ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಕ್ರಿಕೆಟ್ ದಿಗ್ಗಜ ಮಹೇಂದ್ರ ಸಿಂಗ್ ಧೋನಿಯನ್ನು ತನ್ನ ಬ್ಯಾಂಕ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಘೋಷಣೆ ಮಾಡಿದೆ.
ಎಸ್ಬಿಐ ಅಧ್ಯಕ್ಷ ದಿನೇಶ್ ಖಾರಾ, “ಎಸ್ಬಿಐನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಎಂಎಸ್ ಧೋನಿಯನ್ನು ನೇಮಕ ಮಾಡಲು ನಾವು ಸಂತೋಷ ಪಡುತ್ತೇವೆ. ತೃಪ್ತ ಗ್ರಾಹಕರಾಗಿ ಎಸ್ಬಿಐ ಜೊತೆಗಿನ ಧೋನಿ ಒಡನಾಟವು ನಮ್ಮ ಬ್ರ್ಯಾಂಡ್ನ ನೈತಿಕತೆಯ ಪರಿಪೂರ್ಣ ಸಾಕಾರಗೊಳಿಸುತ್ತದೆ,” ಎಂದು ಹೇಳಿದರು.
ಎಸ್ಬಿಐ ಬ್ರ್ಯಾಂಡ್ ಅಂಬಾಸಿಡರ್ ಆಗಿ, ಎಂಎಸ್ ಧೋನಿ ವಿವಿಧ ಮಾರ್ಕೆಟಿಂಗ್ ಮತ್ತು ಪ್ರಚಾರ ಅಭಿಯಾನಗಳಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
“ಒತ್ತಡದ ಸಂದರ್ಭಗಳಲ್ಲಿ ಹಿಡಿತ ಕಾಯ್ದುಕೊಳ್ಳುವ ಗಮನಾರ್ಹ ಸಾಮರ್ಥ್ಯ ಮತ್ತು ಸ್ಪಷ್ಟವಾದ ಆಲೋಚನೆ ಮಾಡುವ, ಒತ್ತಡದ ಅಡಿಯಲ್ಲಿದ್ದರೂ ಕ್ಷಿಪ್ರ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಧೋನಿ ಹೊಂದಿದ್ದಾರೆ. ಅವರನ್ನು ದೇಶಾದ್ಯಂತ ತನ್ನ ಗ್ರಾಹಕರು ಮತ್ತು ಪಾಲುದಾರರೊಂದಿಗೆ ಸಂಪರ್ಕಿಸುವುದು ಎಸ್ಬಿಐ ಆದರ್ಶ ಆಯ್ಕೆಯಾಗಿದೆ,” ಎಂದು ಕೂಡ ಬ್ಯಾಂಕ್ ಹೇಳಿಕೊಂಡಿದೆ.
ಇತ್ತೀಚೆಗೆ ರಿಲಯನ್ಸ್ ರಿಟೇಲ್ನ ಜಿಯೋಮಾರ್ಟ್ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿದೆ.