Thursday, 19th September 2024

ಕಂಗನಾ ಬಂಗಲೆ ಧ್ವಂಸ ಪ್ರಕರಣ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಮುಂಬೈ: ತಮ್ಮ ಬಂಗಲೆಯ ಒಂದು ಭಾಗವನ್ನು ಧ್ವಂಸಗೊಳಿಸಿದ್ದರ ವಿರುದ್ಧ ಬಾಲಿವುಡ್‌ ನಟಿ ಕಂಗನಾ ರಾಣಾವತ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸೋಮವಾರ ಪೂರ್ಣಗೊಳಿ ಸಿದ ಬಾಂಬೆ ಹೈಕೋರ್ಟ್‌ ತೀರ್ಪು ಕಾದಿರಿಸಿದೆ. ‌

ಪಾಲಿ ಹಿಲ್ ಪ್ರದೇಶದಲ್ಲಿನ ತನ್ನ ಬಂಗಲೆಯ ಒಂದು ಭಾಗವನ್ನು ಬೃಹನ್‌ ಮುಂಬೈ ಮುನ್ಸಿ ಪಲ್ ಕಾರ್ಪೊರೇಷನ್ (ಬಿಎಂಸಿ) ನೆಲಸಮಗೊಳಿಸಿದ ಹಿನ್ನೆಲೆಯಲ್ಲಿ ಕಳೆದ ಸೆಪ್ಟೆಂಬರ್ 9 ರಂದು ನಟಿ ಹೈಕೋರ್ಟ್ ಮಟ್ಟಿಲೇರಿದ್ದರು. ಬಿಎಂಸಿಯ ನಡೆ ಕಾನೂನು ಬಾಹಿರ ಎಂದು ಘೋಷಿಸಬೇಕೆಂದೂ, ತಮಗೆ ಎರಡು ಕೋಟಿ ರೂಪಾಯಿ ಪರಿಹಾರ ನೀಡುವಂತೆ ಬಿಎಂಸಿಗೆ ಸೂಚನೆ ನೀಡಬೇಕು ಎಂದೂ ಕೋರ್ಟ್‌ಗೆ ರಾಣಾವತ್‌ ಮನವಿ ಮಾಡಿದ್ದರು.

ಮುಂಬೈ ಪೊಲೀಸರ ವಿರುದ್ಧ ನಾನು ನೀಡಿದ್ದ ಹೇಳಿಕೆ ಮಹಾರಾಷ್ಟ್ರದ ಶಿವಸೇನೆ ನೇತೃತ್ವದ ಸರ್ಕಾರವನ್ನು ಕೆರಳಿತ್ತು. ಹೀಗಾಗಿ ಸರ್ಕಾರ ಬಿಎಂಸಿ ಮೂಲಕ ನನ್ನ ಮನೆ ನೆಲಸಮಗೊಳಿಸಿದೆ ಎಂದು ತಮ್ಮ ವಕೀಲರ ಮೂಲಕ ಆರೋಪಿಸಿದ್ದರು.

ಆದರೆ, ಬಿಎಂಸಿ, ರಾಣಾವತ್‌ ಅವರು ತಮ್ಮ ಬಂಗಲೆಯನ್ನು ನಿಯಮಕ್ಕೆ ವಿರುದ್ಧವಾಗಿ ನವೀಕರಣ ಮಾಡಿದ್ದರು. ಅಂಥ ಭಾಗ ವನ್ನು ಕೆಡವುದು ಬಿಎಂಸಿಯ ಶಾಸನ ಬದ್ಧ ಅಧಿಕಾರವಾಗಿದೆ ಎಂದು ಹೇಳಿದೆ. ನ್ಯಾಯ ಮೂರ್ತಿಗಳಾದ ಎಸ್ ಜೆ ಕಥವಲ್ಲಾ ಮತ್ತು ಆರ್ ಐ ಚಾಗ್ಲಾ ಅವರನ್ನು ಒಳಗೊಂಡ ನ್ಯಾಯಪೀಠವು ಕಳೆದ ವಾರ ಮನವಿಯ ವಿಚಾರಣೆ ನಡೆಸಿತ್ತು‌.