Sunday, 15th December 2024

ಅಂಬೇಡ್ಕರ್ ಅರಿವು ಯುವಕರಿಗೆ ಅವಶ್ಯಕ: ಮಂಟೇಸ್ವಾಮಿ

ತುಮಕೂರು: ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ್ದ ಅರಿವಿನ ರಥವನ್ನು ಎಳೆಯುವ ನಿಟ್ಟಿನಲ್ಲಿ ಅರಿವನ್ನು ಮೂಡಿಸಿ ಕೊಳ್ಳ ಬೇಕಾಗಿದೆ  ಎಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ  ಅಭಿಪ್ರಾಯಪಟ್ಟರು.
ರಾಜ್ಯ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿಯಿಂದ ಹಮ್ಮಿಕೊಂಡಿದ್ದ ೬೭ನೇ ಅಂಬೇಡ್ಕರ್ ಪರಿನಿಬ್ಬಾಣದಲ್ಲಿ ಮಾತನಾಡಿದ ಅವರು, ಏರುಗತಿ ಯಲ್ಲಿದ್ದ ಸಂಘಟನೆಗಳು, ಇಂದು ನಿಷ್ಕ್ರಿಯ ವಾಗಿದ್ದು, ಪ್ರಶ್ನಿಸುವ ಮನೋಭಾವನೆಯೇ ದೂರವಾಗಿದೆ ಎಂದರು.
ದಲಿತ ಸಂಘಟನೆಗಳು, ರೈತ ಸಂಘಟನೆಗಳು ಪ್ರತಿಭಟನೆ ಹಮ್ಮಿಕೊಂಡರೇ ಸರ್ಕಾರಗಳು ನಡುಗುತ್ತಿದ್ದವು, ಇಂದು ಸಂಘಟ ನೆಗಳು ವಿಫಲವಾಗಿವೆ, ಸಂವಿಧಾನ ಮತ್ತು ಹಕ್ಕುಗಳಿಗಾಗಿ ಮತ್ತೆ ಸಂಘಟಿತವಾಗಿ ಹೋರಾಡಬೇಕಾದ ಅನಿವಾರ್ಯತೆ ಇದೆ ಎಂದರು.
ದೇಶದ ಮಹಿಳೆಯರಿಗೆ ಅಂಬೇಡ್ಕರ್ ಅನೇಕ ಕೊಡುಗೆ ನೀಡಿದ್ದಾರೆ ಆದರೆ ಮಹಿಳೆಯರ ಅಂಬೇಡ್ಕರ್ ಅವರನ್ನು ಸ್ಮರಿಸುವುದಿಲ್ಲ,  ಅಂಬೇಡ್ಕರ್ ಅವರಿಂದ ಏಳ್ಗೆ ಸಾಧಿಸಿದ ಸಮುದಾಯಗಳು ಇಂದು ಅಂಬೇಡ್ಕರ್ ಅವರನ್ನು ಮರೆತಿವೆ, ಶಿಕ್ಷಣ, ಸಂಘಟನೆ, ಹೋರಾಟ ಮೂಲಕ ಸಂವಿಧಾನವನ್ನು ಉಳಿಸಲು ಪ್ರಯತ್ನಿಸೋಣ ಎಂದು ಕರೆ ನೀಡಿದರು.
ರಾಜ್ಯ ಎಸ್ಸಿಎಸ್ಟಿ  ಸರ್ಕಾರಿ ನೌಕರರ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಡಾ.ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿ, ವಿದ್ಯಾವಂತರು ಅಂಬೇ ಡ್ಕರ್ ರಥವನ್ನು ಎಳೆಯುವ ನೈತಿಕ ಜವಾಬ್ದಾರಿ ನಮ್ಮ ಮೇಲಿದೆ, ನೈತಿಕತೆ ಮತ್ತು ತ್ಯಾಗದಿಂದ ಸಂವಿಧಾನ ಉಳಿಸುವ ಮೂ ಲಕ ಅಂಬೇಡ್ಕರ್ ಅವರ ಸಂವಿಧಾನ ಉಳಿಸುವ ಸಂಕಲ್ಪ ಮಾಡಬೇಕಿದೆ ಎಂದು ಹೇಳಿದರು.
ನಟ ಹನುಮಂತೇಗೌಡ ಮಾತನಾಡಿ,  ಸಂವಿಧಾನ ಇಲ್ಲದೇ ಇದ್ದರೆ ಇಷ್ಟೊತ್ತಿಗೆ ಭಾರತ ಛಿದ್ರವಾಗುತ್ತಿತ್ತು. ಸಂವಿಧಾನದ ಆಶಯಗಳನ್ನು ಉಳಿಸಲು, ಸಂವಿಧಾನಕ್ಕೆ ಧಕ್ಕೆಯಾಗದಂತೆ ಉಳಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ, ಸಂವಿಧಾನವೇ ನಮ್ಮ ಧರ್ಮಗ್ರಂಥ, ಅಂಬೇಡ್ಕರ್ ಅವರೇ ನಮ್ಮ ನಾಯಕ ಎಂಬುದು  ಜನರ ಅರಿವಿಗೆ ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ದಲಿತ ಮುಖಂಡ ನರಸೀಯಪ್ಪ, ಸಂಘದ ಉಪಾಧ್ಯಕ್ಷ ನರಸಿಂಹಮೂರ್ತಿ, ಪ್ರಧಾನ ಕಾರ್ಯದರ್ಶಿ ಎಚ್.ನಾಗರಾಜು, ಕಾರ್ಯ ದರ್ಶಿ ಹನುಮಂತರಾಜು, ಮಾರುತಿ, ಮಂಜಣ್ಣ, ರಾಜಣ್ಣ, ರಮೇಶ್, ಗಂಗಾಧರ್, ಅಂಜನ್ ಕುಮಾರ್, ಕೊರಟಗೆರೆ ತಾಲ್ಲೂಕು ಅಧ್ಯಕ್ಷ ಚಿಕ್ಕಣ್ಣ, ಹನುಮಂತರಾಯಪ್ಪ, ಆರ್ ಎಫ್ ಒ ಸುರೇಶ್ ಸೇರಿದಂತೆ ಇತರರಿದ್ದರು.