Thursday, 19th September 2024

ವಿಶ್ವಕಪ್-2023: ಆರನೇ ಪಂದ್ಯ ಗೆದ್ದ ರೋಹಿತ್ ಪಡೆ, ಹಾಲಿ ಚಾಂಪಿಯನ್ ಔಟ್

ಲಖನೌ: ವಿಶ್ವಕಪ್-2023 ಟೂರ್ನಿಯಲ್ಲಿ ಭಾರತದ ಇಂಗ್ಲೆಂಡ್​ ವಿರುದ್ಧ ಅಮೋಘ ಗೆಲುವು ಸಾಧಿಸುವ ಮೂಲಕ ಸತತ 6 ಪಂದ್ಯ ಗೆದ್ದಿದೆ.

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ರೋಹಿತ್ ಪಡೆಯ ಅಬ್ಬರಕ್ಕೆ ಹಾಲಿ ಚಾಂಪಿಯನ್ ಆಂಗ್ಲರು 100 ರನ್​ಗಳ ಹೀನಾಯ ಸೋಲು ಅನುಭವಿಸಿದರು.

ಆಂಗ್ಲರನ್ನು 100 ರನ್​ಗಳಿಂದ ಮಣಿಸಿದ ಭಾರತಕ್ಕೆ ವಿಶ್ವಕಪ್​ನಲ್ಲಿ ಇದು ದಾಖಲೆಯ ಜಯವಾಗಿದೆ. ಈ ಗೆಲುವಿನೊಂದಿಗೆ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇಂಗ್ಲೆಂಡ್ 5ನೇ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದಿದೆ. ಅಲ್ಲದೆ, ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿಶ್ವಕಪ್ ಟೂರ್ನಿಯಿಂದಲೇ ಹೊರಗುಳಿದಿದೆ.

230 ರನ್​ಗಳ ಸಾಧಾರಣ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಭಾರತದ ಬೌಲರ್​ಗಳ ಮಾರಕ ದಾಳಿಗೆ ತತ್ತರಿಸಿತು. 34.5 ಓವರ್​ಗಳಲ್ಲಿ 129 ರನ್​ಗಳಿಗೆ ಆಲೌಟ್​ ಆಯಿತು. ಇಂಗ್ಲೆಂಡ್ ಪರ ಜೋ ರೂಟ್, ಬೆನ್ ಸ್ಟೋಕ್ಸ್, ಮಾರ್ಕ್ ವುಡ್ ಶೂನ್ಯಕ್ಕೆ ಔಟಾದರು. ಬೈರ್​ಸ್ಟೋ 14, ಮಲನ್ 16, ನಾಯಕ ಬಟ್ಲರ್ 10, ಮೋಯಿನ್ ಅಲಿ 15, ವೋಕ್ಸ್ 10 ಹಾಗೂ ಲಿವಿಂಗ್​​ಸ್ಟೋನ್ 27 ರನ್​ ಗಳಿಸಿದರು.

ಭಾರತದ ಪರ ಮೊಹಮ್ಮದ್ ಶಮಿ 4 ವಿಕೆಟ್ ಕಬಳಿಸಿದರು. ಜಸ್ಪ್ರೀತ್ ಬುಮ್ರಾ 3, ಕುಲ್​ದೀಪ್ ಯಾದವ್ 2 ಹಾಗೂ ರವೀಂದ್ರ ಜಡೇಜಾ ಒಂದು ವಿಕೆಟ್ ಪಡೆದು ಮಿಂಚಿದರು. ಭಾರತದ ಪರ ಆಕರ್ಷಕ ಅರ್ಧಶತಕ (87) ಸಿಡಿಸಿದ ನಾಯಕ ರೋಹಿತ್ ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Leave a Reply

Your email address will not be published. Required fields are marked *