25 ರಾಜ್ಯಗಳು, ನೇಪಾಳದಿಂದ ಪ್ರತಿನಿಧಿಗಳು ಭಾಗಿ
ಗೋಮೂತ್ರ ಔಷಧ ಮತ್ತು ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳ
ಬೆಂಗಳೂರು: ಗೋ ಆಧಾರಿತ ಪಂಚಗವ್ಯ ಚಿಕಿತ್ಸೆಯ ವೈಜ್ಞಾನಿಕ ಜ್ಞಾನವನ್ನು ಸಮಾಜಕ್ಕೆ ತಲುಪಿಸಲು, ಭಾರತೀಯ ಪ್ರಾದೇಶಿಕ ಗೋಮಾತೆಯ ಸಂರಕ್ಷಣೆ, ಸಂವರ್ಧನೆ ಮತ್ತು ಅನುಸಂಧಾನದ ಉದ್ದೇಶದಿಂದ ಡಿಸೆಂಬರ್ 1 ರಿಂದ 3 ರ ವರೆಗೆ ಕನಕಪುರ ರಸ್ತೆಯ ಆರ್ಟ್ ಆಫ್ ಲೀವಿಂಗ್ ಆವರಣ ದಲ್ಲಿ 11ನೇ ರಾಷ್ಟ್ರೀಯ ಪಂಚಗವ್ಯ ಚಿಕಿತ್ಸಾ ಮಹಾ ಸಮ್ಮೇಳನ 2023 ಆಯೋಜಿಸಲಾಗಿದೆ ಎಂದು ಕಾಂಚಿಪುರಂನ ಪಂಚಗವ್ಯ ವಿದ್ಯಾಪೀಠ ಮತ್ತು ಪಂಚಗವ್ಯ ವೈದ್ಯರ ಒಕ್ಕೂಟ ತಿಳಿಸಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ತಮಿಳುನಾಡಿನ ಕಾಂಚಿಪುರಂನ ಪಂಚಗವ್ಯ ವಿದ್ಯಾಪೀಠ ಮತ್ತು ಪಂಚಗತಿ ಗುರುಕುಲಂ ನ ಸಂಸ್ಥಾಪಕರಾದ ಗವ್ಯ ಸಿದ್ದ ಆಚಾರ್ಯ ಡಾ. ನಿರಂಜನ್ ವರ್ಮಾ, ಆರ್ಟ್ ಆಫ್ ಲೀವಿಂಗ್ ನ ರವಿಶಂಕರ್ ಗುರೂಜಿ, ಪಂಚಗವ್ಯ ಡಾಕ್ಟರ್ ಅಸೋಸಿಯೇಷನ್ ಗೌರವಾ ಧ್ಯಕ್ಷ ಆಚಾರ್ಯ ಚಂದು ಬಾಯ್ ಸುರಾನ. ಕರ್ನಾಟಕದ ಪಂಚಗವ್ಯ ಡಾಕ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಸುಧೀಂದ್ರನಾಥ್, ಉಪಾಧ್ಯಕ್ಷ ಪ್ರೊಫೆಸರ್ ಸಿದ್ದಪ್ಪ ಕುರುಬರ, ಕಾರ್ಯದರ್ಶಿ ಭಾರತಿ ಜೀವನ್ ಕುಮಾರ್, ಸಹ ಕಾರ್ಯದರ್ಶಿ ಶಶಿ ಶೇಖರ್ ಡಿ ಪುತ್ತೂರು, 25 ರಾಜ್ಯಗಳು ಮತ್ತು ನೇಪಾಳದಿಂದಲೂ ಪರಿಣಿತರು ಸಮ್ಮೇಳನದಲ್ಲಿ ಭಾಗವಹಿಸಲಿರುವುದಾಗಿ ತಿಳಿಸಿದ್ದಾರೆ.
ಪಂಚಗವ್ಯ ನಮ್ಮ ಬೆಳವಣಿಗೆಗೆ ಮತ್ತು ಪ್ರತಿ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಹೆಚ್ಚಿನ ಸಾಮರ್ಥ್ಯ ಹೊಂದಿದೆ. ಅರ್ಬುದ ರೋಗಕ್ಕೂ ಇದರಿಂದ ಚಿಕಿತ್ಸೆ ನೀಡಬಹುದಾಗಿದೆ. ಸರ್ವರೋಗಕ್ಕೂ ದಿವ್ಯ ಔಷಧಿಯಾಗಿದ್ದು, ಮನುಷ್ಯರಿಗೆ ಎಲ್ಲಾ ರೀತಿಯಲ್ಲಿ ಉಪಯುಕ್ತವಾಗಿದೆ. ರೈತರಿಗೆ ಅತ್ಯಂತ ಅವಶ್ಯಕವಾದ ಜೈವಿಕ ಉತ್ಪನ್ನವಾಗಿದೆ. ಆ ಮಣ್ಣಿನ ತತ್ವವನ್ನು ಹೆಚ್ಚಿಸುವುದೇ ಅಲ್ಲದೆ ವಿಷಮುಕ್ತ ಆಹಾರವನ್ನು ಬೆಳೆಯಲು ಇದು ಸಹಕಾರಿಯಾಗ ಲಿದೆ ಎಂದಿದ್ದಾರೆ.
ತಮ್ಮ ನೇತೃತ್ವದಲ್ಲಿ ಈಗಾಗಲೇ ದೇಶಾದ್ಯಂತ 15ಸಾವಿರ ಪಾರಂಪರಿಕ ವೈದ್ಯರ ಪರಂಪರೆಯನ್ನು ರೂಪಿಸಿದ್ದು, ರೋಗಮುಕ್ತ ಭಾರತವನ್ನಾಗಿ ಪರಿವರ್ತನೆ ಮಾಡುವುದೇ ಇದರ ಮೂಲ ಉದ್ದೇಶವಾಗಿದೆ. ಸಮ್ಮೇಳನದಲ್ಲಿ 15 ಪಂಚಗವ್ಯಗಳಾದ ಹಾಲು, ಮೊಸರು, ಮಜ್ಜಿಗೆ, ಸಗಣಿಯಿಂದ ಮತ್ತು ಗೋಮೂತ್ರದಿಂದ ತಯಾರಿಸಿದ ಔಷಧಿಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಇರುತ್ತವೆ. ಗೋಮಾತೆ ರಾಷ್ಟ್ರೀಯ ಪ್ರಾಣಿಯನ್ನಾಗಿ ಮಾಡುವುದು ನಮ್ಮ ಗುರಿಯಾಗಿದ್ದು, ಗೋ ಸಂತತಿಯನ್ನು ನಮ್ಮ ಮುಂದಿನ ಪೀಳಿಗೆಗಾಗಿ ಉಳಿಸಲು ಎಲ್ಲಾ ಧರ್ಮದವರಿಗೆ ಮನವಿ ಮಾಡುತ್ತಿದ್ದೇವೆ ಎಂದಿದ್ದಾರೆ.