Saturday, 23rd November 2024

ಕಿವೀಸ್ ಗೆಲುವಿಗೆ 389 ರನ್ ಗುರಿ

ಹೈದರಾಬಾದ್​: ಐಸಿಸಿ ಏಕದಿನ ವಿಶ್ವಕಪ್​ನ 27ನೇಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೃಹತ್‌ ಮೊತ್ತ ಪೇರಿಸಿದೆ. ಎದುರಾಳಿ ಕಿವೀಸ್ ಗೆಲುವಿಗೆ 388 ರನ್ನುಗಳ ಗುರಿ ನಿಗದಿ ಮಾಡಿದೆ.

5 ಬಾರಿಯ ವಿಶ್ವ ಚಾಂಪಿಯನ್​ ಕಾಂಗರೂ ಪಡೆ​ ಧರ್ಮಶಾಲಾದಲ್ಲಿ ಅಕ್ಷರಶಃ ಕಿವೀಸ್‌ ದಾಳಿಯನ್ನು ಧೂಳಿಪಟ ಮಾಡಿತು. ವಿಶ್ವಕಪ್ ನಲ್ಲಿ ಮೊದಲ ಪಂದ್ಯವಾಡಿದ ಆರಂಭಿಕ ಟ್ರಾವಿಸ್ ಹೆಡ್ ಹಾಗೂ ಡೇವಿಡ್ ವಾರ್ನರ್‌ ಮೊದಲ ವಿಕೆಟಿಗೆ 175 ಜತೆಯಾಟ ನೀಡಿದರು. ಇವರ ಅಬ್ಬರಕ್ಕೆ ಆಸೀಸ್ ಮೊತ್ತ 450 ರ ಆಸುಪಾರು ದಾಟಬಹುದೆಂದು ನಿರೀಕ್ಷಿಸಲಾಗಿತ್ತು.

ಈ ಹೊತ್ತಿನಲ್ಲಿ ದಾಳಿಗಿಳಿದ ಪಾರ್ಟ್‌ ಟೈಂ ಸ್ಪಿನ್ನರ್‌ ಫಿಲಿಪ್ಸ್ ರನ್ ಹರಿವಿಗೆ ಕಡಿವಾಣ ಹಾಕಿದರು. ಆರಂಭಿಕರನ್ನು ಪೆವಿಲಿಯನ್ ದಾರಿ ತೋರಿಸಿದರು. ಮಾಜಿ ನಾಯಕ ಸ್ಮಿತ್(18) ಕೂಡ ಫಿಲಿಪ್‌ ಗೆ ಔಟಾದರು. ಬಳಿಕ ಬಂದವರು ಅರ್ಧಶತಕ ಕೂಡ ಬಾರಿಸದೆ, ಅಲ್ಪಮೊತ್ತಕ್ಕೆ ಕುಸಿದರು.

ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡ 5 ಪಂದ್ಯಗಳನ್ನು ಆಡಿ 4ರಲ್ಲಿ ಗೆಲುವು ಸಾಧಿಸಿ 8 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ಮೂರು ಪಂದ್ಯಗಳನ್ನು ಜಯಿಸಿ 6 ಅಂಕದೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

ಸೋಲಿನೊಂದಿಗೆ ಟೂರ್ನಿ ಆರಂಭ ಮಾಡಿದ ಆಸಿಸ್​ ತನ್ನ ಮುಂದಿನ ಮೂರು ಪಂದ್ಯಗಳಲ್ಲಿ ಸತತ ಗೆಲುವು ದಾಖಲಿಸುವ ಮೂಲಕ ಅದ್ಭುತ ಕಮ್​ಬ್ಯಾಕ್​ ಮಾಡಿದೆ.

ವಿಶ್ವಕಪ್‌ನಲ್ಲೂ ಕಿವೀಸ್‌ ವಿರುದ್ಧ ಆಸ್ಟ್ರೇಲಿಯಾ ಪ್ರಾಬಲ್ಯ ಸಾಧಿಸಿದೆ. ಈ ವರೆಗೂ ಉಭಯ ತಂಡಗಳು 11 ಬಾರಿ ವಿಶ್ವಕಪ್​ನಲ್ಲಿ ಮುಖಾಮುಖಿ ಯಾಗಿವೆ. ಇದರಲ್ಲಿ ಕಿವೀಸ್​ ಮೂರರಲ್ಲಿ ಮಾತ್ರ ಗೆದ್ದಿದೆ. ನ್ಯೂಜಿಲೆಂಡ್ 6 ವರ್ಷಗಳ ಹಿಂದೆ ಅಂದರೇ 2017 ರಲ್ಲಿ ಕೊನೆಯ ಬಾರಿಗೆ ಆಸ್ಟ್ರೇಲಿಯಾ ತಂಡವನ್ನು ಏಕದಿನ ಪಂದ್ಯದಲ್ಲಿ ಮಣಿಸಿತ್ತು.

ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಜೋಶ್ ಇಂಗ್ಲಿಸ್(ವಿ.ಕೀ), ಗ್ಲೆನ್ ಮ್ಯಾಕ್ಸ್‌ವೆಲ್, ಪ್ಯಾಟ್ ಕಮಿನ್ಸ್(ನಾಯಕ), ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್

ನ್ಯೂಜಿಲೆಂಡ್​: ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ/ವಿ.ಕೀ), ಗ್ಲೆನ್ ಫಿಲಿಪ್ಸ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್