• ಬೆಂಗಳೂರಿನಲ್ಲಿ ಹೊಸ ಅತ್ಯಾಧುನಿಕ ಘಟಕವನ್ನು ಸ್ಥಾಪಿಸುವ ಮೂಲಕ ಅನ್ವೇಷಣೆ ಮತ್ತು ಬೆಳವಣಿಗೆಗೆ ಪ್ರಮುಖ ಕೇಂದ್ರವನ್ನಾಗಿ ಭಾರತದ ಸ್ಥಾನವನ್ನು ಥಾಲೆಸ್ ಪುನಃಸ್ಥಾಪಿಸುತ್ತಿದೆ.
• ಥಾಲೆಸ್ ತನ್ನ 70ನೇ ವರ್ಷಾಚರಣೆಯನ್ನು ನಡೆಸಿದ್ದು, ಭಾರತ ಸರ್ಕಾರದ ಆತ್ಮನಿರ್ಭರ ಭಾರತ ಎಂಬ ಧ್ಯೇಯಕ್ಕೆ ಅನುಗುಣವಾಗಿ ಮೇಕ್ ಇನ್ ಇಂಡಿಯಾದ ವಿಷಯದಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದೆ.
• ಈ ವಿಸ್ತರಣೆಯು ಹೊಸ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತದೆ ಮತ್ತು 2027 ರ ವೇಳೆಗೆ ಇಂಜಿನಿಯರಿಂಗ್ ಸಿಬ್ಬಂದಿಯನ್ನು ದುಪ್ಪಟ್ಟು ಗೊಳಿಸುವ ಸಮೂಹದ ಯೋಜನೆಗೆ ಪೂರಕವಾಗಿದೆ.
ರಕ್ಷಣೆ, ವೈಮಾನಿಕ ಮತ್ತು ಡಿಜಿಟಲ್ ಗುರುತು ಮತ್ತು ಭದ್ರತೆ ವಲಯದಲ್ಲಿ ಜಾಗತಿಕ ಮುಖ್ಯಸ್ಥನಾಗಿರುವ ಥಾಲೆಸ್ ನಿನ್ನೆ ಬೆಂಗಳೂರಿನಲ್ಲಿ ಹೊಸ ಕಚೇರಿಯನ್ನು ತೆರೆದಿದೆ. ಥಾಲೆಸ್ ಏವಿಯೋನಿಕ್ಸ್ನ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿರುವ ಯಾನ್ನಿಕ್ ಅಸ್ಸೌದ್ ಈ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು ಮತ್ತು ಇವರ ಜೊತೆಗೆ ಭಾರತದಲ್ಲಿ ಥಾಲೆಸ್ನ ಉಪಾಧ್ಯಕ್ಷರು ಮತ್ತು ದೇಶೀಯ ನಿರ್ದೇಶಕರು ಆಶಿಶ್ ಸರಾಫ್ ಇದ್ದರು.
2019 ರಲ್ಲಿ ಉದ್ಘಾಟಿಸಿದ ಥಾಲೆಸ್ ಎಂಜಿನಿಯರಿಂಗ್ ಕಾಂಪಿಟೆನ್ಸ್ ಸೆಂಟರ್ (ಇಸಿಇ) ವಿಸ್ತರಣೆಯಾಗಿ ಹೊಸ ಕಟ್ಟಡ ಕೆಲಸ ಮಾಡುತ್ತದೆ ಮತ್ತು ಇದು ಈ ವಲಯದಲ್ಲಿ ಮತ್ತು ದೇಶದಲ್ಲಿ ಸಮೂಹದ ಮಹತ್ವಾಕಾಂಕ್ಷಿ ವಿಸ್ತರಣೆ ಯೋಜನೆಗಳಿಗೆ ಪೂರಕವಾಗಿ ಕೆಲಸ ಮಾಡುತ್ತದೆ. ಈ ಇಸಿಸಿ ಭಾರತದಲ್ಲಿ ವಿಶಿಷ್ಟ ಕೇಂದ್ರವಾಗಿದ್ದು, ಥಾಲೆಸ್ನ ಜಾಗತಿಕ ಅಗತ್ಯಗಳನ್ನು ಪೂರೈಸುವುದ್ಕಕೆ ನಾಗರಿಕ ಮತ್ತು ರಕ್ಷಣಾ ಉದ್ಯಮಗಳಲ್ಲಿ ಸಾಫ್ಟ್ವೇರ್ ಮತ್ತು ಹಾರ್ಡ್ ವೇರ್ ಸಾಮರ್ಥ್ಯದ ಮೇಲೆ ಹೆಚ್ಚು ಗಮನ ಹರಿಸಿದೆ. ಈ ಘಟಕ ಆರಂಭವಾದಾಗಿನಿಂದಲೂ ಉದ್ಯೋಗ ಸೃಷ್ಟಿ ಮತ್ತು ಕೌಶಲ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದು, 500 ಕ್ಕೂ ಹೆಚ್ಚು ಸಿಬ್ಬಂದಿಯನ್ನು ನೇಮಿಸಿಕೊಂಡಿದೆ.
ಪ್ರತಿ ವರ್ಷ ಸಂಶೋಧನೆ ಮತ್ತು ಅಭಿವೃದ್ಧಿಗೆ ಥಾಲೆಸ್ ಸುಮಾರು 4 ಬಿಲಿಯನ್ ಡಾಲರ್ ಹೂಡಿಕೆಯನ್ನು ಥಾಲೆಸ್ ಮಾಡುತ್ತದೆ. ನೋಯ್ಡಾದಲ್ಲಿರುವ ಹೆಚ್ಚುವರಿ ಕೇಂದ್ರದ ಜೊತೆಗೆ ಈ ಇಸಿಸಿ ಸೇರಿ, ಸಮೂಹದ ಮೂರು ಪ್ರಮುಖ ಇಂಜಿನಿಯರಿಂಗ್ ಕಾಂಪಿಟೆನ್ಸಿ ಸೆಂಟರ್ ಹಬ್ಗಳಲ್ಲಿ ಒಂದಾಗುತ್ತದೆ.
ಬೆಂಗಳೂರಿನಲ್ಲಿನ ಥಾಲೆಸ್ ಇಂಜಿನಿಯರಿಂಗ್ ತಂಡಗಳು ವೈಮಾನಿಕ ಮತ್ತು ರಕ್ಷಣೆ ಕ್ಷೇತ್ರಗಳಲ್ಲಿ ಅಧಿಕ ಮೌಲ್ಯದ ಸಿಸ್ಟಮ್ಗಳನ್ನು ಒದಗಿಸುತ್ತವೆ. ಅಲ್ಲದೆ, ಏರ್ ಟ್ರಾಫಿಕ್ ನಿರ್ವಹಣೆ, ಸಂಕೀರ್ಣ ಏವಿಯಾನಿಕ್ಸ್ ಸಿಸ್ಟಮ್ಗಳು, ಕಾಕ್ಪಿಟ್, ಫ್ಲೈಟ್ ನಿರ್ವಹಣೆ ಮತ್ತು ಕನೆಕ್ಟಿವಿಟಿ ಸಿಸ್ಟಮ್ಗಳು, ರಾಡಾರ್ ಸಾಫ್ಟ್ವೇರ್, ಏರ್ಬಾರ್ನ್ ಇಂಟಲಿಜೆನ್ಸ್ ಸರ್ವೇಲನ್ಸ್ ಮತ್ತು ರಿಕನಾಯಸೆನ್ಸ್ ಟ್ಯಾಕ್ಟಿಕಲ್ ಮ್ಯಾನೇಜ್ಮೆಂಟ್ ಸಿಸ್ಟಮ್ಗಳು ಇತ್ಯಾದಿ ವಲಯಕ್ಕೂ ಕೊಡುಗೆ ನೀಡುತ್ತದೆ.
ಅತ್ಯಾಧುನಿಕ ಸೌಲಭ್ಯವು ಆಧುನಿಕ, ಸುಸ್ಥಿರ ಮತ್ತು ಓಪನ್ ಆಫೀಸ್ ಕೆಲಸದ ವಾತಾವರಣವನ್ನು ಒದಗಿಸುತ್ತದೆ. ದ್ರಾವಿಡ ವಾಸ್ತುಶಿಲ್ಪ ಮತ್ತು ಬ್ರಾಹ್ಮಿ ಲಿಪಿಯಿಂದ ಪ್ರೇರಿತವಾದ ಈ ಸೈಟ್, ಸಮಕಾಲೀನ ವಿನ್ಯಾಸ ಮತ್ತು ಸಾಂಪ್ರದಾಯಿಕ ಸೌಂದರ್ಯದ ಸಮ್ಮಿಳನವಾಗಿದೆ. ಹೊಸ ಕಚೇರಿಯು ಅಂಗ ವಿಕಲ ಸ್ನೇಹಿ ಘಟಕವಾಗಿರಲಿದ್ದು, ಸ್ಮಾರ್ಟ್ ವರ್ಕಿಂಗ್ ಸ್ಪೇಸ್ ಆಗಿರಲಿದೆ. ಅಪಾರ ಹಸಿರು ಪ್ರದೇಶ ಮತ್ತು ಶಕ್ತಿ ಉಳಿತಾಯ ವೈಶಿಷ್ಟ್ಯಗಳು ಇದರಲ್ಲಿ ಇರಲಿವೆ. ಥಾಲೆಸ್ನ ಜಾಗತಿಕ ಸಾಮಾಜಿಕ ಮತ್ತು ಪರಿಸರದ ಬದ್ಧತೆಗಳಿಗೆ ಅನುಗುಣವಾಗಿ ಇದು ಇರಲಿದೆ.
“ಬೆಂಗಳೂರಿನಲ್ಲಿ ಈ ಹೊಸ ಘಟಕದ ಮೂಲಕ ಭಾರತದಲ್ಲಿ ನಮ್ಮ ಹೆಜ್ಜೆ ಗುರುತನ್ನು ಇನ್ನಷ್ಟು ವಿಸ್ತರಿಸಲು ನಾವು ಹೆಮ್ಮೆ ಹೊಂದಿದ್ದೇವೆ. ಬೆಂಗಳೂರಿನಲ್ಲಿ ನಮ್ಮ ಇಂಜಿನಿಯರಿಂಗ್ ಸೆಟಪ್ ಅನ್ನು ನಾವು ನೋಯ್ಡಾದಲ್ಲಿನ ಘಟಕಕ್ಕೆ ಅನುಗುಣವಾಗಿ ಬೆಳೆಸುತ್ತಿದ್ದು, ನಮ್ಮ ಜಾಗತಿಕ ಪರಿಣಿತಿ ಮತ್ತು ಸ್ಥಳೀಯ ಪ್ರತಿಭೆಯನ್ನು ಬಳಸಿಕೊಂಡು ದೇಶದ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುತ್ತೇವೆ ಮತ್ತು ಭಾರತ ಮತ್ತು ಜಾಗತಿಕ ಗ್ರಾಹಕರಿಗೆ ಹೊಸ ಅವಕಾಶಗಳು ಮತ್ತು ಅನ್ವೇಷಣೆಗಳನ್ನು ಪ್ರೋತ್ಸಾಹಿಸುತ್ತೇವೆ” ಎಂದು ಥಾಲೆಸ್ನ ಭಾರತೀಯ ದೇಶೀಯ ನಿರ್ದೇಶಕರು ಮತ್ತು ಉಪಾಧ್ಯಕ್ಷರಾದ ಆಶೀಶ್ ಸರಾಫ್ ಹೇಳಿದ್ದಾರೆ.