Sunday, 15th December 2024

ಡಿ.೧೧ ಕಂದಾಯ ಅದಾಲತ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ: ಕಂದಾಯ ಇಲಾಖೆಗೆ ಸಂಬ0ಧಿಸಿದ ವಿವಿಧ ಸೇವೆಗಳನ್ನು ತ್ವರಿತವಾಗಿ ಮಡಿಕೊಡವ ಉದ್ದೇಶದಿಂದ ಡಿ.೧೧ ರಂದು ಕಂದಾಯ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ತಹಸೀಲ್ದಾರ್ ಗೀತಾ ತಿಳಿಸಿದರು.

ತಾಲ್ಲೂಕು ಕಚೇರಿಯಲ್ಲಿ ಸೋಮವಾರ ಮಾಧ್ಯಮಮಿತ್ರರಿಗೆ ಈ ಮಾಹಿತಿ ಹಂಚಿಕೊAಡರು. ಈ ಕಾರ್ಯಕ್ರಮದಿಂದ ಸಾರ್ವಜನಿಕರಿಗೆ ವಿನಾಕಾರಣ ಕಚೇರಿಗೆ ಅಲೆಯುವುದು ತಪ್ಪುತ್ತದೆ. ಅಧಿಕಾರಿಗಳು, ಸಿಬ್ಬಂದಿ, ಹಾಗು ಸೇವೆ ಪಡೆಯವ ಸಾರ್ವಜನಿಕರು ಮುಖಾಮುಖಿಯಾಗಿ ಸಂಪರ್ಕ ಸಾಧಿಸಿ ಕೆಲಸ ಮಾಡಿಸಿಕೊಳ್ಳಲು ಅವಕಾಶವಿರುತ್ತದೆ ಇದರ ಸದುಪಯೋಗಪಡಿಸಿಕೊಳ್ಳಿ ಎಂದು ಮನವಿ ಮಾಡಿದರು.

ಪೌತಿ, ವಾರಸ, ಪೋಡಿ, ಖಾತೆ ಬದಲಾವಣೆ, ಪಹಣಿಯಲ್ಲಿ ತಿದ್ದುಪಡಿಗೆ ಸಂಬ0ಧಿಸಿದ0ತೆ ಈಗಾಗಲೇ ೪೦೦ ಅರ್ಜಿಗಳು ಸಲ್ಲಿಕೆಯಾಗಿವೆ. ಕಾಲಮಿತಿ ಯೊಳಗೆ ಇತ್ಯರ್ಥಪಡಿಸಿ ಕಂದಾಯ ಅದಾಲತ್‌ನ ಉದ್ದೇಶ ಈಡೇರಿಸುತ್ತೇನೆ. ಜನರಿಗೆ ಇಲಾಖೆಯ ಮೇಲೆ ವಿಶ್ವಾಸ ಮೂಡುವ ಕೆಲಸವನ್ನು ಈಗಾಗಲೇ ಆರಂಭಿಸಿದ್ದೇನೆ. ವಿಧವಾ ವೇತನ, ಸಂಧ್ಯಾಸುರಕ್ಷಾ, ಯೋಜನೆ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಯಡಿ ಫಲಾನುಭವಿಗಳು ಕಂದಾಯ ಅದಾಲತ್ ನಲ್ಲಿ ಅರ್ಜಿ ಸಲ್ಲಿಸಬಹುದೆಂದು ಮಾಹಿತಿ ನೀಡಿದರು.