ಬೆಳೆಗಳ ಸಂರಕ್ಷಣೆಗಾಗಿ ಎನ್ ಎಸ್ ಬೋಸರಾಜು ಫೌಂಡೇಷನ್ ನಿಂದ ಮೋಡ ಬಿತ್ತನೆ
ರಾಯಚೂರು: ಜಿಲ್ಲೆಯಲ್ಲಿ ತೀವ್ರ ಬರದ ಹಿನ್ನೆಲೆ ರೈತರು ಬಿತ್ತಿದ ಬೆಳೆದು ನಿಂತ ಬಾಡುತ್ತಿರುವ ಬೆಳೆಗಳಾದ ಮೆಣಸಿನ ಕಾಯಿ, ಹತ್ತಿ, ಕಡಲೆ, ತೊಗರಿ ಸೇರಿದಂತೆ ವಿವಿಧ ಬೆಳೆಗಳ ಸಂರಕ್ಷಣೆಗಾಗಿ, ದೇಶದ ಬೆನ್ನೆಲುಬಾದ ರೈತರಿಗೆ ಆತ್ಮಸ್ಥೈರ್ಯ ತುಂಬಲು ಎನ್.ಎಸ್.ಬೋಸರಾಜು ಫೌಂಡೇಷನ್ ವತಿ ಯಿಂದ ಹಾಗೂ ಪಿಕೆಕೆ ಸಂಸ್ಥೆ ಸಹಯೋಗದೊಂದಿಗೆ ನಾಲ್ಕು ದಿನಗಳ ಕಾಲ ಸ್ವಂತ ಖರ್ಚಿನಲ್ಲಿ ಮಾಡುತ್ತಿರುವ ಮೋಡ ಬಿತ್ತನೆ ಕಾರ್ಯಕ್ಕೆ ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸ ರಾಜು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಪ್ರಕಾಶ ಕೋಳಿವಾಡ, ಕಾಂಗ್ರೆಸ್ ಮುಖಂಡರಾದ ಬಸನಗೌಡ ಬಾದರ್ಲಿ, ಶರಣಯ್ಯ ನಾಯಕ್, ವಸಂತ ನಾಯಕ್, ಬ್ರಿಜ್ಜೆಶ್ ಪಾಟೀಲ್ , ಶಿವಕುಮಾರ್ ಅರಕೇರಿ, ಅಮರೇಗೌಡ ಜಂಬಲದಿನ್ನಿ, ಅರುಣ ದೋತರಬಂಡಿ, ಮೊಹ್ಮದ್ ಶೈಬಾಜ್, ವಿಶ್ವೇಶ್ವರ ರಾವ್, ವೆಂಕಟರಾವ್, ಭಾರ್ಗವ್, ಬಸವರಾಜ್, ಜುಕುರು, ವೆಂಕಟೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.