ಶ್ರೀನಗರ: ಹಿರಿಯ ಐಪಿಎಸ್ ಅಧಿಕಾರಿ ಆರ್ ಆರ್ ಸ್ವೇನ್ ಜಮ್ಮು-ಕಾಶ್ಮೀರದ ನೂತನ ಡಿಜಿಪಿಯಾಗಿ ಅಧಿಕಾರ ವಹಿಸಿಕೊಂಡಿ ದ್ದಾರೆ.
ಜಮ್ಮು-ಕಾಶ್ಮೀರದ ಡಿಜಿಪಿಯಾಗಿ ದೀರ್ಘಾವಧಿ ಸೇವೆ ಸಲ್ಲಿಸಿದ್ದ ದಿಲ್ಬಾಗ್ ಸಿಂಗ್ ಅವರ ನಿವೃತ್ತಿಯ ಹಿನ್ನೆಲೆಯಲ್ಲಿ, 1991 ರ ಬ್ಯಾಚ್ ಐಪಿಎಸ್ ಅಧಿಕಾರಿ ಆರ್ ಆರ್ ಸ್ವೇನ್ ನೂತನ ಡಿಜಿಪಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ನೂತನ ಡಿಜಿಪಿ, ತಾವು ಜಮ್ಮು-ಕಾಶ್ಮೀರದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡಿದ್ದಾರೆ. ಶ್ರೀನಗರದ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವೇನ್ ಅವರನ್ನು ಹಿರಿಯ ಅಧಿಕಾರಿಗಳು ಬರಮಾಡಿ ಕೊಳ್ಳುವ ಮೂಲಕ ಸ್ವಾಗತ ಕೋರಿ, ಗೌರವ ವಂದನೆ ಸಲ್ಲಿಸಿದರು. ಅಪರಾಧ ವಿಭಾಗದ ವಿಶೇಷ ಡಿಜಿ ಎ ಕೆ ಚೌಧರಿ, ಎಡಿಜಿಎಸ್ಪಿ ಎಸ್ಜೆಎಂ ಗಿಲಾನಿ, ಎಂಕೆ ಸಿನ್ಹಾ ಮತ್ತು ವಿಜಯ್ ಕುಮಾರ್ ಸೇರಿದಂತೆ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನವೆಂಬರ್ 2006 ರಲ್ಲಿ, ಸ್ವೈನ್ ಅವರು ಪ್ರತಿಷ್ಠಿತ ಹುದ್ದೆಗಳನ್ನು ಹೊಂದಿದ್ದರು.
ಜೂನ್ 2020 ರಲ್ಲಿ, ಅವರು ಸಿಐಡಿ ವಿಭಾಗದ ಮುಖ್ಯಸ್ಥರಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆ ಸೇರಿದರು.