ಬೆಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್ 10 ಕಾರ್ಯಕ್ರಮದಲ್ಲಿ ಒಂಬತ್ತನೇ ವಾರ ಸ್ಪರ್ಧಿಗಳನ್ನು ಎರಡು ತಂಡಗಳಾಗಿ ವಿಭಜಿಸಲಾಗಿದ್ದು, ಒಂದು ತಂಡ ಗಂಧರ್ವರಾಗಿದ್ದರೆ, ಇನ್ನೊಂದು ತಂಡ ರಾಕ್ಷಸರಾಗಿದ್ದಾರೆ. ಈ ಕಾಲ್ಪನಿಕ ಲೋಕಕ್ಕೆ ಕ್ಯಾಪ್ಟನ್ ಸ್ನೇಹಿತ್ ಒಡೆಯನಾಗಿದ್ದು, ಸಂಗೀತಾ ನೇತೃತ್ವದ ತಂಡ ರಾಕ್ಷಸರಾಗಿದ್ದರೇ, ಇತ್ತ ವರ್ತೂರು ಸಂತೋಷ್ ನೇತೃತ್ವದ ತಂಡ ಗಂಧರ್ವರಾ ಗಿದ್ದಾರೆ.
ಈ ಚಟುವಟಿಕೆ ವೇಳೆ ವಿನಯ್ ಹಾಗೂ ಕಾರ್ತಿಕ್ ಮಧ್ಯೆ ತಳ್ಳಾಟ, ನೂಕಾಟ ನಡೆದಿದ್ದರೇ, ನಮ್ರತಾ ಹಾಗೂ ಸಂಗೀತಾ ಮಧ್ಯೆಯೂ ಫಿಸಿಕಲ್ ಅಟ್ಯಾಕ್ ಆಯ್ತು.
ಫಿಸಿಕಲ್ ಅಟ್ಯಾಕ್ ಹೆಚ್ಚಾಗಿದ್ರಿಂದ ಆಟವನ್ನ ಸ್ವತಃ ಬಿಗ್‌ಬಾಸ್ ನಿಲ್ಲಿಸಿದ, ಬಳಿಕ ಯಾವುದೇ ನಿರ್ಧಾರ ತೆಗೆದುಕೊಳ್ಳದ ಸ್ನೇಹಿತ್‌ಗೆ ಸಂಗೀತಾ ಹಾಗೂ ತಂಡ ಕಟುವಾಗಿ ಟೀಕಿಸಿ, “ನೀವು ಯಾವ ಸೀಮೆ ಕ್ಯಾಪ್ಟನ್” ಅಂತ ಛೀಮಾರಿ ಹಾಕಿದ್ದಾರೆ. ರಾಕ್ಷಸರು ಹಾಗೂ ಗಂಧರ್ವರಿಗೆ ಬಾವುಟದ ಚಟುವಟಿಕೆ ಯನ್ನ ಬಿಗ್‌ಬಾಸ್ ನೀಡಿದ್ದು, ಟಾಸ್ಕ್ ಮುಗಿಯುವ ಹೊತ್ತಿಗೆ ಯಾರ ಬಾವುಟ ಹೆಚ್ಚು ಇರುತ್ತದೋ.. ಅವರು ಗೆದ್ದಂತೆ ಎಂದು ಘೋಷಿಸಿದರು.
ಟಾಸ್ಕ್ ವೇಳೆ ತಮ್ಮ ಬಾವುಟಗಳನ್ನು ಕಾಪಾಡಿಕೊಳ್ಳುವಲ್ಲಿ, ಎದುರಾಳಿ ತಂಡದ ಬಾವುಟಗಳನ್ನು ಕದಿಯುವಲ್ಲಿ/ ನಾಶ ಪಡಿಸುವ ವೇಳೆ ಎರಡೂ ತಂಡಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಆಗ ವಿನಯ್ “ಕಾಲುಗಳನ್ನ ಲಾಕ್ ಮಾಡಿಟ್ಟುಕೋ.. ಉಸಿರಾಡೋಕೆ ಆಗಬಾರದು. ಎಷ್ಟು ಗಟ್ಟಿಯಾ ಗುತ್ತೋ, ಅಷ್ಟು ಗಟ್ಟಿಯಾಗಿ ಹಿಡಿದಿಟ್ಟುಕೋ 30 ಸೆಕೆಂಡ್ಸ್” ಎಂದು ನಮ್ರತಾಗೆ ಹೇಳಿಕೊಟ್ಟರು.
ಫಿಸಿಕಲ್ ಅಟ್ಯಾಕ್ ಜಾಸ್ತಿಯಾದಾಗ, ಮಧ್ಯಪ್ರವೇಶಿಸಿದ ಬಿಗ್‌ಬಾಸ್ “ಆಟವನ್ನ ನಿಲ್ಲಿಸಿ” ಎಂದು ಘೋಷಿಸಿದರೂ, ಕಾರ್ತಿಕ್, ಸಂಗೀತಾ ಅವರನ್ನ ವಿನಯ್ ಕೆಣಕುತ್ತಲೇ ಇದ್ದರು. ಆಗ ಕಾರ್ತಿಕ್ ನನ್ನ ಕುತ್ತಿಗೆ ಹಿಡಿದಿದ್ದ. ಉಸ್ತುವಾರಿಯಾಗಿ ಏನ್ಮಾಡ್ತಿದ್ದೀರಾ? ಯಾವ ಸೀಮೆ ಉಸ್ತುವಾರಿ ನೀವು? ಎಂದರು. ತನಿಷಾ ಸಹ ಫಿಸಿಕಲ್ ಅಟ್ಯಾಕ್ ಆಗ್ತಿರೋವಾಗ ನಿಲ್ಲಿಸಬೇಕಿತ್ತು ಎಂದು ಸ್ನೇಹಿತ್ ಹೇಳಿದರು.