ತುಮಕೂರು : ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಸರ್ಕಾರದ ಕೆಲವೊಂದು ನಿಯಮಗಳಿಂದ ಇಲಾಖೆಯ ಅಸ್ಮಿತೆಯನ್ನು ಉಳಿಸಿಕೊಂಡು ಯಥಾಸ್ಥಿತಿ ಕಾಪಾಡುವಂತೆ ಒಂದು ದಿನದ ಸಾಂಕೇತಿಕ ಧರಣಿ ನಡೆಸಿದ ನೌಕರರು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕೊಠಾರಿ ಆಯೋಗದ ಶಿಫಾರಸ್ಸಿಗೆ ಅನುಗುಣವಾಗಿ ಪಿಯುಸಿ ಹಂತವನ್ನು 1971 ರ ಜನವರಿಯಲ್ಲಿ ಅಸ್ತಿತ್ವಕ್ಕೆ ಬಂದ ಪದವಿ ಪೂರ್ವ ಶಿಕ್ಷಣ ಮಂಡಳಿ ರಚನೆ ಮಾಡಲಾಯಿತು. ಅದರಂತೆ 1992 ರಲ್ಲಿ ಸ್ವತಂತ್ರ ಪದವಿ ಪೂರ್ವ ಶಿಕ್ಷಣ ಇಲಾಖೆ ರೂಪು ಗೊಂಡು ಅಂದಿನಿಂದ ಇಂದಿನವರೆಗೂ ನಿರಾತಂಕವಾಗಿ ಇಲಾಖೆಯ ನಿಯಮಗಳ ಅಡಿಯಲ್ಲಿ ಕಾರ್ಯ ನಿರ್ವಹಿಸಿಕೊಂಡು ಬಂದಿರುವುದು ವಿಶೇಷ.
ಪಪೂಶಿ ಶಿಕ್ಷಣ ಇಲಾಖೆಯನ್ನು ಶಾಲಾ ಶಿಕ್ಷಣ ಮಂಡಳಿ ಎಂದು ಹೆಸರು ಬದಲಾಯಿಸಿದ್ದು, ಅಲ್ಲದೆ ಪಿಯು ಅಂತವನ್ನು ಪ್ರೌಢ ಶಾಲೆಗಳಿಗೆ ವಿಲೀನಗೊಳಿಸಿ ಆದೇಶಹೊರಡಿಸಿರುವುದು ಖಂಡನೀಯ, ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಯಲ್ಲಿ ವಿಲೀನ ಮಾಡಿದ್ದು ಇದರಿಂದ ಕಾಲೇಜಿನ ಸಿಬ್ಬಂದಿ ಹಾಗೂ ಮಕ್ಕಳ ಮೇಲೆ ಪರಿಣಾಮಕಾರಿ ಒತ್ತಡ ಬೀಳುವುದು ಸಹಜ, ಇದರಿಂದ ಪರೀಕ್ಷಾ ವಿಭಾಗಗಳಲ್ಲಿ ಹಳಿತಪ್ಪಿರುವ ಇಲಾಖೆ ಸಮನ್ವಯ ಸ್ಥಾಪಿಸಬೇಕು. ಜಿಲ್ಲಾ ಹಂತಗಳಲ್ಲಿ ಪ.ಪೂ.ಶಿ ಇಲಾಖೆ ಯನ್ನು ಜಿಲ್ಲಾ ಪಂಚಾಯತ್ ಮತ್ತು ಅಪರ ಆಯುಕ್ತರು ಇವರಿಗೆ ವಹಿಸಲು ಮುಂದಾಗಿದ್ದು ಇದರಿಂದ ಸಂಭವಿಸುವ ಸಮಸ್ಯೆಗಳ ಬಗ್ಗೆ ಮನವಿ ಮಾಡಲಾಯಿತು.
ಸರ್ಕಾರ ಸಕಾಲದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದೇ ಹೋದಲ್ಲಿ ಕರ್ನಾಟಕ ಪ್ರಾಂಶುಪಾಲರ ಸಂಘ, ಉಪನ್ಯಾಸಕರ ಸಂಘ, ಅನುದಾನಿತ ಕಾಲೇಜುಗಳ ನೌಕರರ ಸಂಘಗಳ ಒಕ್ಕೂಟವು ಮುಂದಿನ ಡಿಸೆಂಬರ್ 1 ರಂದು ಬೆಂಗಳೂರಿನ ಸ್ವತಂತ್ರ ಉದ್ಯಾ ನವನದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದೆ ಎಂದು ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಪ್ರಭಾಕರ್ ರೆಡ್ಡಿ ಎಚ್ಚರಿಕೆ ನೀಡಿದರು.
ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಎನ್ ಮಹಾಲಿಂಗೇಶ್, ಅನುದಾನಿತ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ಪ್ರಾಂಶುಪಾಲರಾದ ಕೃಷ್ಣಮೂರ್ತಿ, ನೇರಂ ನಾಗರಾಜು, ರಾಜ್ ಕುಮಾರ್, ಅಶ್ವತ್ಥ್ ನಾರಾಯಣ, ಫತೆ ಅಹಮದ್, ಜಯರಾಂ, ಸತೀಶ್ ಸಿ ಜಿ, ಗೋವಿಂದರಾಜು, ಮಲ್ಲಯ್ಯ, ಚಂದ್ರಶೇಕರ ಆರಾಧ್ಯ, ಬೋಧಕೇತರ ಸಂಘದ ಅಧ್ಯಕ್ಷರಾದ ಎಸ್.ಎಲ್ ವರಾಹ ವೆಂಕಟಗಿರಿ, ಅಕ್ಕಮ್ಮ, ಸಂದ್ಯಾ, ಜಗದೀಶ್ ಪ್ರಸಾದ್, ವಿಜಿಯಮ್ಮ, ಹರೀಶ್ ರೆಡ್ಡಿ, ಗೋವಿಂದಪ್ಪ, ಗಂಗಹನುಮಯ್ಯ, ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ನೌಕರರು ಹಾಜರಿದ್ದರು.