ತುಮಕೂರು: ಆಟವಾಡುತ್ತಿದ್ದಾಗ ಬಾವಿಗೆ ಬಿದ್ದಿದ್ದ ತಮ್ಮನನ್ನು ರಕ್ಷಿಸಿದ ಬಾಲಕಿಗೆ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಸಂದಿದೆ. ತುಮಕೂರಿನ ಕುಚ್ಚಂಗಿಪಾಳ್ಯದ ಜಿತೇಂದ್ರ ಹಾಗೂ ರಾಜಕುಮಾರಿ ದಂಪತಿಯ ಮಗಳು ಶಾಲು ಪ್ರಶಸ್ತಿಗೆ ಭಾಜನಳಾಗಿದ್ದಾಳೆ.
ಲೈಫ್ ಜಾಕೇಟ್ ಧರಿಸಿ ಬಾವಿಗೆ ಬಿದ್ದಿದ ತಮ್ಮನನ್ನು ಕಾಪಾಡುವ ಶೌರ್ಯ ಪ್ರದರ್ಶಿದ ಕಾರಣ ಶಾಲುಗೆ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ನೀಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂದಾಗಿದ್ದು, ಬೆಂಗಳೂರು ಜವಾಹರ ಬಾಲ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ತುಮಕೂರಿನ ಕುಚ್ಚಂಗಿಪಾಳ್ಯ ಗ್ರಾಮದಲ್ಲಿ ಧನಂಜಯ ಎಂಬುವರ ತೋಟದ ಮನೆಯಲ್ಲಿ ವಾಸವಾಗಿದ್ದ ಜೀತೆಂದ್ರ, ರಾಜಕುಮಾರಿ ದಂಪತಿಯ ನಾಲ್ವರು ಮಕ್ಕಳಲ್ಲಿ ಶಾಲು ಮೊದಲನೆಯವಳಾಗಿದ್ದು ಆಟವಾಡುವಾಗ ೭ ವಷ೯ದ ಹಿಮಾಂಶು ಆಕಸ್ಮಿಕವಾಗಿ ಆಯತಪ್ಪಿ ಬಾವಿಗೆ ಬಿದ್ದಿದ್ದನ್ನು ಕಂಡು ಮನೆಯಲ್ಲಿದ್ದ ಲೈಫ್ ಜಾಕೆಟ್ ಧರಿಸಿ ಬಾವಿಗೆ ಹಾರಿ ಹಿಮಾಂಶುನನ್ನು ರಕ್ಷಿಸಿದ್ದಳು.
*
ಉತ್ತರ ಪ್ರದೇಶದ ಜಿತೇಂದ್ರ ದಂಪತಿಗೆ ೮ ವರ್ಷದ ಶಾಲೂ, ೭ವರ್ಷದ ಹಿಮಾಂಶು, ೩ ವರ್ಷದ ರಾಶಿ ಹಾಗೂ ೨ ವರ್ಷದ ಪೀಲ್ ಎಂಬ ಮಕ್ಕಳಿದ್ದು ಕುಚ್ಚಂಗಿ ಪಾಳ್ಯದಲ್ಲಿ ಶಾಲೆಯಲ್ಲಿ ಓದುತ್ತಿದ್ದರು. ಮಾಲೀಕ ಧನಂಜಯ ಎಂಬುವರು ತನ್ನ ಮಗಳ ಜತೆ ಶಾಲೂಗೂ ಈಜು ಕಲಿಸಿದ್ದರು.