ತುಮಕೂರು: ಲೋಕಸಭಾ ಚುನಾವಣೆ ಸ್ಪರ್ಧೆಗೆ ನಾನು ಸಿದ್ಧ, ಟಿಕೆಟ್ ಕೊಡೋದು ಬಿಡೋದು ಹೈಕಮಾಂಡ್‌ಗೆ ಬಿಟ್ಟ ವಿಷಯ ಕೇಂದ್ರದ ಮಾಜಿ ಸಚಿವ ಎಂ.ವೀರಪ್ಪಮೋಯ್ಲಿ ತಿಳಿಸಿದರು.
ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಡಾ.ಶಿವಕುಮಾರಸ್ವಾಮೀಜಿ ಗದ್ದುಗೆ ದರ್ಶನ ಪಡೆದು, ಶ್ರೀಸಿದ್ಧಲಿಂಗಸ್ವಾಮೀಜಿ ಆಶಿರ್ವಾದ ಪಡೆದು ಮಾತನಾಡಿದರು.
2019ರಲ್ಲಿ ಸೋತಾಗಿನಿಂದಲೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಜನರ ಸಂಪರ್ಕದಲ್ಲಿದ್ದೇನೆ ಮುಂಬರುವ ಚುನಾವಣೆಗೆ ಎಲ್ಲಾ ಸಿದ್ಧತೆ ನಡೆಯುತ್ತಿದೆ, ಎಂದರು.
ಪಂಚರಾಜ್ಯ ಚುನಾವಣೆಯಲ್ಲಿ ವಾತಾವರಣ ಕಾಂಗ್ರೆಸ್ ಪರವಾಗಿದೆ, ಕೆಂದ್ರ ಸರ್ಕಾರದ ಹುಳುಕು ಜನರಿಗೆ ಗೊತ್ತಾಗ್ತಿದೆ. ಬಿಜೆಪಿ ಸೋಲುತ್ತೆ. ರಾಜ್ಯದಲ್ಲಿಯೂ ಲೋಕಸಭಾ ಚುನಾವಣೆಯಲ್ಲಿ ಕನಿಷ್ಟ 20 ಸ್ಥಾನ ಗೆಲ್ಲಲು ಇದೆ ಎಂದರು.
ಶ್ರೀಮಠಕ್ಕೆ ಭೇಟಿ ನೀಡಿ ತುಂಬ ದಿನಗಳಾಗಿತ್ತು ಹಾಗಾಗಿ, ಭೇಟಿ ನೀಡಿ ಆಶಿರ್ವಾದ ಪಡೆದಿದ್ದೇನೆ ಎಂದು ತಿಳಿಸಿದರು.