ಚರ್ಚಾ ವೇದಿಕೆ
ಎಸ್.ಜಿ.ಹೆಗಡೆ
ಯುವಜನರು ಎಷ್ಟು ಗಂಟೆ ಕೆಲಸ ಮಾಡಬೇಕು ಎನ್ನುವ ವಿಚಾರವನ್ನು ನಮ್ಮ ದೇಶದ ಜನಸಂಖ್ಯೆಯ ಹಿನ್ನೆಲೆಯಲ್ಲಿ ನೋಡುವುದು ಕುತೂಹಲಕಾರಿ. ಜಗತ್ತಿನ ಅತಿಹೆಚ್ಚು ಜನಸಂಖ್ಯೆಯ ದೇಶವಾಗಿರುವ ಭಾರತದಲ್ಲಿ ಯುವಸಮೂಹದ ಸಂಖ್ಯೆ ಹೆಚ್ಚು ಇದೆ. ಅದಕ್ಕೇ ನಮ್ಮದು ಯುವಶಕ್ತಿ ಸಂಪನ್ನ ದೇಶವಾಗಿದೆ. ದೇಶದ ಅಭಿವೃದ್ಧಿಯಲ್ಲಿ ಅದು ನಮ್ಮ ಬಹುದೊಡ್ಡ ಆಸ್ತಿ. ಇಷ್ಟು ದೊಡ್ಡ ಸಂಖ್ಯೆಯಲ್ಲಿರುವ ಯುವ ಜನತೆಯು ಅಽಕ ಸಮಯ ಕೆಲಸಮಾಡುವುದರ ಪರಿಣಾಮ ಹೇಗಿರಬಹುದು.
ಸುಪ್ರಸಿದ್ಧ ಐಟಿ ದಿಗ್ಗಜ ಇನ್ಫೋಸಿಸ್ ಸಂಸ್ಥೆಯ ಸಹ-ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿಯವರ ಇತ್ತೀಚಿನ ಹೇಳಿಕೆಯು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಹೇಳಿಕೆಯು ವಾರಕ್ಕೆ ೭೦ ಗಂಟೆ ಕೆಲಸ ಮಾಡುವ ಕುರಿತಾಗಿತ್ತು. ಇನ್ಫೋಸಿಸ್ ಸಂಸ್ಥೆಯನ್ನು ಹುಟ್ಟು ಹಾಕಿ, ಅದನ್ನು ಜಗತ್ತಿನ ಅಗ್ರಗಣ್ಯ ಸಂಸ್ಥೆಯಾಗಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ ನಾರಾಯಣ ಮೂರ್ತಿಯವರು ಕಾರ್ಪೊರೇಟ್ ಜಗತ್ತಿನಲ್ಲಿ ಒಬ್ಬ ಯುಗಪುರುಷರೇ. ಇನೋಸಿಸ್ ಸಂಸ್ಥೆಯ ಆಗಿನ ಹುಟ್ಟು, ಬೆಳವಣಿಗೆ, ಸಾಧನೆ ಮತ್ತು ಹೆಗ್ಗಳಿಕೆಯು ವ್ಯಾಪಾರಿ ಜಗತ್ತಿನಲ್ಲಿ ಬಹು ಅಪರೂಪ ವೆಂದೇ ಹೇಳಬೇಕು. ಇಂಥವು ಶತಮಾನ ದಲ್ಲಿ ಕೆಲವಷ್ಟೇ. ಇದಕ್ಕೆಲ್ಲ ಕಾರಣ, ಮುಖ್ಯವಾಗಿ ಸಂಸ್ಥಾಪ ಕರು ರೂಪಿಸಿದ ಕೆಲಸದ ಮಾದರಿಯೆಂದು ಹೇಳಬೇಕು. ನಾರಾಯಣ ಮೂರ್ತಿಯವರು ‘ಬೋಧಿಸುವ ಮುನ್ನ ಆಚರಣೆ’ ಮತ್ತು ‘ವಾಕ್ ದಿ ಟಾಕ್’ಗೆ ಹೆಸರಾದವರು. ಅದಕ್ಕೆಂದೇ ಅವರು ಹೇಳುವ
ವಿಚಾರಗಳನ್ನು ಕೈಗಾರಿಕೆ ಮತ್ತು ವ್ಯವಹಾರ ಜಗತ್ತಿನಲ್ಲಿ ವೇದವಾಕ್ಯದಂತೆ ಕಾಣಲಾಗುತ್ತದೆ.
ಆಡಳಿತ ವರ್ಗ ಮತ್ತು ಬುದ್ಧಿಜೀವಿಗಳ ವಲಯ ದಲ್ಲಿಯೂ ಅವರ ತತ್ತ್ವವು ವಿಶೇಷವಾದ ಮಹತ್ವ ವನ್ನು ಪಡೆಯುತ್ತದೆ. ಇನ್ಫೋಸಿಸ್‌ನ ಪೂರ್ವ ಸಿಎ-ಒ ಮತ್ತು ಪ್ರಸಿದ್ಧ ಮಣಿಪಾಲ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಮೋಹನ್ ದಾಸ್ ಪೈ ಅವರು ‘೩ ವನ್ ೪ ಕ್ಯಾಪಿಟಲ್’ ವತಿಯಿಂದ ನಡೆಸಿದ ಪಾಡ್‌ಕಾಸ್ಟ್‌ನ ‘ದಿ ರೆಕಾರ್ಡ್’ ಎಂಬ ಮೊದಲ ಉಪಾಖ್ಯಾನದಲ್ಲಿ ಇತ್ತೀಚೆಗೆ ಮಾತನಾಡಿದ ಮೂರ್ತಿಯವರು ಅನೇಕ ಪ್ರಮುಖ ವಿಷಯಗಳನ್ನು ಹಂಚಿಕೊಂಡರು. ಸೋಷಿಯಲಿಸಂನಿಂದ ಕ್ಯಾಪಿಟಲಿಸಂನತ್ತ ತಮ್ಮ ನಂಬಿಕೆ ವಾಲಿದ್ದು ಹೇಗೆ, ದೇಶಕ್ಕೆ ಬಂದ ನಿಜಾರ್ಥದ ಆರ್ಥಿಕ ಸ್ವಾತಂತ್ರ್ಯ, ತಂತ್ರಜ್ಞಾನವು ತಂದ ಸಮಾನತೆ ಹೀಗೆ ಅನೇಕ ವಿಷಯಗಳ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ‘ದೇಶವು ಶೀಘ್ರಗತಿಯಲ್ಲಿ ಇನ್ನೂ
ಹೆಚ್ಚಿನ ಅಭಿವೃದ್ಧಿಯನ್ನು ಕಾಣಬೇಕೆಂದರೆ, ನಮ್ಮ ಲ್ಲಿಯ ಕೆಲಸದ ಉತ್ಪಾದಕತೆ ಹೆಚ್ಚಬೇಕು.
ಯುವಜನರು ವಾರಕ್ಕೆ ೭೦ ಗಂಟೆ ಕೆಲಸ ಮಾಡಲು ಮುಂದೆ ಬರಬೇಕು. ಅವರು ಅತ್ಯಂತ ಕಠಿಣ ಪರಿಶ್ರಮದಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಸೂಚಿಸಿದರು. ಎರಡನೇ ಜಾಗತಿಕ ಯುದ್ಧದ ನಂತರ ಜರ್ಮನಿ ಮತ್ತು ಜಪಾನಿನ ಯುವಜನರು ಹಾಗೆ ದುಡಿದ ಕಾರಣದಿಂದಲೇ ಆ ದೇಶಗಳು ವೇಗದಿಂದ ಮುನ್ನಡೆ ಯುವಂತಾಯಿತು ಎನ್ನುವ ಉದಾಹರಣೆಯನ್ನೂ ಅವರು ಪ್ರಸ್ತಾಪಿಸಿದ್ದರು. ಅವರ ಈ ಅಭಿಪ್ರಾಯವು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ, ಸಾಕಷ್ಟು ಪ್ರಮಾಣದ ವಿರೋಧಿ ಅಲೆಯೂ ದಡವನ್ನು ಅಪ್ಪಳಿಸಿದೆ.
ಮೂರ್ತಿಯವರು ಹೇಳಿದ ವಿಚಾರವನ್ನು, ಅವರು ನಡೆದು ಬಂದ ದಾರಿಯ ಹಿನ್ನೆಲೆಯಲ್ಲಿ ನೋಡಬೇಕು. ಅದು ನಿಸ್ಸಂದೇಹವಾಗಿ ಕೆಲಸದ
ಕುರಿತ ಉನ್ನತ ಮಾರ್ಗದರ್ಶಿಯಾಗಿದೆ. ಮೈಸೂರಿನ ಶಿಡ್ಲಘಟ್ಟದ ಹಳ್ಳಿಯೊಂದರಲ್ಲಿ ಶಿಕ್ಷಕರೊಬ್ಬರ ಮಗ ನಾಗಿ ಜನಿಸಿದ ಮೂರ್ತಿಯವರು, ಪರಿಶ್ರಮ, ಛಲ, ದೃಢನಿಶ್ಚಯದ ತತ್ತ್ವವನ್ನು ನಂಬಿ ನಡೆದವರು. ಅಂಥ ವಿಚಾರಗಳ ಮೂರ್ತಿಯಾಗಿದ್ದಕ್ಕೇ ಇನೋಸಿಸ್‌ನಂಥ ಸಂಸ್ಥೆಯೊಂದು ಹುಟ್ಟಿ ಅವರ ಮಾರ್ಗದರ್ಶನ ಪಡೆದು ಇಷ್ಟೆಲ್ಲಾ ಬೃಹದಾಕಾರದಲ್ಲಿ ಸಾಕಾರವಾಯಿತು ಎನ್ನುವುದು ಎಲ್ಲರಿಗೂ ತಿಳಿದ ವಿಚಾರವೇ. ಮೂರ್ತಿಯವರು ಯಾವಾಗಲೂ ವಾರಕ್ಕೆ ೮೦-೯೦ ಗಂಟೆಗಳಷ್ಟು ಅವಧಿಯವರೆಗೆ ಕೆಲಸ ದಲ್ಲಿ ನಿರತರಾಗಿದ್ದುದರ ಕುರಿತು ಇತ್ತೀಚಿನ ಸಂದರ್ಶನವೊಂದರಲ್ಲಿ ಅವರ ಪತ್ನಿ ಸುಧಾ ಮೂರ್ತಿ ಯವರು ಹೇಳಿರುವುದನ್ನು ಇಲ್ಲಿ ಗಮನಿಸಬೇಕು.
ಯುವಜನರು ಎಷ್ಟು ಗಂಟೆ ಕೆಲಸ ಮಾಡಬೇಕು ಎನ್ನುವ ವಿಚಾರವನ್ನು ನಮ್ಮ ದೇಶದ ಜನಸಂಖ್ಯೆಯ ಹಿನ್ನೆಲೆಯಲ್ಲಿ ನೋಡುವುದು ಕುತೂಹಲಕಾರಿ.
ಜಗತ್ತಿನ ಅತಿಹೆಚ್ಚು ಜನಸಂಖ್ಯೆಯ ದೇಶವಾಗಿರುವ ಭಾರತದಲ್ಲಿ ಯುವಸಮೂಹದ ಸಂಖ್ಯೆ ಹೆಚ್ಚು ಇದೆ. ಅದಕ್ಕೇ ನಮ್ಮದು ಯುವಶಕ್ತಿ ಸಂಪನ್ನ ದೇಶವಾಗಿದೆ. ದೇಶದ ಅಭಿವೃದ್ಧಿಯಲ್ಲಿ ಅದು ನಮ್ಮ ಬಹುದೊಡ್ಡ ಆಸ್ತಿ. ಇಷ್ಟು ದೊಡ್ಡ ಸಂಖ್ಯೆಯಲ್ಲಿರುವ ಯುವ ಜನತೆಯು ಅಧಿಕ ಸಮಯ ಕೆಲಸಮಾಡುವುದರ ಪರಿಣಾಮ ಹೇಗಿರಬಹುದು! ಸುಮಾರು ೪೦ ಕೋಟಿ ಜನರು ಪ್ರತಿದಿನ ಒಂದು ಗಂಟೆ ಹೆಚ್ಚುವರಿ ಕೆಲಸ ಮಾಡುವುದರಿಂದ ೧.೬೬ ಕೋಟಿ ದಿವಸಗಳು ಅಂದರೆ ಸುಮಾರು ೪೫೬೬ ವರ್ಷಗಳನ್ನು ಹೆಚ್ಚುವರಿ ಪಡೆದಂತಾಗುತ್ತದೆ.
ಒಂದು ವರ್ಷಕಾಲ ದಿನಕ್ಕೆ ಒಂದೇ ಗಂಟೆ ಹೆಚ್ಚುವರಿ ಕೆಲಸಮಾಡಿದಾಗ ಎಷ್ಟು ಪೀಳಿಯ ಕೆಲಸವನ್ನು ಹೊಸ ಹೆಚ್ಚುವರಿಯಾಗಿ ಬಹುದು ಎಂಬುದು ಸುಲಭ ಗಣಿತವಷ್ಟೇ. ಹೆಚ್ಚು ಗಂಟೆ ಕೆಲಸ ಮಾಡುವ ವಿಚಾರವನ್ನು ಇಲ್ಲಿ ಪ್ರತ್ಯೇಕತೆಯಲ್ಲಿ ನೋಡದೆ ಅಂತರ್ವೇಶನದಲ್ಲಿ ನೋಡಬೇಕಾಗಿದೆ. ಅಂದರೆ ಕೆಲವೇ ಕೆಲಸದ ಮಾದರಿಗೆ ಸೀಮಿತವಾಗಿಸದೆ ಎಲ್ಲ ಮೂಲಭೂತ ಕಾರ್ಯಕ್ಷೇತ್ರಗಳಿಗೆ ಅನ್ವಯಿಸುವುದು. ಮುಖ್ಯ ಕ್ಷೇತ್ರಗಳೆಂದರೆ ಕೃಷಿ, ಹಣಕಾಸು ವ್ಯವಸ್ಥೆ, ಉತ್ಪಾದನೆ ಮತ್ತು ಸೇವೆ, ಶಿಕ್ಷಣ, ಸಾರಿಗೆ ಮತ್ತು ಆವಿಷ್ಕಾರ, ಮಾರಾಟ ಮತ್ತು ತಂತ್ರಜ್ಞಾನ ಇತ್ಯಾದಿ.
ಏಕೆಂದರೆ ಕಂಪ್ಯೂಟರ್ ಮೂಲವಾದ ಕೆಲಸದಂತೆ ಬೇರೆ ಬೇರೆ ಪ್ರಕಾರದ ಕೆಲಸ ಮಾದರಿಗಳೂ ಇಲ್ಲಿ ಪ್ರಮುಖ ವಾಗುತ್ತವೆ. ಪ್ರತಿಯೊಂದು ಕ್ಷೇತ್ರದಲ್ಲಿ ತನ್ನದೇ ಆದ ಕಾರ್ಯಸೂತ್ರವಿದೆ, ನಿಯಮಾವಳಿಗಳಿವೆ. ಶಿಕ್ಷಣ, ಸಾರಿಗೆ ಮತ್ತು ಹಣಕಾಸು ವ್ಯವಸ್ಥೆಯು ಕೆಲಸ ಮಾಡುವ ಅವಽಯು ಆಗಲೇ ಸಿದ್ಧ ಪ್ರಕ್ರಿಯೆಯನ್ನು ಒಳಗೊಂಡಿದೆ. ಇಂಥ ಕ್ಷೇತ್ರಗಳಲ್ಲಿ ಕೆಲಸದ ಅವಧಿಯಲ್ಲಿ ವ್ಯತ್ಯಯವಾಗಲು ಕೆಲಸ ಮಾಡುವ ಪರಿಯ ಕುರಿತು ವಿಶೇಷ ವಿಮರ್ಶೆ ಬೇಕು. ಫ್ಯಾಕ್ಟರಿ ಆಕ್ಟ್ ಕೆಲವು ಕ್ಷೇತ್ರಗಳಿಗೆ ಕೆಲಸ ಮಾಡುವ ಗಂಟೆಗಳ ಕುರಿತು ನಿಯಮಾವಳಿಗಳನ್ನು ವಿಧಿಸಿದೆ.
ನಿಯಮದ ಪ್ರಕಾರ ಕೆಲಸಗಾರರಿಗೆ ವಾರಕ್ಕೆ ೪೮ ಗಂಟೆಗಳ ಮಿತಿಯನ್ನು ಹೇಳಿದೆ. ಕೆಲ ರಾಜ್ಯಗಳಲ್ಲಿ ದಿನಕ್ಕೆ ೧೨ ಗಂಟೆಗಳ ಮಿತಿಯನ್ನು ನೀಡಲಾಗಿದೆ ಯಾದರೂ ವಾರಕ್ಕೆ ಕೆಲಸ ಮಾಡುವ ಮಿತಿ ಅದೇ ಸ್ಥಿರ ವಾಗಿದೆ. ನಿಯಮ ವಿಽಸಿರುವುದು ಶೋಷಣೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಂಬುದು ತಿಳಿದಿರುವ ವಿಚಾರವೇ. ಹಾಗಿರುವಾಗ ನಿಯಮಿತ ಮತ್ತು ಸಿದ್ಧ ಸಮಯದ ಕೆಲಸಗಳಿಗಿಂತ ಹೆಚ್ಚು ಅವಽಯ ಕೆಲಸ ಅನ್ವಯಿಸುವುದು ಹೇಗೆಂಬುದರ ಕುರಿತೂ ವ್ಯಾಪಕ ಚರ್ಚೆಯ ಅವಶ್ಯಕತೆಯಿದೆ.
ಹಾಗೆ ನೋಡಿದರೆ ನಮ್ಮ ಕೆಲಸಿಗರ ಪರಿಶ್ರಮವು ಗಂಟೆಗಳ ಲೆಕ್ಕದಲ್ಲಿ ಜಾಗತಿಕವಾಗಿ ಕಮ್ಮಿಯೇನೂ ಇಲ್ಲ. ‘ಇಂಟರ್‌ನ್ಯಾಷನಲ್ ಲೇಬರ್ ಆರ್ಗ
ನೈಸೇಷನ್’ ಡೇಟಾದ ಪ್ರಕಾರ ಭಾರತದ ಉದ್ಯೋಗಿ ಗಳು ವಾರಕ್ಕೆ ೪೮ ಗಂಟೆಗಳ ಕಾಲ ಕೆಲಸ ಮಾಡಿ ಜಗತ್ತಿನಲ್ಲಿ ಏಳನೇ ಸ್ಥಾನದಲ್ಲಿದ್ದು ಯುಎಇ ೫೨.೮ ಗಂಟೆ ಕೆಲಸ ಮಾಡಿ ಮೊದಲ ಸ್ಥಾನದಲ್ಲಿದೆ. ಕುತೂಹಲಕಾರಿ ಅಂಶವೆಂದರೆ ಕೆಲಸಾವಧಿ ಮತ್ತು ಉತ್ಪಾದಕತೆಯ ಕುರಿತಾದುದು. ಜಾಂಬಿಯ, ಭೂತಾನ್, ಲೆಸೊಥೊ, ಕೊಂಗೊ ಮೊದಲಾದ ದೇಶ ಗಳು ಹೆಚ್ಚು ಗಂಟೆ ಕೆಲಸಮಾಡುವ ಪಟ್ಟಿಯ ಮೊದಲ ಐದು ಸ್ಥಾನದಲ್ಲಿದ್ದು ಅವುಗಳ ಕೆಲಸ/ಉತ್ಪಾದನಾ ಅನುಪಾತ ತುಂಬಾ ಕಡಿಮೆಯಿದೆ.
ಭಾರತಕ್ಕಿಂತ ಹೆಚ್ಚು ಗಂಟೆ ಕೆಲಸಮಾಡುವ ಯುಎಇ ಮತ್ತು ಕತಾರ್ ದೇಶಗಳು ನಮ್ಮಲ್ಲಿಗಿಂತ ಸುಮಾರು ನಾಲ್ಕು ಪ್ರತಿಶತ ಹೆಚ್ಚು ಗಂಟೆ ಕೆಲಸ ಮಾಡಿ ಅವುಗಳ ಉತ್ಪಾದನಾ ಅನುಪಾತ ನಮ್ಮಲ್ಲಿಗಿಂತ ಆರು ಪಟ್ಟಿಗೂ ಹೆಚ್ಚಿರುವ ವಿಷಯ ತಿಳಿದಿದೆ. ಮಹತ್ವದ ವಿಚಾರ ವೆಂದರೆ ಯುಎಇ ಮತ್ತು ಕತಾರ್ ಕೆಲಸಗಾರರ ಸುಮಾರು ೩೦ ಪ್ರತಿಶತಕ್ಕೂ ಹೆಚ್ಚು ಭಾರತೀಯ ಪರಿಶ್ರಮಿಗಳೇ. ನಮಗಿಂತ ಕಡಿಮೆ ಗಂಟೆ ಕೆಲಸ ಮಾಡಿಯೂ ಕೆಲಸದ ಉತ್ಪಾದನೆಯ ಅದ್ಭುತ ಸಾಧನೆಯನ್ನು ನಾರ್ವೆ, ಸ್ವಿಜರ್ಲೆಂಡ್, ನೆದಲ್ಯಾಂಡ್ಸ್, ಡೆನ್ಮಾರ್ಕ್, ಆಸ್ಟ್ರಿಯಾ ಮುಂತಾದ ದೇಶಗಳು ಪಡೆದುಕೊಂಡಿವೆ. ಇದನ್ನು ಇಲ್ಲಿ ಹೇಳಿದಾಗ ಶ್ರಮ ಮಾಡುವ ಕುರಿತು ತಪ್ಪು ಅರ್ಥ ಗ್ರಹಿಸಕೂಡದು. ಹೆಚ್ಚು ಉತ್ಪಾದನೆ ಸಾಧಿಸಬೇಕಾದರೆ ಹೆಚ್ಚು ಕೆಲಸದ ಜತೆ ಹೆಚ್ಚು ಉತ್ಪಾದನೆ ನೀಡುವಂಥ ಸಾಧನ ಮತ್ತು ವಿಧಾನವನ್ನು ಅಳವಡಿಸುವುದೂ ಅತ್ಯಂತ ಮಹತ್ವದ ಸಂಗತಿಯಾಗಿದ್ದು ಸಾಧನ ಮತ್ತು ವಿಧಾನಗಳಿಗೆ ಹೆಚ್ಚು ಒತ್ತುಕೊಡುವ ಅಗತ್ಯವಿದೆ.
೨೦೧೯ರಲ್ಲಿ ಮಾಡಿದ್ದ ಸರಕಾರದ ಪರವಾದ ‘ಟೈಮ್ ಯೂಸ್’ ಸಮೀಕ್ಷೆಯು ನಮ್ಮ ದೇಶದಲ್ಲಿನ ಎಲ್ಲ ರಾಜ್ಯಗಳು ವಾರಕ್ಕೆ ಕೆಲಸ ಮಾಡುವ ಗಂಟೆ
ಗಳನ್ನು ಉಲ್ಲೇಖಿಸಿದೆ. ಇದು ಎಲ್ಲ ವಯಸ್ಸಿನ ಜನ ರನ್ನೂ ಪರಿಗಣಿಸಿದ್ದು. ಸಮೀಕ್ಷೆಯ ಪ್ರಕಾರ ದೇಶದ ಸರಾಸರಿ ಕಾರ್ಯಾವಧಿಯು ವಾರಕ್ಕೆ ೬೧.೬ ಗಂಟೆ ಯಷ್ಟಿದೆ. ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ತೆಲಂಗಾಣ, ಪಂಜಾಬ್, ರಾಜಸ್ಥಾನ, ಬಂಗಾಳ ಮತ್ತು ಉತ್ತರಾಖಂಡದ ಜನರು ವಾರಕ್ಕೆ ೬೦ ಗಂಟೆಗೂ ಹೆಚ್ಚು ಕಾಲ ಕೆಲಸಮಾಡುತ್ತಾರೆ. ಕೆಲಸ ಮಾಡುವ ನಿಟ್ಟಿನಲ್ಲಿ ದೇಶದ ಕಾರ್ಯಶಕ್ತಿಯನ್ನು ಜಾಗತಿಕವಾಗಿ ‘ಶ್ರಮಿಕ’ವೆಂದು ಗುರುತಿಸಲಾಗಿದೆ.
ಭಾರತದ ತಲಾದಾಯವು ೨೦೧೨-೧೩ರ ನಂತರ ಇಲ್ಲಿನ ತನಕ ದ್ವಿಗುಣವಾಗಿದ್ದು ಹೆಚ್ಚು ಕೆಲಸ ಮಾಡುತ್ತಿವೆಯೆಂದು ಗುರುತಿಸಲಾದ ಕೆಲ ರಾಜ್ಯಗಳು ಶೀಘ್ರ ಗತಿಯನ್ನು ಕಂಡಿವೆ. ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳ ತಲಾದಾಯ ಉತ್ಪನ್ನವು ಇಮ್ಮಡಿ ಯಾಗಿರುವ ದಾಖಲೆಯಿದೆ. ಅಂದರೆ ಹೆಚ್ಚು ಕೆಲಸ ಮಾಡಿರುವ ಭಾಗವು ಪರಿಣಾಮಕಾರಿ ಪರಿವರ್ತನೆ ತಂದಿದೆ. ಯುವಜನರು ಇನ್ನೂ ಹೆಚ್ಚು ಗಂಟೆ ಕೆಲಸ
ಮಾಡಬೇಕೆಂಬ ಅಭಿಪ್ರಾಯವು ಸ್ವೀಕಾರವಾಗದೇ ಇರುವುದು, ಕೆಲಸ ಮತ್ತು ಬದುಕಿನ ಸಮತೋಲನ ಪಾಲಿಸುವ ನಿಟ್ಟಿನಲ್ಲಿ. ವಾರಕ್ಕೆ ೭೦ ಗಂಟೆ ಕೆಲಸ ಮಾಡಬೇಕೆಂದರೆ ದಿನಕ್ಕೆ ಸುಮಾರು ೧೨ ಗಂಟೆಯಷ್ಟು ಕೆಲಸವನ್ನು ಆರು ದಿನ ಮಾಡಬೇಕು.
ಕೆಲಸದ ಸ್ಥಳ ತಲುಪಿ ಮನೆಗೆ ಮರಳುವ ಮತ್ತು ವಿಶ್ರಾಂತಿ, ಊಟ-ತಿಂಡಿಯ ಸಮಯದ ನಂತರ ಕುಟುಂಬದ ಜತೆ ಕಳೆಯುವ ಸೌಹಾರ್ದಕ್ಕೆ ಸಮಯವೇ ಇರದು. ಕೆಲಸದ ಒತ್ತಡದಲ್ಲಿ ಸಿಲುಕಿ ಅನಾರೋಗ್ಯಕ್ಕೆ ಸಿಲುಕಬಹುದಾದ ಸ್ಥಿತಿ ಇದ್ದೇ ಇದೆ. ಈಗಾಗಲೇ ಅನೇಕ ಕಾರ್ಯಸ್ಥಳಗಳಲ್ಲಿ ನಿಗದಿತ ಗಂಟೆಗಳಿಗೂ ಮೀರಿದ ಒತ್ತಡಕ್ಕೆ ಸಿಲುಕಿ ಯುವಜನರು ಸೊರಗುವ ಕುರಿತು ಹೇಳಲಾಗಿದೆ. ಕೆಲಸದ ಉತ್ಪಾದನೆ ಹೆಚ್ಚಾಗಬೇಕಾದರೆ
ಹಿತಕರವಾದ ಕೆಲಸದ ಮಾದರಿ ಮತ್ತು ಪರಿಣಾಮ ಕಾರಿಯಾದ ಸ್ಮಾರ್ಟ್ ವರ್ಕ್ ಮಾಡೆಲ್ ಇಂದಿನ ಯುವಜನತೆಯ ಒಲವು ಕಂಡಿದೆ. ಕೆಲಸದ ಸ್ಥಳದಲ್ಲಿ ಒಬ್ಬ ಮಾಡುವ ಕೆಲಸ ಮತ್ತು ಅದರಿಂದ ಸಿಗುವ ಪರಿಣಾಮದ ಮೌಲ್ಯಮಾಪನ ಮಹತ್ವ ಪಡೆಯಬೇಕಿರುವುದು ಪ್ರಮುಖವಾಗಿದೆ.
ನಾರಾಯಣ ಮೂರ್ತಿಯವರು ಕೂಡ ಕೆಲಸ ಮತ್ತು ಬದುಕನ್ನು ಸಮತೋಲಿಸುವ ಸರಾಗವಾದ ಪರಿಣಾಮಕಾರಿ ಕೆಲಸದ ಮಾದರಿಯ ಬೋಧಕರಾಗಿದ್ದರು ಎಂಬು ದನ್ನು ಇಲ್ಲಿ ಸ್ಮರಿಸಬಹುದು. ಯುವ ಜನತೆ ಎಷ್ಟು ಗಂಟೆ ಕೆಲಸಮಾಡಬೇಕು ಎನ್ನುವ ಚರ್ಚೆ ಬಂದಾಗ ಪರಿಣಾಮಕಾರಿ ಯಾದ ಉತ್ಪಾದನೆಗೆ ಎಷ್ಟು ಗಂಟೆಗಳು ಬೇಕೆಂಬುದನ್ನು ಸರಿಯಾಗಿ ಗ್ರಹಿಸಿ ನಿರ್ಣಯಿಸುವುದು ಸರಿಯಾದ ದಾರಿಯೆನ್ನಬಹುದು. ಎಷ್ಟು ಗಂಟೆ ಎನ್ನುವ ವಿಚಾರವನ್ನು ಬೇರೆ ಬೇರೆ ಕ್ಷೇತ್ರದಲ್ಲಿ ತಗಲುವ ಪರಿಣಾಮಕಾರಿ ಫಲವನ್ನು ಆಧಾರವಾಗಿಟ್ಟುಕೊಂಡು ನಿರ್ಣಯಿಸಬಹುದು. ಮೂರ್ತಿಯವರು ಹೇಳಿದ ವಿಚಾರವನ್ನು ಈ ನಿಟ್ಟಿನಲ್ಲಿ ಧನಾತ್ಮಕಾಗಿ ಸ್ವೀಕರಿಸಿ ದಾಗ ಅವರ ಹೇಳಿಕೆಯ ಮಹತ್ವದ ಅರಿವಾಗುವುದು. ೭೦ ಗಂಟೆ ಕೆಲಸ ಮಾಡಬೇಕೆಂಬ ಮಾತುಗಳು ಒಂದು ದಿಕ್ಕನ್ನು ಅಷ್ಟೇ ಸೂಚಿಸುವುದು ಮತ್ತು ಹೇಳಿಕೆಯು ಹುಟ್ಟುಹಾಕಿದ ವಿಚಾರಗಳು ದೂರದರ್ಶಿ ಪರಿವರ್ತ
ನೆಗೆ ಕಾರಣವಾಗ ಬಹುದಾದ ಚಿಂತನ-ಮಂಥನಕ್ಕೆ ಕಾರಣವಾಗುತ್ತಿರು ವುದು ಅಮೂಲ್ಯ ಅಂಶವಾಗಿದೆ.
ಒಂದು ಜನಾಂಗ ವನ್ನು ದೃಷ್ಟಿಯಲ್ಲಿಟ್ಟಾಗ, ಹೆಚ್ಚಿನ ಶ್ರಮವು ಯೋಗ್ಯ ಸಾಧನ, ವಿಧಾನ ಮತ್ತು ಮಾರ್ಗದರ್ಶನದಲ್ಲಿ ತೊಡಗಿಕೊಂಡಾಗ ಕೆಲಸ
ಉತ್ಪಾದನೆಯು ಉನ್ನತ ಮಟ್ಟ ತಲುಪುವುದು ಸಿದ್ಧ ಸಂಗತಿ. ವೈಯಕ್ತಿಕವಾಗಿ ಅತ್ಯುನ್ನತ ಸಾಧಕನಾಗ ಬೇಕಾದರೆ ತಾನು ಸಾಧಿಸಬೇಕಿರುವ ನಿಟ್ಟಿನಲ್ಲಿ ದೃಢ ನಿಶ್ಚಯದ ಅವಿರತ ತಪಸ್ಸು ಅನಿವಾರ್ಯವೆಂಬುದೂ ಅಷ್ಟೇ ಸಾಬೀತಾದ ಸಂಗತಿ.
(ಲೇಖಕರು ಮುಂಬೈನ ಲಾಸಾ
ಸೂಪರ್‌ಜನೆರಿಕ್ಸ್‌ನ ನಿರ್ದೇಶಕರು)