Saturday, 14th December 2024

ಕುದುರೆಲಾಳದಂತೆ ಕಿಡ್ನಿ ಹೊಂದಿದ್ದ ಮಹಿಳೆಗೆ ಯಶಸ್ವಿ ಸಂಕೀರ್ಣ ಶಸ್ತ್ರಚಿಕಿತ್ಸೆ

ಬೆಂಗಳೂರು: ಕುದುರೆಯ ಲಾಳದ ರೀತಿಯಲ್ಲಿ ಇದ್ದ ಕಿಡ್ನಿಯಿಂದಾಗಿ, ಮೂತ್ರಪಿಂಡದ ಗಡ್ಡೆಯಿಂದ ಬಳಲುತ್ತಿದ್ದ ೫೪ ವರ್ಷದ ಮಹಿಳೆಗೆ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿದೆ.

ಫೋರ್ಟಿಸ್‌ ಆಸ್ಪತ್ರೆಯ ಮೂತ್ರಶಾಸ್ತ್ರ ವಿಭಾಗದ ಹಿರಿಯ ನಿರ್ದೇಶಕರಾದ ಡಾ ಮೋಹನ್ ಕೇಶವಮೂರ್ತಿ ಅವರ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ೫೪ ವರ್ಷದ ಮಹಿಳೆಯಲ್ಲಿ ಆಗಾಗ್ಗೇ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು, ಇದರಿಂದ ಆಸ್ಪತ್ರೆಗೆ ದಾಖಲಾದ ಅವರನ್ನು ಸಂಪೂರ್ಣ ಪರೀಕ್ಷೆಗೆ ಒಳಪಡಿಸಿದ ಬಳಿಕ ಅವರಿಗೆ ಜನ್ಮಜಾತವಾಗಿಯೇ ಅವರ ಕಿಡ್ನಿಯು ಹಾರ್ಸ್‌ ಶೂ (ಎರಡೂ ಮೂತ್ರಗಳು ಕೆಳಭಾಗದಲ್ಲಿ ಯೂ ಆಕಾರದಲ್ಲಿ ಇರುವುದು) ಕುದುರೆ ಲಾಳದ ರೀತಿಯಲ್ಲಿ ಇರುವುದು ಕಂಡು ಬಂತು, ಅಷ್ಟೇ ಅಲ್ಲದೆ ಆಕೆಯ ಎಡ ಮೂತ್ರಪಿಂಡದ ಮೇಲೆ ಕ್ಯಾನ್ಸರ್‌ಕಾರಕ ಗಡ್ಡೆ ಬೆಳೆದಿರುವುದು ಸಹ ಬೆಳಕಿಗೆ ಬಂದಿತು.

ಈ ಮೊದಲೇ ಕುದುರೆ ಲಾಳದಂತಿದ್ದ ಕಿಡ್ನಿಯಿಂದಾಗಿ ಎಡ ಕಿಡ್ನಿಗೆ ಸೂಕ್ತ ರೀತಿಯಲ್ಲಿ ರಕ್ತ ಪೂರೈಕೆ ಆಗದ ಕಾರಣ ಆ ಭಾಗದಲ್ಲಿ ಗಡ್ಡೆ ಬೆಳೆದಿತ್ತು. ಬಳಿಕ ಆಕೆಗೆ ಮೂತ್ರನಾಳದ ಸ್ಟೆಂಟಿಂಗ್ ಅನ್ನು (ಡಬಲ್ ಜೆ ಸ್ಟೆಂಟ್ ಎಂದೂ ಕರೆಯುತ್ತಾರೆ) ಮಾಡಲಾಯಿತು, ಇದರಲ್ಲಿ ತೆಳುವಾದ ಹೊಂದಿಕೊಳ್ಳುವ ಪ್ಲಾಸ್ಟಿಕ್ ಟ್ಯೂಬ್ ಅನ್ನು ತಾತ್ಕಾಲಿಕವಾಗಿ ಮೂತ್ರನಾಳದಲ್ಲಿ ಇರಿಸಲಾಯಿತು, ಇದು ಮೂತ್ರಪಿಂಡದಿಂದ ಮೂತ್ರಕೋಶಕ್ಕೆ ಮೂತ್ರವನ್ನು ಹಾದುಹೋಗಲು ಸಹಾಯ ಮಾಡುತ್ತದೆ. ನಂತರ ಆಕೆಯನ್ನು ರೋಬೋಟ್-ಅಸಿಸ್ಟೆಡ್ ಲ್ಯಾಪರೊಸ್ಕೋಪಿಕ್ ಲೆಫ್ಟ್ ಪಾರ್ಶಿಯಲ್ ನೆಫ್ರೆಕ್ಟಮಿಗೆ ಸಿದ್ಧಪಡಿಸಲಾಯಿತು.

ಈ ವಿಧಾನಕ್ಕೆ ನಾವು “ಡಾ ವಿನ್ಸಿ ರೋಬೋಟಿಕ್” ಬಳಸಿ, ರೋಬೋಟ್-ಅಸಿಸ್ಟೆಡ್ ಲ್ಯಾಪರೊಸ್ಕೋಪಿಕ್ ಲೆಫ್ಟ್ ಪಾರ್ಶಿಯಲ್ ನೆಫ್ರೆಕ್ಟಮಿ ವಿಧಾನದ ಮೂಲಕ ಅವರಿಗೆ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿ, ಗಡ್ಡೆಯನ್ನು ತೆಗೆಯಲಾಯಿತು. ಮೂತ್ರಪಿಂಡದ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುವಾಗ ಆರೋಗ್ಯಕರ ಮೂತ್ರಪಿಂಡದ ಅಂಗಾಂಶಕ್ಕೆ ಹಾನಿಯಾಗುವುದನ್ನು ಕಡಿಮೆ ಮಾಡುತ್ತದೆ ಎಂದರು.

ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗಳ ಬಿಸಿನೆಸ್ ಹೆಡ್ ಅಕ್ಷಯ್ ಒಲೇಟಿ ಅವರು ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು, “ಈ ಸಾಧನೆಯು ಫೋರ್ಟಿಸ್ ಬನ್ನೇರುಘಟ್ಟದಲ್ಲಿರುವ ನಮ್ಮ ಮೂತ್ರಶಾಸ್ತ್ರ ತಂಡವು ಅಸಾಧಾರಣ ಆರೋಗ್ಯ ಸೇವೆಯನ್ನು ನೀಡಲು ಮತ್ತು ಸಂಕೀರ್ಣ ವೈದ್ಯಕೀಯ ಪ್ರಕರಣಗಳನ್ನು ನಿರ್ವಹಿಸುವ ಅವರ ಸಾಮರ್ಥ್ಯವನ್ನು ಒತ್ತಿಹೇಳುತ್ತದೆ. ರೋಗಿಯ ಯಶಸ್ವಿ ಚಿಕಿತ್ಸೆಯು ನಮ್ಮ ವೈದ್ಯರ ಕೌಶಲ್ಯ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ ಮತ್ತು ಅಪರೂಪದ ವೈದ್ಯಕೀಯ ಪರಿಸ್ಥಿತಿ ಗಳನ್ನು ಎದುರಿಸುತ್ತಿರುವವರಿಗೆ ಭರವಸೆಯನ್ನು ನೀಡುತ್ತದೆ.