Friday, 22nd November 2024

ನೆದರಲ್ಯಾಂಡ್ ತಂಡಕ್ಕೆ ಗೆಲ್ಲಲು 411 ರನ್ನುಗಳ ಗುರಿ

ಬೆಂಗಳೂರು: ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ಟೀಮ್ ಇಂಡಿಯಾ ನೆದರಲ್ಯಾಂಡ್ ತಂಡಕ್ಕೆ ಗೆಲ್ಲಲು 411 ರನ್ನುಗಳ ಅಸಾಧ್ಯ ಗುರಿ ನೀಡಿದೆ. ಇಂದಿನ ಭಾರತದ ಇನ್ನಿಂಗ್ಸ್ ನಲ್ಲಿ ಮೂರು ಅರ್ಧಶತಕ ಹಾಗೂ ಎರಡು ಶತಕ ದಾಖಲಾದವು.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಟೀಮ್​ ಇಂಡಿಯಾ ಉತ್ತಮ ಆರಂಭ ಪಡೆಯಿತು. ಅರ್ಧಶತಕ ಗಳಿಸಿ ಇಬ್ಬರು ಆರಂಭಿಕರು ವಿಕೆಟ್​ ಕೊಟ್ಟರು. ಶುಭಮನ್​ ಗಿಲ್​ 51 ರನ್​ ಮಾಡಿದರೆ, ರೋಹಿತ್​ ಶರ್ಮಾ 61 ರನ್​ ಔಟ್​ ಆದರು. ಇನ್ನಿಂಗ್ಸ್​ನಲ್ಲಿ ರೋಹಿತ್ 8 ಬೌಂಡರಿ ಮತ್ತು 2 ಸಿಕ್ಸ್​ ಬಾರಿಸಿದ್ದಾರೆ. ಮಾಜಿ ನಾಯಕ ವಿರಾಟ್ ಕೊಹ್ಲಿ 51, ಶ್ರೇಯಸ್ ಅಯ್ಯರ್‌ ಅಜೇಯ 128, ಹಾಗೂ ಲೋಕಲ್‌ ಬಾಯ್ ಹಾಗೂ ಉಪನಾಯಕ ಕೆ.ಎಲ್.ರಾಹುಲ್ 102 ಬಾರಿಸಿ ಔಟಾದರು. ನೆದರಲ್ಯಾಂಡ್ ಪರ ಲೋಗನ್ ವಾನ್ ಬೀಕ್ ತಮ್ಮ ಹತ್ತು ಓವರುಗಳಲ್ಲಿ107  ರನ್ ನೀಡಿ, ದುಬಾರಿ ಯಾದರು.

ಡಚ್ಚರ ವಿರುದ್ಧದ ಪಂದ್ಯದಲ್ಲಿ ನಾಯಕ ರೋಹಿತ್​ ಶರ್ಮಾ ಅರ್ಧಶತಕ ಗಳಿಸುವ ಮೂಲಕ ವಿಶ್ವಕಪ್​ನಲ್ಲಿ 500 ರನ್​ಗಳ ಗಡಿ ದಾಟಿದ್ದಾರೆ. ವಿಶ್ವಕಪ್​ನಲ್ಲಿ ನಾಯಕರಾಗಿ 500 ಗಡಿ ದಾಟಿದ ಮೊದಲ ನಾಯಕ ಎಂಬ ಖ್ಯಾತಿ ಗಳಿಸಿ ದ್ದಾರೆ.

ಸಚಿನ್​ ದಾಖಲೆ ಸರಿಗಟ್ಟಿದ ಶರ್ಮಾ: ವಿಶ್ವಕಪ್​ನಲ್ಲಿ ಎರಡು ಬಾರಿ 500ಕ್ಕೂ ಹೆಚ್ಚು ರನ್​ ಗಳಿಸಿದ ದಾಖಲೆಯಲ್ಲಿ ರೋಹಿತ್​ ಸಚಿನ್​ ಅವರನ್ನು ಸಮ ಮಾಡಿದ್ದಾರೆ. ಸಚಿನ್​ ತೆಂಡೂಲ್ಕರ್​ 1996 ಮತ್ತು 2003ರ ವಿಶ್ವಕಪ್​ನಲ್ಲಿ 500ಕ್ಕೂ ಹೆಚ್ಚಿನ ರನ್​ ಕಲೆಹಾಕಿದ್ದರು. ಆರಂಭಿಕರಾಗಿ 14,000 ರನ್ ಗಡಿಯನ್ನು ರೋಹಿತ್​ ಶರ್ಮಾ ಪೂರೈಸಿದ್ದಾರೆ.