ನವದೆಹಲಿ: ಅತ್ಯಂತ ಕಳಪೆ ಮಟ್ಟಕ್ಕೆ ಇಳಿದಿದ್ದ ದೆಹಲಿ ವಾಯು ಗುಣಮಟ್ಟ ಸೂಚ್ಯಂಕ ಶನಿವಾರ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ.
ಸಿಸ್ಟಂ ಆಫ್ ಏರ್ ಕ್ವಾಲಿಟಿ ಅಂಡ್ ವೆದರ್ ಫೋರ್ಕಾಸ್ಟಿಂಗ್ ಅಂಡ್ ರಿಸರ್ಚ್ (SAFAR) ಪ್ರಕಾರ ಶನಿವಾರ ಬೆಳಗ್ಗೆ AQI 398 ಆಗಿತ್ತು.
ಆರ್ಕೆ ಪುರಂನಲ್ಲಿ 396, ನ್ಯೂ ಮೋತಿ ಬಾಗ್ನಲ್ಲಿ 350, ಐಜಿಐ ಏರ್ಪೋರ್ಟ್ ಪ್ರದೇಶದಲ್ಲಿ 465 ಮತ್ತು ನೆಹರು ನಗರದಲ್ಲಿ 416 ರಲ್ಲಿ ವಾಯು ಗುಣಮಟ್ಟ ಸುದಾರಿಸಣೆ ದಾಖಲಾಗಿದೆ.
ಕಳೆದ ಕೆಲವು ದಿನಗಳಿಂದ ತೀವ್ರವಾಗಿ ದೆಹಲಿ ವಾಯು ಗುಣಮಟ್ಟ ಹದಗೆಟ್ಟ ಕಾರಣ ಕಟ್ಟಡ ಕಾಮಗಾರಿಗಳಿಗೆ, ಫ್ಯಾಕ್ಟರಿ ಕಾರ್ಯಗಳಿಗೆ ನಿಷೇಧ ಹೇರಲಾಗಿತ್ತು. ಶಾಲೆಗಳಿಗೆ ರಜೆ ನೀಡಲಾಗಿತ್ತು.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಶುಕ್ರವಾರ ವಾಯು ಗುಣಮಟ್ಟ ಸೂಚ್ಯಂಕವನ್ನು (AQI) ಹೆಚ್ಚಿಸಲು ‘ಕಟ್ಟುನಿಟ್ಟಾದ ಕ್ರಮಗಳನ್ನು’ ಜಾರಿಗೆ ತರಲು ದೆಹಲಿ-NCR ನಲ್ಲಿ ಅಧಿಕಾರಿಗಳಿಗೆ ಕಠಿಣ ನಿರ್ದೇಶನ ನೀಡಿದೆ.