Sunday, 15th December 2024

ಗ್ರಾಮ ಪಂಚಾಯತ್ ಮಾಜಿ ಸದಸ್ಯ ನಿಧನ

ಕೊಲ್ಹಾರ: ಪಟ್ಟಣದ ಬಾಗವಾನ ಸಮಾಜದ ಹಿರಿಯ ಮುಖಂಡರು ಹಾಗೂ ಗ್ರಾಮ ಪಂಚಾಯತ್ ಮಾಜಿ ಸದಸ್ಯರು ಆಗಿದ್ದ ಹಾಸೀಮ್ ಅಲಿ ಚೌಧರಿ (65) ಅಕಾಲಿಕವಾಗಿ ನಿಧನ ಹೊಂದಿದರು.

ಮೃತರು ಪತ್ನಿ, ಮೂವರು ಪುತ್ರರು, ಒಬ್ಬರು ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಸಂತಾಪ: ಸಚಿವ ಶಿವಾನಂದ ಪಾಟೀಲ್, ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ, ಮಾಜಿ ಜಿ ಪಂ ಸದಸ್ಯ ಕಲ್ಲು ದೇಸಾಯಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಬಿ ಪಕಾಲಿ, ಕಾಂಗ್ರೆಸ್ ಮುಖಂಡರಾದ ಉಸ್ಮಾನ್ ಪಟೇಲ್ ಖಾನ್, ದಾದಾ ಗೂಗಿಹಾಳ, ಜಾಕೀರ್ ಸೌದಾಗರ, ಪ ಪಂ ಸದಸ್ಯ ಸಿ.ಎಸ್ ಗಿಡ್ಡಪ್ಪಗೋಳ, ತೌಸೀಪ್ ಗಿರಗಾಂವಿ, ಎಂ ಆರ್ ಕಲಾದಗಿ, ದಸ್ತಗೀರ ಕಲಾದಗಿ, ಪತ್ರಕರ್ತ ಮಶಾಕ ಬಳಗಾರ ಹಾಗೂ ಇತರರು ಸಂತಾಪ ಸೂಚಿಸಿದ್ದಾರೆ.