ತಿರುವನಂತಪುರಂ: ಕೇರಳ ಸಚಿವಾಲಯಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಕೇರಳ ಪೊಲೀಸ್ ಪ್ರಧಾನ ಕಚೇರಿಗೆ ಬಾಂಬ್ ಬೆದರಿಕೆ ಧಮ್ಕಿ ಹಾಕಲಾಗಿದೆ.
ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ತಿರುವನಂತಪುರಂ ಪೊಲೀಸರು ಬಾಂಬ್ ನಿಷ್ಕ್ರಿಯ ದಳದೊಂದಿಗೆ ಕೇರಳ ಸಚಿವಾಲಯಕ್ಕೆ ಧಾವಿಸಿದ್ದಾರೆ.
ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳವು ಸಚಿವಾಲಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ನಡೆಸಿತು.
ಸೆಕ್ರೆಟರಿಯೇಟ್ ಕಾಂಪ್ಲೆಕ್ಸ್ ಒಳಗೆ ಸ್ಫೋಟಕಗಳನ್ನ ಸ್ಫೋಟಿಸಲಾಗುವುದು ಎಂದು ಕೇರಳ ಪೊಲೀಸ್ ಪ್ರಧಾನ ಕಚೇರಿಗೆ ಬೆದರಿಕೆ ಕರೆ ಬಂದಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸರು ನಿಲ್ಲಿಸಿದ್ದ ವಾಹನಗಳು ಮತ್ತು ಹತ್ತಿರದ ಅಂಗಡಿಗಳನ್ನು ಸಹ ಶೋಧಿಸಿದರು.
ಪೊಲೀಸರು ಸಚಿವಾಲಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ನಡೆಸಿದರು. ಇದು ನಕಲಿ ಬೆದರಿಕೆ ಕರೆ ಎಂದು ದೃಢಪಟ್ಟಿದೆ, ಕರೆ ಮಾಡಿದ ವ್ಯಕ್ತಿಯನ್ನ ಪೊಳಿಯೂರು ಪೊಲೀಸ್ ಠಾಣೆಯಲ್ಲಿ ವಶಕ್ಕೆ ಪಡೆಯಲಾಗಿದೆ” ಎಂದರು.