Sunday, 15th December 2024

ಪ್ಯಾಲೆಸ್ಟೈನ್​ ಪರ ಘೋಷಣೆ: ಬಾವುಟ ಪ್ರದರ್ಶಿಸಿದ ನಾಲ್ವರ ಬಂಧನ

ಕೊಲ್ಕತ್ತಾ: ಈಡನ್​ ಗಾರ್ಡನ್ಸ್​​ನಲ್ಲಿ ನಡೆದ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ವಿಶ್ವಕಪ್​ ಪಂದ್ಯದಲ್ಲಿ ಪಾಕಿಸ್ತಾನ ಭರ್ಜರಿ ಗೆಲುವು ದಾಖಲಿ ಸಿತು. ಈ ಪಂದ್ಯದ ವೇಳೆ ಪ್ಯಾಲೆಸ್ಟೈನ್ ಪರ ಘೋಷಣೆ ಕೂಗಿ ಬಾವುಟ ಪ್ರದರ್ಶನ ಮಾಡಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ವಿಚಾರಣೆ ಮಾಡಿ ಬಿಡುಗಡೆಗೊಳಿಸಲಾಗಿದೆ.

ಈಡನ್​ ಗಾರ್ಡನ್ಸ್​ನಲ್ಲಿ ಪ್ಯಾಲೆಸ್ಟೈನ್​ ಪರ ಘೋಷಣೆ ಕೂಗಿದ ಮತ್ತು ಬಾವುಟ ಪ್ರದರ್ಶಿಸಿದ ನಾಲ್ವರನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ. ಬಂಧಿತರು ಯಾಕೆ ಕೃತ್ಯ ಎಸಗಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಕೋಲ್ಕತ್ತಾ ಪೊಲೀಸ್​ ಅಧಿಕಾರಿ ತಿಳಿಸಿದರು.

ಇಸ್ರೇಲ್​ ಮತ್ತು ಪ್ಯಾಲೆಸ್ಟೈನ್ ಹಮಾಸ್​ ಉಗ್ರರ ನಡುವೆ ಕಳೆದ ಅಕ್ಟೋಬರ್​ 7ರಿಂದ ಸಂಘರ್ಷ ನಡೆಯುತ್ತಿದೆ. ಹಮಾಸ್​ ಹೆಡೆಮುರಿ ಕಟ್ಟಲು ಮುಂದಾ ಗಿರುವ ಇಸ್ರೇಲ್​​ ಸೇನಾ ಪಡೆ ಗಾಜಾ ಪಟ್ಟಿ ಮೇಲೆ ದಾಳಿ ನಡೆಸುತ್ತಿದೆ. ಇಸ್ರೇಲ್​ ದಾಳಿಗೆ ಗಾಜಾ ಅಕ್ಷರಶಃ ಸ್ಮಶಾನದಂತಾಗಿದೆ. ಯುದ್ಧದಿಂದಾಗಿ ಗಾಜಾ ಒಂದರಲ್ಲೇ ಸುಮಾರು 8,500ಕ್ಕೂ ಅಧಿಕ ಜನರ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಒಂದೆಡೆ ಪ್ಯಾಲೆಸ್ಟೈನ್​ ಪರ ಘೋಷಣೆ ಕೂಗಿದ ನಾಲ್ವರನ್ನು ಬಂಧಿಸಿದ ಘಟನೆ ನಡೆದರೆ ಇನ್ನೊಂದೆಡೆ ಪಾಕ್​ ದಂಪತಿ ಪಾಕಿಸ್ತಾನ ತಂಡಕ್ಕೆ ಹುರಿ ದುಂಬಿಸಿದರು. ಪಾಕಿಸ್ತಾನದ ಕರಾಚಿ ಮೂಲದ ಸದ್ಯ ಅಮೆರಿಕದ ಸ್ಯಾನ್​ ಫ್ರಾನ್ಸಿಸ್ಕೋದಲ್ಲಿ ನೆಲೆಸಿರುವ ದಂಪತಿ ಪಾಕಿಸ್ತಾನ ತಂಡವನ್ನು ಪ್ರೋತ್ಸಾ ಹಿಸಲು ಈಡನ್​ ಗಾರ್ಡನ್ಸ್​ ಮೈದಾನಕ್ಕೆ ಬಂದಿದ್ದರು.