಿಧಗಳಲ್ಲಿ ವಿಂಗಡಿಸಬಹುದು. ಇವುಗಳೆಂದರೆ ಮಾರ್ಪಡಿಸಬಹುದಾದ ಮತ್ತು ಮಾರ್ಪಡಿಸಲಾಗದ ವರ್ಗಗಳಾಗಿರುತ್ತವೆ. ಬದಲಿಸಲಾಗದಅಪಾಯದ ಅಂಶಗಳಲ್ಲಿ ಋತುಬಂಧ ಪೂರ್ವ ಮಹಿಳೆಯರಿಗಿಂತ ಪುರುಷರು ಈ ರೋಗ ದಿಂದ ಹೆಚ್ಚು ಪೀಡಿತರಾಗುತ್ತಿರುವುದು, ಕುಟುಂಬದಲ್ಲಿರೋಗದಇತಿಹಾಸ, ಹೆಚ್ಚುತ್ತಿರುವ ವಯಸ್ಸು ಸೇರಿರುತ್ತವೆ. ಇನ್ನೊಂದಡೆ ಬದಲಿಸ ಬಹುದಾದ ಅಪಾಯದ ಅಂಶಗಳಲ್ಲಿ ಬೊಜ್ಜು ಮೈ ಅಥವಾ ಸ್ಥೂಲಕಾಯ, ಕಡಿಮೆ ಸಾಮಾಜಿಕ, ಆರ್ಥಿಕ ಅಂತಸ್ತು, ಟಿವಿ, ಮೊಬೈಲ್, ಕಂಪ್ಯೂಟರ್‌ಗಳನ್ನು ಹೆಚ್ಚಾಗಿ ವೀಕ್ಷಿಸುವುದು ಮತ್ತು ಒತ್ತಡಗಳು ಸೇರಿರುತ್ತವೆ. ಆದರೆ, ವೈಷ್ಣವ ನಡೆಸಿದ ಅಧ್ಯಯನವುಯುವ ಮಹಿಳೆಯರಲ್ಲಿ ಇಂತಹ ಅಪಾಯದ ಅಂಶಗಳು ಎಚ್ಚರಿಕೆ ಮೂಡಿಸುವಷ್ಟುಉನ್ನತ ಪ್ರಮಾಣದಲ್ಲಿಕಂಡು ಬ0ದಿರುವುದನ್ನು ತೋರಿಸಿದೆ. ಅದರಲ್ಲಿಯೂ ವಿಶೇಷವಾಗಿ ಭಾರತದ ಮೆಟ್ರೊ ಪಾಲಿಟನ್ ನಗರಗಳಲ್ಲಿ ಇದು ಹೆಚ್ಚಾಗಿದೆ. ಇದು ಹೃದಯ ರಕ್ತನಾಳಗಳಿಂದ ಉಂಟಾಗುವ ವೈಫಲ್ಯಗಳು ಸನ್ನಿಹಿತವಾಗುತ್ತಿರುವುದನ್ನು ಸೂಚಿಸುತ್ತದೆ. ಕಿರಣ್‌ಗೌರ್‌ಅವರ ಮತ್ತೊಂದುಅಧ್ಯಯನವು ಪುರುಷರಿಗಿಂತ ಮಹಿಳೆಯರ ಮೇಲೆ ಇಷೆಮಿಕ್ ಹೃದಯರೋಗ ಪರಿಣಾಮ ಉಂಟು ಮಾಡುತ್ತದೆ ಎ0ಬುದನ್ನು ನಿರೂಪಿಸಿದೆ. ಇದಕ್ಕೆ ಬದಲಾಯಿಸಬಹುದಾದಅಪಾಯದ ಅಂಶಗಳು ಹೆಚ್ಚಾಗುತ್ತಿರುವುದು ಕಾರಣವಾಗಿದೆ.

೨೦೧೫-೨೦೧೬ರ ವರ್ಷಗಳಲ್ಲಿ ನಡೆಸಲಾದರಾಷ್ಟಿçÃಯಕುಟುಂಬ ಆರೋಗ್ಯ ಸಮೀಕ್ಷೆಗಳ ಪ್ರಕಾರ ಶೇ.೬.೮ರಷ್ಟು ಮಹಿಳೆಯರು ತಂಬಾಕು ಸೇವಿಸು ವರು, ಶೇ. ೫೬.೨ರಷ್ಟು ಮಹಿಳೆಯರು ಅಶುದ್ಧ ಇಂಧನಗಳ ನಡುವೆ ಕೆಲಸ ಮಾಡುವರು, ಶೇ.೨೦.೬ರಷ್ಟು ಮಹಿಳೆಯರು ಸ್ಥೂಲಕಾಯ/ಬೊಜ್ಜು ಮೈ ಹೊಂದಿರುವರಲ್ಲದೆ, ಇವರೆಲ್ಲರೂಇಷೆಮಿಕ್ ಹೃದಯರೋಗದಿಂದ ಪೀಡಿತರಾಗುವರು. ಈ ಅಪಾಯ ಯುವಕಾರ್ಯನಿರತ ಜನಸಂಖ್ಯೆಯಲ್ಲಿ ಈ ಅಪಾಯ ಅತ್ಯುನ್ನತ ಮಟ್ಟದ್ದಾಗಿದೆ. ಇದು ಸಮಾಜದಲ್ಲಿ ದುರಂತ ಪರಿಣಾಮಗಳಿಗೆ ದಾರಿಯಾಗುವಂತಹ ಹಾಗೂ ದುರ್ಬಲ ಗೊಳಿಸುವ ಅಸ್ವಸ್ಥತೆಗಳು ಯುವಜನತೆಯನ್ನು ಕಾಡಲು ದಾರಿ ಮಾಡಿಕೊಡಲಿದೆ.

ಪುರುಷರಿಗೆ ಹೋಲಿಸಿದಲ್ಲಿ ಸಿಗರೇಟು ಸೇವನೆಯಿಂದಾಗಿ ಮಹಿಳೆಯರಲ್ಲಿ ಶೇ.೨೫ರಷ್ಟು ಸಿವಿಡಿ ಅಪಾಯ ಹೆಚ್ಚುತ್ತಿದೆ. ಧೂಮಪಾನದ ಜೊತೆಗೆ ಗರ್ಭ ನಿರೋಧಕ ಮಾತ್ರೆಗಳನ್ನು ಸೇವಿಸುವುದು ಸಿವಿಡಿಯ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇತರೆ ದೇಶಗಳ ಮಹಿಳೆಯರಿಗೆ ಹೋಲಿಸಿದಲ್ಲಿ ಭಾರತೀಯ ಮಹಿಳೆಯರಲ್ಲಿ ಮಧುಮೇಹದ ಪ್ರಕರಣಗಳು ಕೂಡ ಹೆಚ್ಚಿನ ಮಟ್ಟದಲ್ಲಿವೆ. ಅಂತಾರಾಷ್ಟಿçÃಯ ಮಧುಮೇಹಒಕ್ಕೂಟ ಮತ್ತು ಪ್ರೋ ಗ್ರಾಮ್ ಫಾರ್‌ಡೆಮೊಗ್ರಾಫಿಕ್‌ಅಂಡ್ ಹೆಲ್ತ್ ಸರ್ವೇಸ್ ಪ್ರಕಾರ ಮಧುಮೇಹಇರುವ ಮಹಿಳೆಯರ ಜಾಗತಿಕ ಸರಾಸರಿ ಶೇ.೯ರಷ್ಟು ಇದ್ದರೆ, ಭಾರತೀಯ ಮಹಿಳೆಯರಲ್ಲಿ ಇದು ಸುಮಾರು ಶೇ.೧೨ರಷ್ಟಿದೆ.

ಮಹಿಳೆಯರ ಹೃದಯ ರಕ್ತನಾಳಗಳ ಆರೋಗ್ಯದ ಮೇಲೆ ಪರಿಣಾಮಉಂಟುಮಾಡುವ, ಗರ್ಭಾವಸ್ಥೆ ಮತ್ತುಋತುಬಂಧದ ಸಮಯದಲ್ಲಿನ ಹಾರ್ಮೋನ್ ಬದಲಾವಣೆಗಳು ಈ ಸಮಸ್ಯೆಗೆಕಾರಣಎಂದು ನಾವು ಹೇಳಬಹುದು. ಗರ್ಭಾವಸ್ಥೆ ಸಂದರ್ಭದಲ್ಲಿನಮಧುಮೇಹ(ಗೆಸ್ಟೇಷನಲ್ ಡಯಾ ಬಿಟಿಸಿ) ಮತ್ತುಗರ್ಭಾವಸ್ಥೆ ಸಂದರ್ಭದಲ್ಲಿ ಹೆಚ್ಚಿನರಕ್ತದೊತ್ತಡ ಸಮಸ್ಯೆಗಳು(ಪ್ರೀ-ಎಕ್ಲಾಂಪ್ಸೀಯ ಮತ್ತುಗೆಸ್ಟೇಷನಲ್ ಹೈಪರ್‌ಟೆನ್ಷನ್) ಹೃದಯ ರೋಗದ ಅಪಾಯವನ್ನು ಹೆಚ್ಚಿಸಬಹುದು. ಅನಾರೋಗ್ಯಕರರೀತಿಯಎಸ್ಟೊçÃಜನ್‌ಆದಎಸ್ಟೊçÃನ್ ಹೆಚ್ಚಳ ಕೂಡ ಈ ತೊಂದರೆಗೆ ಮತ್ತೊಂದು ಕಾರಣವಾಗಬಹುದು. ಅನಾರೋಗ್ಯಕರಜೀವನಶೈಲಿಯ ಅಭ್ಯಾಸಗಳಿಂದಾಗಿ ಮಾನಸಿಕ ಸಾಮಾಜಿಕಒತ್ತಡ ಹೆಚ್ಚುತ್ತಿರುವಕಾರಣ ಫ್ಯಾಟ್ ಸೆಲ್ಸ್ಗಳಿಂದ ನೇರವಾಗಿಉತ್ಪಾದನೆಯಾಗುವಎಸ್ಟೊçÃಜೆನ್ ಮಟ್ಟಗಳಲ್ಲಿ ಹೆಚ್ಚಳ ಉಂಟಾಗುವುದರೊ0ದಿಗೆ ಪಿಸಿಒಎಸ್, ಬಂಜೆತನ, ಡಿಸ್ಲಿಪಿಡೆಮಿಯಾ ಗಳಂತಹ ಪರಿಸ್ಥಿತಿಗಳಿಗೆ ದಾರಿಯಾಗುತ್ತಿದೆ.

ಭಾರತದಲ್ಲಿ ಸಿವಿಡಿಯ ಪ್ರಕರಣಗಳು ಮಹಾಮಾರಿಗಿಂತಲೂಕಡಿಮೆ ಏನಿಲ್ಲ. ಮಹಿಳೆಯರಲ್ಲಿ ಸಿವಿಡಿ ಹೆಚ್ಚುತ್ತಿರುವುದು ಸದ್ದಿಲ್ಲದೆ ನಮ್ಮನ್ನು ಆವರಿಸು ತ್ತಿರುವ ಬೆದರಿಕೆಯಾಗಿದೆ. ರೋಗವನ್ನು ತಡೆಯುವ ಮತ್ತುಆರಂಭದಲ್ಲಿಯೇ ಪತ್ತೆ ಮಾಡಿ ರೋಗನಿರ್ಣಯ ಕೈಗೊಳ್ಳುವ ಕ್ರಮಗಳನ್ನು ಈ ಕೆಳಗಿನ ಹಂತಗಳಲ್ಲಿ ವಿಂಗಡಿಸಬಹುದಾಗಿದೆ.

೧. ವೈಯಕ್ತಿಕವಾಗಿ ನಿಮ್ಮ ಆರೋಗ್ಯ ತಪಾಸಕರೊಂದಿಗೆ ನಿಗದಿತ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಅವಶ್ಯಕವಾಗಿರುತ್ತದೆ. ಅಪಾಯದ ಅಂಶ ಗಳನ್ನು ಅದರಲ್ಲೂ ವಿಶೇಷವಾಗಿ ಬದಲಾಯಿಸಬಹುದಾದಅಪಾಯದ ಅಂಶಗಳನ್ನು ಗುರುತಿಸುವುದು ಮತ್ತುಅದಕ್ಕೆ ಸೂಕ್ತವಾದ ಮತ್ತು ವೈಯಕ್ತೀ ಕರಿಸಿದ ಪರಿಹಾರಗಳನ್ನು ಕೈಗೊಳ್ಳುವುದು ಮುಖ್ಯವಾಗಿರುತ್ತದೆ. ಇದಕ್ಕಾಗಿ ಆರೋಗ್ಯ ಸೇವಾ ವೃತ್ತಿಪರರ ಜೊತೆಗೆ ಕ್ರಮ ಕೈಗೊಳ್ಳುವುದು ಪ್ರಯೋಜನ ಕಾರಿಯಾಗಿರುತ್ತದೆ.
೨. ಸಾಂಸ್ಥಿಕ ಮಟ್ಟದಲ್ಲಿ ಸಾಕಷ್ಟು ಆರೋಗ್ಯ ಸಾಕ್ಷರತೆಯನ್ನು ಪೂರೈಸುವುದು, ಸಾಮಾಜಿಕ-ಆರ್ಥಿಕಅಂತಸ್ತನ್ನು ಹೊರತುಪಡಿಸಿ ಎಲ್ಲಾ ಮಹಿಳೆಯ ರಿಗೆ ಆರೋಗ್ಯ ಸಮಾನತೆಯನ್ನು ಸಾಧಿಸುವುದನ್ನು ಕೇಂದ್ರೀಕರಿಸಿದ ಸಹಯೋಗಪೂರ್ಣ ಪ್ರಯತ್ನಗಳನ್ನು ಕೈಗೊಳ್ಳುವುದು. ವೈದ್ಯಕೀಯ ಪರೀಕ್ಷೆ ಗಳನ್ನು ಹೆಚ್ಚಿಸುವುದು, ಹೆಚ್ಚಿನಅಪಾಯದ ಅಂಶಗಳನ್ನು ಪ್ರದರ್ಶಿಸುವವರಿಗೆ ಆದಷ್ಟು ಮುಂಚಿತವಾಗಿಚಿಕಿತ್ಸೆ ಕಾರ್ಯಕ್ರಮಗಳನ್ನು ಕೈಗೊಳ್ಳುವುದು ಮತ್ತು ಮಹಿಳೆಯರಿಗೆ ತಮ್ಮಆರೋಗ್ಯದಕಡೆ ಗಮನ ನೀಡಿಅದರ ನಿಯಂತ್ರಣ ಕೈಗೆತ್ತಿಕೊಳ್ಳುವಂತೆ ತಿಳಿಸುವುದು ಅತ್ಯಂತ ಅವಶ್ಯಕವಾಗಿದೆ.
೩. ಮಹಿಳೆಯರ ಆರೋಗ್ಯಕ್ಕಾಗಿ ಸಮುದಾಯ ಬೆಂಬಲ ಕಾರ್ಯಕ್ರಮಗಳನ್ನು ನೀತಿರೂಪಿಸುವವರು ಪೋಷಸಬಹುದು. ಜೊತೆಗೆ ಉನ್ನತಅಪಾಯದ ಮಹಿಳೆಯರಲ್ಲಿ ಆರೋಗ್ಯ ವಿಮಾರಕ್ಷಣೆಯನ್ನು ಹೆಚ್ಚಿಸುವುದು, ಸಮುದಾಯ ಕಾರ್ಯಕ್ರಮಗಳಿಗೆ ನಿಧಿ ನೆರವು ಹಾಗೂ ಟೆಲಿಮೆಡಿಸಿನ್ ಕಾರ್ಯಕ್ರಮ ಗಳನ್ನು ಹೆಚ್ಚಿಸುವುದು, ಸಂಬAಧಿಸಿದ ಚಿಕಿತ್ಸೆಯನ್ನುಕೈಗೆಟುಕುವಂತೆ ಮತ್ತು ಸುಲಭವಾಗಿ ಸಮಯಕ್ಕೆ ಸರಿಯಾಗಿ ಲಭ್ಯವಾಗುವಂತೆ ಕಾರ್ಯಕ್ರಮಜಾರಿ ಮಾಡುವುದು ಮುಖ್ಯವಾಗಿರುತ್ತದೆ.