Friday, 13th December 2024

ನವಂಬರ್ 8ರಂದು ರಾಜ್ಯಮಟ್ಟದ ದ.ಸಂ.ಸ ಪದಾಧಿಕಾರಿಗಳ ಅಧಿವೇಶನ: ಚೇಳೂರು ಶಿವನಂಜಪ್ಪ 

ಗುಬ್ಬಿ : ಪ್ರೊ.ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ರಾಜ್ಯಮಟ್ಟದ ಅಧಿವೇಶನವನ್ನು ನವೆಂಬರ್ 8 ಬುಧವಾರ ಬೆಳಿಗ್ಗೆ 11 ಗಂಟೆಗೆ ಕರ್ನಾಟಕ ರಾಜ್ಯ ನೌಕರರ ಸಂಘ (ಕಬ್ಬನ್ ಪಾರ್ಕ್) ಎಂ ಎಸ್ ಬಿಲ್ಡಿಂಗ್ ಎದುರು ವಿಧಾನಸೌಧ ರಸ್ತೆ ಬೆಂಗಳೂರಿನಲ್ಲಿ ನಡೆಯು ತ್ತಿದ್ದು ದಲಿತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಗುಬ್ಬಿ ತಾಲೂಕು ಸಂಚಾಲಕ ಚೇಳೂರು ಶಿವನಂಜಪ್ಪ ತಿಳಿಸಿದರು.
 ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಕಾರ್ಯಕ್ರಮವು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಎಂ ಗುರುಮೂರ್ತಿಯವರ ನೇತೃತ್ವದಲ್ಲಿ ಮತ್ತು ಅಧ್ಯಕ್ಷತೆಯಲ್ಲಿ ನಡೆಯಲಿದ್ದು,  ಪರಮಪೂಜ್ಯ ಶ್ರೀ ಶ್ರೀ ಷಡಕ್ಷರಿ ಮಹಾ ಸ್ವಾಮೀಜಿ ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ.
ಹಿರಿಯ ಖ್ಯಾತ ಸಾಹಿತಿ  ಎಲ್ ಹನುಮಂತಯ್ಯ ನವರು ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ.  ಜಿಲ್ಲಾ ಸಂಚಾಲಕರಾದ ಕುಂದೂರು ತಿಮ್ಮಯ್ಯನವರ ನೇತೃತ್ವದಲ್ಲಿ ಎಲ್ಲಾ ಪದಾಧಿಕಾರಿಗಳು ಭಾಗವಹಿಸಲಿದ್ದೇವೆ. ತಾಲೂಕಿನ ಸಮಸ್ತ ದಲಿತ ಬಾಂಧವರು ಹಾಗೂ ಪದಾಧಿಕಾರಿಗಳು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಿದೆ ಎಂದು ವಿನಂತಿಸಿದರು.
 ತಾಲೂಕು ಸಂಘಟನಾ ಸಂಚಾಲಕ ಲಕ್ಕೇನಹಳ್ಳಿ ನರಸಿಯಪ್ಪ ಮಾತನಾಡಿ 1974ರಲ್ಲಿ ಪ್ರೊಫೆಸರ್ ಬಿ ಕೃಷ್ಣಪ್ಪನವರು ದಲಿತ ಸಂಘರ್ಷ ಸಮಿತಿಯನ್ನು ಸ್ಥಾಪಿಸಿ ಅವರು ರೂಪಿಸಿದ್ದ ರೂಪರೇಷಗಳನ್ನು ಅಧಿವೇಶನದ ಮುಖೇನ ಜಾರಿಗೊಳಿಸಬೇಕೆಂದು ಇಡೀ ರಾಜ್ಯಾದ್ಯಂತ ಎಲ್ಲ ಜಿಲ್ಲಾ ಮತ್ತು ತಾಲೂಕು ಶಾಖೆ ಮತ್ತು ಕೇಂದ್ರಗಳಿಂದ ರಾಜ್ಯಮಟ್ಟದ ಬೃಹತ್ ಅಧಿವೇಶನವನ್ನು ಕರೆದಿದ್ದಾರೆ ಅದರಂತೆ ತಾಲೂಕಿನ ದಲಿತ ಬಾಂಧವರು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
 ಈ ಸಂದರ್ಭದಲ್ಲಿ ಸಂಘಟನಾ ಸಂಚಾಲಕ ನರೇಶ್ ಬಾಬು, ಹೋಬಳಿ ಸಂಚಾಲಕ ಪುಟ್ಟರಾಜು ಹಾಜರಿದ್ದರು.