ತುಮಕೂರು : ನಗರದ ಪ್ರತಿಷ್ಠಿತ ಕಾಲೇಜುಗಳಲ್ಲೋಂದಾದ, ವರದರಾಜ ಕಾಲೇಜಿನಲ್ಲಿ ಸಿ ಪ್ರೋಗ್ರಾಮಿಂಗ್; ಅಂಡರ್ಸ್ಟ್ಯಾಂಡಿಂಗ್ ಅಂಡ್ ಚಾಲೆಂಜಸ್ ಈ ವಿಷಯ ಕುರಿತು ವಿಶೇಷ ಉಪನ್ಯಾಸವನ್ನು ಆಕಾಶ್ ಕಾಲೇಜಿನ ಅಕಾಡೆಮಿಕ್ ಹೆಡ್ ಶ್ರೀಯುತ ಭರತ್ ಭೂಷಣ್ ವಿದ್ಯಾರ್ಥಿಗಳಿಗೆ ಸಮರ್ಥವಾದ ತಂತ್ರಜ್ಞಾನದ ಆಳ ಮತ್ತು ವಿಸ್ತಾರವಾದ ಅರಿವನ್ನು ಪ್ರಸ್ತುತಪಡಿಸಿದರು.
ನಂತರ ವಿದ್ಯಾರ್ಥಿಗಳ ಪ್ರಶ್ನೋತ್ತರಗಳಿಗೆ ಸಮರ್ಥವಾಗಿ ಉತ್ತರಿಸುವುದರ ಮುಖಾಂತರ ಕಾರ್ಯಕ್ರಮವು ಯಶಸ್ವಿಯಾಯಿತು ಕಾರ್ಯಕ್ರಮದಲ್ಲಿ ವರದರಾಜ ಕಾಲೇಜಲ್ಲಿ ಪ್ರಾಂಶುಪಾಲರಾದಂತಹ ಡಾ.ಯೋಗೀಶ್ ಡಿ .ಪಿ. ಮತ್ತು ಅಧ್ಯಾಪಕರಾದ ಚಂದ್ರಶೇಖರ್ ಬಿ , ಕೇಶವಮೂರ್ತಿ, ಎಸ್, ದಿಲೀಪ್ ಮತ್ತುಅಧ್ಯಾಪಕೇತರರು ವರ್ಗದವರು ಹಾಗು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಯಾಗಿ ಆಯೋಜಿಸ ಲಾಯಿತು.