ಸಂವಿಧಾನ ದಿನ
ಪ್ರಕಾಶ್ ಶೇಷರಾಘವಾಚಾರ್
೨೦೧೪ರಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ತರುವಾಯ ಅಂಬೇಡ್ಕರ್ ಅವರ ಸ್ಮಾರಕ ನಿರ್ಮಾಣಕ್ಕೆ ಮತ್ತೆ ಜೀವ ಬರುತ್ತದೆ. ೨೦೧೬ ರಲ್ಲಿ ಮೋದಿಯವರು ಇದರ ಶಂಕುಸ್ಥಾಪನೆ ನೆರವೇರಿಸಿ ೨೦೧೮ರಲ್ಲಿ ಏಪ್ರಿಲ್ ೧೩ರಂದು ಇದರ ಉದ್ಘಾಟನೆ ಮಾಡಿದರು. ಈ ಸ್ಮಾರಕದ ವಿನ್ಯಾಸವು ತೆರೆದ ಪುಸ್ತಕದ ಆಕಾರದಲ್ಲಿದ್ದು, ಭಾರತದ ಸಂವಿಧಾನದ ಪ್ರತಿಬಿಂಬವಾಗಿದೆ.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಅತಿ ಹೆಚ್ಚಿನ ಗೌರವ ಸಲ್ಲಿಸಿದ ಮತ್ತು ಅವರ ಸಾಮಾಜಿಕ ಸಮಾನತೆಯ ಹೋರಾಟದ ನಾನಾ ಸಂಕೇತಗಳನ್ನು ಗೌರವಿಸಿ ಅದನ್ನು ಚಿರಸ್ಥಾಯಿ ಮಾಡಿರುವ ಕೀರ್ತಿ ಬಿಜೆಪಿಗೆ ಮತ್ತು ಮೋದಿಯವರಿಗೆ ಸಲ್ಲುತ್ತದೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಭಾರತ ರತ್ನಗೌರವ ದೊರೆತಿದ್ದು ೧೯೯೦ರಲ್ಲಿ. ಅಂದು ವಾಜಪೇಯಿ ಮತ್ತು ಆಡ್ವಾಣಿಯವರು ಭಾರತರತ್ನ ಪ್ರಶಸ್ತಿಗೆ ಅಂಬೇಡ್ಕರ್ ಹೆಸರನ್ನು ಪ್ರಧಾನಿ ವಿ.ಪಿ.ಸಿಂಗ್ ಅವರಿಗೆ ಸೂಚಿಸಿದಾಗ ಅದಕ್ಕೆ ಸಹಮತ ದೊರೆತು ‘ಭಾರತ ರತ್ನ’ ಪ್ರಶಸ್ತಿಯನ್ನು ನೀಡಲಾಗುತ್ತದೆ. ದಶಕಗಳ ಹಿಂದೆಯೇ ನೀಡಬೇಕಿದ್ದ ಪ್ರಶಸ್ತಿಯು ಅವರು ನಿಧನರಾಗಿ ೩೩ ವರ್ಷಗಳ ತರುವಾಯ ಸಲ್ಲುತ್ತದೆ.
‘ಬಿಜೆಪಿಯವರು ದಲಿತ ವಿರೋಧಿಗಳು’ ಎಂದು ರಾಜಕೀಯ ಕಾರಣಗಳಿಗೆ ಆಪಾದಿಸುವವರಿಗೆ ಪ್ರಾಯಶಃ ಕಳೆದ ಹತ್ತು ವರ್ಷದಲ್ಲಿ ನರೇಂದ್ರ ಮೋದಿ ಯವರು ಅಂಬೇಡ್ಕರ್ ಅವರಿಗೆ ನೀಡಿರುವ ಮಹತ್ವದ ಅರಿವಿಲ್ಲ. ಅಂಬೇಡ್ಕರ್ ಅವರ ಸಾಧನೆಯನ್ನು ಚಿರಸ್ಥಾಯಿ ಮಾಡಿರುವ ಕೆಲಸಗಳ ಮಾಹಿತಿಯ ಕೊರತೆಯಿದೆ ಅಥವಾ ಉದ್ದೇಶ ಪೂರ್ವಕ ನಕಾರಾತ್ಮಕ ನಿಲುವನ್ನು ತೋರಿ ಬಿಜೆಪಿಯ ಭೂಮಿಕೆಯನ್ನು ಗೌಣ ಮಾಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಅಂಬೇಡ್ಕರ್ ಅವರು ಹಿಂದೂ ಕೋಡ್ ಬಿಲ್‌ಗೆ ಸಂಬಂಧಿಸಿದ ಬಿಕ್ಕಟ್ಟಿನ ನಂತರ ನೆಹರು ಅವರ ಸಂಪುಟಕ್ಕೆ ರಾಜೀನಾಮೆ ನೀಡುತ್ತಾರೆ. ಸರಕಾರಿ ನಿವಾಸವನ್ನು ತೊರೆದು ತಮ್ಮ ಪತ್ನಿ ಸವಿತಾರೊಂದಿಗೆ ದೆಹಲಿಯ ಅಲಿಪುರ್ ರಸ್ತೆಯಲ್ಲಿ ಬಾಡಿಗೆ ಮನೆಗೆ ಸ್ಥಳಾಂತರವಾಗುತ್ತಾರೆ. ೧೯೫೧ ರಿಂದ
೫೬ರತನಕ ಈ ಮನೆಯಲ್ಲಿ ಇದ್ದ ಅವರು ಇಲ್ಲಿಯೇ ತಮ್ಮ ಕೊನೆಯುಸಿರು ಬಿಡುತ್ತಾರೆ. ಅಂಬೇರ್ಡ್ಕ ನಿಧನಾ ನಂತರ ಅವರ ಪತ್ನಿ ಸವಿತಾ ಅವರು ಅಲ್ಲಿಯೇ ತಮ್ಮ ವಾಸವನ್ನು ಮುಂದುವರಿಸುತ್ತಾರೆ. ೧೯೬೭ರಲ್ಲಿ ಸವಿತಾ ಅವರು ರಾಜಾಸ್ಥಾನಕ್ಕೆ ತೆರಳಿದ್ದ ಸಂದರ್ಭದಲ್ಲಿ ಮನೆಯ ಮಾಲೀಕ
ಗೂಂಡಾಗಳ ಸಹಾಯದಿಂದ ಮನೆಯನ್ನು ಖಾಲಿ ಮಾಡುತ್ತಾನೆ.
ಅನೇಕ ಮಹತ್ವಪೂರ್ಣ ವಿಷಯಗಳ ಬಗ್ಗೆ ಅಂಬೇಡ್ಕರ್ ಅವರು ಬರೆದಿದ್ದ ಹಸ್ತಪ್ರತಿಗಳು ಈ ಸಂದರ್ಭದಲ್ಲಿ ಮಳೆಗೆ ತೋಯ್ದು ಹಾಳಾಗುತ್ತದೆ. ಸವಿತಾ ಅಂಬೇಡ್ಕರ್ ಅವರ ಸಹಾಯಕ್ಕೆ ಅಂದಿನ ಕೇಂದ್ರ ಸರಕಾರ ಬರುವುದಿಲ್ಲ. ೧೯೯೧ರಲ್ಲಿ ಅವರ ಮನೆಯನ್ನು ಸ್ಮಾರಕ ಮಾಡಲು ಅವರ ಅನುಯಾಯಿ ಗಳು ಒತ್ತಾಯಿಸುತ್ತಾರೆ. ಆದರೆ ಕಾಂಗ್ರೆಸ್ ಸರಕಾರವು ಅದಕ್ಕೆ ಕಿವಿಗೊಡುವುದಿಲ್ಲ. ೨೦೦೩ರಲ್ಲಿ ವಾಜಪೇಯಿ ಸರಕಾರವು ಅಂಬೇಡ್ಕರ್ ವಾಸವಿದ್ದ ಆಲಿಪುರ ಮನೆಯನ್ನು ಖರೀದಿಸಿ ಸ್ಮಾರಕವನ್ನಾಗಿ ಮಾಡಲು ಶಂಕುಸ್ಥಾಪನೆ ನೆರವೇರಿಸುತ್ತದೆ. ಈ ಮನೆಯನ್ನು ದೇಶ ಮತ್ತು ವಿದೇಶದ ಜನರು ಸ್ಫೂರ್ತಿ ಪಡೆಯಲು ಮತ್ತು ಸಾಮಾಜಿಕ ಅನ್ಯಾಯವನ್ನು ಹೇಗೆ ನಿರ್ಮೂಲನೆ ಮಾಡಬೇಕೆಂದು ಕಲಿಯಲು ಬರುವವರ ತೀರ್ಥಯಾತ್ರಾ ಸ್ಥಳವನ್ನಾಗಿ ರೂಪಿಸಲು ಯೋಜನೆ ಸಿದ್ದವಾಗುತ್ತದೆ. ಈ ಯೋಜನೆಗೆ ನೂರು ಕೋಟಿ ರುಪಾಯಿ ಮೀಸಲಿಡಲಾಗುತ್ತದೆ.
೨೦೦೪ರಲ್ಲಿ ಬಿಜೆಪಿ ಸರಕಾರ ಪತನವಾದ ಮೇಲೆ ಯುಪಿಎ ಸರಕಾರವು ಆ ನೂರು ಕೋಟಿ ಹಣವನ್ನು ಇತರ ಯೋಜನೆ ಗಳಿಗೆ ವೆಚ್ಚ ಮಾಡಿ ಸ್ಮಾರಕದ ನಿರ್ಮಾಣವನ್ನು ನಿರ್ಲಕ್ಷಿಸುತ್ತದೆ. ೨೦೧೪ರಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ತರುವಾಯ ಅಂಬೇಡ್ಕರ್ ಅವರ ಸ್ಮಾರಕ ನಿರ್ಮಾಣಕ್ಕೆ ಮತ್ತೆ
ಜೀವ ಬರುತ್ತದೆ. ೨೦೧೬ರಲ್ಲಿ ಮೋದಿಯವರು ಇದರ ಶಂಕುಸ್ಥಾಪನೆ ನೆರವೇರಿಸಿ ೨೦೧೮ರಲ್ಲಿ ಏಪ್ರಿಲ್ ೧೩ರಂದು ಇದರ ಉದ್ಘಾಟನೆ ಮಾಡಿದರು. ಈ ಸ್ಮಾರಕದ ವಿನ್ಯಾಸವು ತೆರೆದ ಪುಸ್ತಕದ ಆಕಾರದಲ್ಲಿದ್ದು, ಭಾರತದ ಸಂವಿಧಾನದ ಪ್ರತಿಬಿಂಬವಾಗಿದೆ. ಅನೇಕ ವರ್ಷಗಳಿಂದ ಸ್ಥಗಿತವಾಗಿದ್ದ ಭವ್ಯವಾದ ಸ್ಮಾರಕ ನಿರ್ಮಾಣ ಯೋಜನೆಯನ್ನು ಮೋದಿ ಯವರು ಕೇವಲ ಎರಡು ವರ್ಷದ ಅವಽಯಲ್ಲಿ ನಿರ್ಮಿಸಿ ಲೋಕಾರ್ಪಣೆ ಮಾಡುತ್ತಾರೆ.
ಅಂಬೇಡ್ಕರ್ ಅವರು ೧೯೨೧ರಿಂದ ೨೨ರ ತನಕ ‘ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್’ ನಲ್ಲಿ ಓದುವಾಗ ಉತ್ತರ ಲಂಡನ್‌ನ ಕಿಂಗ್ ಹೆನ್ರಿ ರಸ್ತೆಯಲ್ಲಿ ವಾಸವಾಗಿದ್ದರು. ಈ ಮನೆಯನ್ನು ಅವರ ನೆನಪಲ್ಲಿ ಸ್ಮಾರಕ ಮಾಡಬೇಕು ಎಂಬ ಆಶಯ ಅಂಬೇಡ್ಕರ್ ವಾದಿಗಳದ್ದಾಗಿತ್ತು. ೨೦೧೫ರಲ್ಲಿ ಈ ಕಟ್ಟಡ ಮಾರಾಟಕ್ಕೆ ಬರುತ್ತದೆ. ಆಗ ಮಹಾರಾಷ್ಟ್ರದ ದೇವೇಂದ್ರ ಫಡ್ನವಿಸ್ ಸರಕಾರವು ಕೇಂದ್ರ ಸರಕಾರದ ಅಣತಿಯಂತೆ ೩೩.೬೫ ಲಕ್ಷ ಕೊಟ್ಟು ಆ ಕಟ್ಟಡ ವನ್ನು ಖರೀದಿ ಮಾಡಿತು.
ಈ ಕಟ್ಟಡವನ್ನು ಅಂಬೇಡ್ಕರ್ ವಸ್ತು ಸಂಗ್ರಹಾಲಯ ಮಾಡಲು ಉದ್ದೇಶಿಸಿದಾಗ ಅದಕ್ಕೆ ತಕರಾರಾಗುತ್ತದೆ. ಮೋದಿ ಸರಕಾರದ ಮಧ್ಯಪ್ರವೇಶದಿಂದ ಅಡ್ಡಿ ನಿವಾರಣೆ ಯಾಗಿ ವಸ್ತು ಸಂಗ್ರಹಾಲಯವನ್ನು ತೆರೆಯಲು ಅನುಮತಿ ದೊರೆಯುತ್ತದೆ. ಇದರಿಂದ ಪಾರಂಪರಿಕ ಆಸ್ತಿ ಸಿಕ್ಕಿದ್ದಲ್ಲದೆ, ಅಂಬೇಡ್ಕರ್ ಅವರ ನೆನಪು ಸದಾ ಉಳಿಯುವ ಕೆಲಸ ಸಹ ಸಾಕಾರವಾದಂತಾಗುತ್ತದೆ. ಅಂಬೇಡ್ಕರ್ ಅವರು ೧೯೫೬ ಡಿಸೆಂಬರ್ ೬ರಂದು ನಿಧನ ರಾದಾಗ ಅವರ ಅಂತ್ಯಕ್ರಿಯೆಯನ್ನು ಮುಂಬಯಿಯ ಈ ಮೊದಲು ದಾದರ್ ಚೌಪಾತಿ ಎಂದು ಕರೆಯುತ್ತಿದ್ದ ಸ್ಥಳದಲ್ಲಿ ನೆರವೇರಿಸಲಾಯಿತು. ‘ಚೈತನ್ಯ ಭೂಮಿ’ ಎಂದು ಕರೆಯ ಲ್ಪಡುವ ಈ ಸ್ಥಳವು ಇದೀಗ ಅತ್ಯಂತ ಪವಿತ್ರ ಸ್ಥಳವಾಗಿದೆ. ಪ್ರತಿವರ್ಷ ಲಕ್ಷಾಂತರ ದಲಿತ ಬಂಧುಗಳು ಮತ್ತು ಸಾಮಾಜಿಕ ಹೋರಾಟ ಗಾರರು ಭೇಟಿ ನೀಡಿ ತಮ್ಮ ಗೌರವ ಸಮರ್ಪಿಸುತ್ತಾರೆ.
ಇದೀಗ ಈ ಸ್ಥಳದಲ್ಲಿ ಬಹುದೊಡ್ಡ ಸ್ಮಾರಕ ನಿರ್ಮಾಣದ ಯೋಜನೆಯನ್ನು ಕೈಗೊಳ್ಳಲಾಗುತ್ತಿದೆ. ಸ್ಮಾರಕ ನಿರ್ಮಾಣಕ್ಕೆ ಕೇಂದ್ರ ಸರಕಾರ ೨,೫೦೦ ಕೋಟಿ ಮೌಲ್ಯದ ಎನ್‌ಟಿಸಿಯ ಇಂದು ಮಿಲ್ ಆವರಣವನ್ನು ಉಚಿತವಾಗಿ ನೀಡಿದೆ. ಆ ಸ್ಥಳದಲ್ಲಿ ?೭೮೦ ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಅವರ
೪೫೦ ಅಡಿ ಎತ್ತರದ ಸಮಾನತೆಯ ಪ್ರತಿಮೆಯ ಸ್ಥಾಪನೆ ಮಾಡಲಾಗುತ್ತಿದೆ. ಈ ಸ್ಮಾರಕವು ಚೈತ್ರ ಭೂಮಿಗೆ ಹೊಂದಿ ಕೊಂಡಂತೆ ಇದೆ. ಇಲ್ಲಿ ೪೦ ಸಾವಿರ ಚದರಡಿಯ ವಸ್ತು ಸಂಗ್ರಹಾಲಯವು ತಲೆಯೆತ್ತುತ್ತಿದೆ. ೧೩ ಸಾವಿರ ಜನ ಒಮ್ಮೆಗೆ ಪ್ರಾರ್ಥನೆ ಮಾಡಲು ಸಾಧ್ಯವಾಗುವ ‘ವಿಪಾಸನ’ ಸಭಾಂಗಣವನ್ನು ನಿರ್ಮಿಸಲಾಗುತ್ತಿದೆ. ೫೦,೦೦೦ ಚದರ ಅಡಿಯಲ್ಲಿ ಅಂಬೇಡ್ಕರ್ ಅವರ ಜೀವನ ಮತ್ತು ಕೆಲಸದೊಂದಿಗೆ ಸಂಬಂಧಿಸಿದ ಮಹತ್ವದ ಘಟನೆಗಳನ್ನು
ಚಿತ್ರಿಸುವ ಹೋರಾಟದ ಗ್ಯಾಲರಿಯು ಇದರ ಭಾಗವಾಗಿದೆ.
ಅಂಬೇಡ್ಕರ್ ಅವರು ತಮ್ಮ ಅನುಯಾಯಿಗಳೊಂದಿಗೆ ಭೌದ್ಧ ಧರ್ಮದ ದೀಕ್ಷೆ ಪಡೆದ ಸ್ಥಳವಾದ ನಾಗಪುರದ ದೀಕ್ಷಾ ಭೂಮಿಯ ಅಭಿವೃದ್ಧಿಗೆ ಮಹಾರಾಷ್ಟ್ರ ಸರಕಾರ ?೧೯೦ ಕೋಟಿ ಯೋಜನೆ ಕಾರ್ಯಗತ ಮಾಡುತ್ತಿದೆ. ನಾಗ್ಪುರದ ದೀಕ್ಷಾಭೂಮಿಗೆ ಎಲ್ಲಾ ವರ್ಗದ ಪ್ರವಾಸಿ ತಾಣದ ಸ್ಥಾನಮಾನ
ನೀಡಿದ ನಂತರ, ‘ಚೈತನ್ಯ ಭೂಮಿ’ ತಾಣಕ್ಕೂ ಎಲ್ಲಾ ವರ್ಗದ ಪ್ರವಾಸಿ ತಾಣದ ಸ್ಥಾನವನ್ನು ನೀಡಿzರೆ.ಇದರಿಂದ ಈ ಸ್ಥಳಗಳಿಗೆ ಐತಿಹಾಸಿಕ ಪ್ರಾಮುಖ್ಯ ದೊರೆತು ಸಮಗ್ರ ಅಭಿವೃದ್ಧಿಗೆ ದಾರಿಯಾಗಿದೆ.
ಅಂಬೇಡ್ಕರ್ ಅವರು ಜನ್ಮ ತಾಳಿದ ಮಧ್ಯಪ್ರದೇಶದ ಮೌವ್ ಎಂಬ ಸ್ಥಳದಲ್ಲಿ ಅವರ ಸ್ಮಾರಕ ನಿರ್ಮಿಸಲು ೧೯೯೧ರಲ್ಲಿ ಅಂದಿನ ಬಿಜೆಪಿ ಸರಕಾರದ ಮುಖ್ಯಮಂತ್ರಿ ಸುಂದರಲಾಲ್ ಪಟ್ವಾರವರು ಶಂಕುಸ್ಥಾಪನೆ ನೆರವೇರಿಸುತ್ತಾರೆ. ಈ ಸ್ಮಾರಕವು ೨೦೦೮ರಲ್ಲಿ ಸಿದ್ದವಾಗುತ್ತದೆ. ಅಂಬೇಡ್ಕರ್ ಅವರ ೧೨೫ನೇ ಜನ್ಮದಿನ ಸಮಾರಂಭಕ್ಕೆ ಮೋದಿಯವರು ಅವರ ಜನ್ಮಸ್ಥಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಕಟು ಸತ್ಯವೇನೆಂದರೆ ಅಂಬೇಡ್ಕರ್ ಅವರ ಜನ್ಮಸ್ಥಳಕ್ಕೆ ಭೇಟಿ ನೀಡಿದ ದೇಶದ ಮೊದಲ ಪ್ರಧಾನಿ ನರೇಂದ್ರ ಮೋದಿ. ಅಂಬೇಡ್ಕರ್ ಅವರ ಜನ್ಮಭೂಮಿ, ಶಿಕ್ಷಾ ಭೂಮಿ, ದೀಕ್ಷಾ ಭೂಮಿ, ಅವರು ಕೊನೆಯುಸಿರೆಳೆದ ಮಹಾಪರಿನಿರ್ವಾಣ ಭೂಮಿ ಮತ್ತು ಅವರ ಅಂತ್ಯಕ್ರಿಯೆ ನಡೆದ ಚೈತನ್ಯ ಭೂಮಿ ಹೀಗೆ ಈ ಐದು ಪವಿತ್ರ ಕ್ಷೇತ್ರಗಳಿಗೆ ಪಂಚತೀರ್ಥ ಎಂದು ನಾಮಕರಣ ಮಾಡಿ, ಅಂಬೇಡ್ಕರ್ ತೀರ್ಥಯಾತ್ರಾ ಕ್ಷೇತ್ರ ಗಳು ಎಂದು ಬಣ್ಣಿಸುತ್ತಾರೆ.
ನವಂಬರ್ ೨೬,೧೯೪೯ ರಂದು ಭಾರತದ ಸಂವಿಧಾನ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿತು. ಆ ದಿನ ‘ರಾಷ್ಟ್ರೀಯ ಕಾನೂನು ದಿನ’ ಎಂದೂ ಕರೆಯಲ್ಪಡುತ್ತಿತ್ತು. ಮೋದಿಯವರು ಪ್ರಧಾನಿಯಾದ ತರುವಾಯ ೨೬ ನವೆಂಬರ್ ಅನ್ನು ‘ಸಂವಿಧಾನ ದಿನ’ ವೆಂದು ಘೋಷಿಸಿತು. ದೇಶಾ ದ್ಯಂತ್ಯ ‘ಸಂವಿಧಾನ ದಿನ’ವನ್ನು ಈಗ ವಿಧ್ಯುಕ್ತವಾಗಿ ಆಚರಿಸಲಾಗುತ್ತಿದೆ. ನ್ಯಾಷನಲ್ ಪೇಮೆಂಟ್ಸ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಅಭಿವೃದ್ಧಿಪಡಿಸಿದ ಭಾರತೀಯ ಮೊಬೈಲ್ ಪಾವತಿ ಅಪ್ಲಿಕೇಶನ್ BHIM (ಭಾರತ್ ಇಂಟರ್ ಫೇಸ್ ಫಾರ್ ಮನಿ) ಯುನಿಫೇಡ್ ಪೇಮೆಂಟ್ ಇಂಟರ್ ಫೇಸ್ (UPI) ಆರಂಭಿಸಲಾಯಿತು.
‘ಭೀಮ್’ ಎಂದು ಡಾ.ಭೀಮರಾವ್ ಅಂಬೇಡ್ಕರ್ ಅವರ ಹೆಸರನ್ನು ಇಟ್ಟು ಗೌರವಿಸಲಾಗಿದೆ. ಮೋದಿಯವರು ಪ್ರಧಾನಿಯಾದ ಮೇಲೆ ದಲಿತ ಸಮು ದಾಯಕ್ಕೆ ಸೇರಿದ ರಾಮನಾಥ್ ಕೋವಿಂದ್ ಅವರನ್ನು ತದನಂತರ ಆದಿವಾಸಿ ಸಮುದಾಯದ ದ್ರೌಪದಿ ಮುರ್ಮ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿ ತುಳಿತ ಕ್ಕೊಳಗಾದ ಸಮಾಜಕ್ಕೆ ಸಾಮಾಜಿಕ ಶಕ್ತಿಯನ್ನು ತುಂಬುವ ಕೆಲಸ ಮಾಡಿದ್ದಾರೆ. ಎರಡನೆಯ ಬಾರಿ ಮೋದಿಯವರು ಪ್ರಧಾನಿಯಾಗಿ ಆಯ್ಕೆಯಾದಾಗ ಸೆಂಟ್ರಲ್ ಹಾಲ್‌ನಲ್ಲಿ ಇಡಲಾಗಿದ್ದ ಸಂವಿಧಾನದ ಪಿಠೀಕೆಯ ಪ್ರತಿಗೆ ವಂದಿಸಿ ತಮ್ಮ ಕಾರ್ಯಾರಂಭ ಮಾಡಿದ್ದನ್ನು ನಾವು ನೆನಪು ಮಾಡಿಕೊಳ್ಳ ಬಹುದು.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲೆ ನಡೆಯುವ ದೌರ್ಜನ್ಯದ ವಿರುದ್ಧದ ಕಾಯಿದೆಯು ಸರ್ವೋಚ್ಚ ನ್ಯಾಯಾಲಯದ ತೀರ್ಪಿನಿಂದ ದುರ್ಬಲ ವಾಗಿತ್ತು. ದೇಶದಲ್ಲಿ ದಲಿತ ಸಮಾಜದ ಮೇಲೆ ನಡೆಯುವ ದೌರ್ಜನ್ಯದ ಗಂಭೀರತೆಯ ಅರಿವಿದ್ದ ಮೋದಿಯವರು ಸಂಸತ್ತಿನಲ್ಲಿ ಕಾಯಿದೆಗೆ ತಿದ್ದುಪಡಿ ತಂದು ಅದಕ್ಕೆ ಹೆಚ್ಚಿನ ಬಲ ತುಂಬಿದ್ದಾರೆ. ದಲಿತ ವರ್ಗಕ್ಕೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲೀಕರಣ ಮಾಡುವ ಮೂಲಕ ತಮ್ಮ ಬದ್ಧತೆ ಯನ್ನು ಭಾಷಣಕ್ಕೆ ಸಿಮೀತಗೊಳಿಸಿಲ್ಲ. ಅಂಬೇಡ್ಕರ್ ಅವರ ವಿಚಾರ ಅವರ ಆಶಯಗಳಿಗೆ ಪೂರಕವಾಗಿ ಸ್ವಚ್ಛ ಭಾರತ, ಪ್ರತಿ ಮನೆಗಳಿಗೆ ಶೌಚಾಲಯ, ಎಲ್ಲ ಮನೆಗೂ ವಿದ್ಯುತ್ ಸಂಪರ್ಕ ಹೀಗೆ ಅನೇಕ ಕಲ್ಯಾಣ ಕಾರ್ಯಕ್ರಮ ಗಳನ್ನು ಜಾರಿಗೊಳಿಸಿದ್ದಾರೆ.
ಮೋದಿಯವರು, ‘ಬಾಬಾಸಾಹೇಬರಿಗೆ ನಮ್ಮ ಸರಕಾರ ನೀಡಿರುವ ಗೌರವವನ್ನು ಬಹುಶಃ ಯಾವ ಸರಕಾರವೂ ನೀಡಿಲ್ಲ. ಅವರ ಹೆಸರನ್ನು ರಾಜಕೀ ಯಕ್ಕೆ ಎಳೆದು ತರುವ ಬದಲು ಅವರು ತೋರಿಸಿದ ಹಾದಿಯಲ್ಲಿ ನಾವೆಲ್ಲರೂ ನಡೆಯಲು ಪ್ರಯತ್ನಿಸಬೇಕು’ ಎಂದು ಕಿವಿ ಮಾತು ಹೇಳುತ್ತಾರೆ.