ಇಂಡಿ: ಚಿಕ್ಕಮಗಳೂರ ನ್ಯಾಯವಾದಿ ಪ್ರೀತಂ ಎನ್.ಟಿ ಹಲ್ಮೇಟ್ ಧರಿಸಿಲ್ಲ ಎಂಬ ಕಾರಣಕ್ಕೆ ಪೊಲೀಸರು ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ ಪ್ರಕರಣ ವನ್ನು ಖಂಡಿಸಿ ನ್ಯಾಯವಾದಿಗಳ ಸಂಘದ ವತಿಯಿಂದ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ನೂರಾರು ನ್ಯಾಯವಾದಿಗಳು ಸೇರಿ ಪೊಲೀಸ್ ಗುಂಡಾ ವರ್ತನೆ ವಿರುದ್ಧ ಪ್ರತಿಭಟನೆ ಮಾಡಿ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮಿನಿವಿಧಾನಸೌಧಾದಲ್ಲಿರುವ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ನೂರಕ್ಕೂ ಅಧಿಕ ನ್ಯಾಯವಾದಿಗಳು ಸೇರಿ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ ಇವರ ಮುಖಾಂತರ ಸಿ.ಎಂ ಸಿದ್ದರಾಮಯ್ಯ ನವರಿಗೆ ಮನವಿ ಸಲ್ಲಿಸಿದರು.
ಈ ಘಟನೆ ಕುರಿತು ನ್ಯಾಯವಾದಿಗಳು ಪ್ರತಿಭಟನೆ ನಡೆಸಲು ಮುಂದಾದಾಗ ಅಲ್ಲಿನ ಪೊಲೀಸ್ ಅಧಿಕಾರಿಗಳು ಕಾರಣ ವಿಲ್ಲದೆ ವಕೀಲರ ಮೇಲೆ ಮೂರು ಪ್ರಕರಣಗಳು ದಾಖಲಿಸುವ ಮೂಲಕ ಸಂವಿಧಾನಿಕ ವಿರೂಧ ನಡೆ ಪ್ರದರ್ಶಿಸಿದ್ದಾರೆ. ಘಟನೆ ಕಾರಣರಾದ ಸಿಬಂದ್ದಿ ಯನ್ನು ಪಿ.ಎಸ್.ಆಯ್ ಸೇರಿದಂತೆ ಪೊಲೀಸ್ ಸಿಬ್ಬಂದಿಗಳನ್ನು ನೌಕರಿಯಿಂದ ಅಮಾನತ್ತುಗೊಳಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕು ಎಂದು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಪಿ.ಬಿ.ಪಾಟೀಲ, ಕಾರ್ಯದರ್ಶಿ ಎಸ್.ಆರ್ ಬಿರಾದಾರ ಸರ್ವಸದಸ್ಯರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಒಂದು ವೆಳೆ ಕಾನೂನು ಕ್ರಮ ಜರುಗಿಸದಿದ್ದರೆ ರಾಜ್ಯಾದ್ಯೆಂತ ಉಗ್ರಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಸಿ.ಓಡಿ ತನಿಖೆಯಿಂದ ಪೊಲೀಸರೆ ತನೀಖೆ ಮಾಡುವದರಿಂದ ನ್ಯಾಯವಾದಿಗಳಿಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿಲ್ಲ. ನಿವೃತ್ತ ನ್ಯಾಯಾಧೀಶರ ನೈತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಇನ್ಮುಂದೆ ರಾಜ್ಯದಲ್ಲಿ ಈ ರೀತಿ ಘಟನೆಗಳು ನಡಯದಂತೆ ನೋಡಿಕೊಳ್ಳಬೇಕು ರಾಜ್ಯ ಸರಕಾರ ವಕೀಲರ ರಕ್ಷಣಾ ಕಾಯ್ದೆ ಜಾರಿ ತರಬೇಕು . ವಕೀಲರಿಗೆ ನ್ಯಾಯಯುತ ನ್ಯಾಯ ಒದಗಿಸಲು ಅನುಕೂಲ ಮಾಡಿಕೊಡಬೇಕು ಎಂದು ನ್ಯಾಯವಾದಿ ಸೋಮಶೇಖರ ನಿಂಬರಗಿಮಠ ಆಗ್ರಹಿಸಿದ್ದಾರೆ.
ವಕೀಲ ಸಂಘದ ಅಧ್ಯಕ್ಷ ಪಿ.ಬಿ ಪಾಟೀಲ, ಕಾರ್ಯದರ್ಶಿ ಎಸ್ ಆರ್ ಬಿರಾದಾರ, ಸಿದ್ದಣ್ಣಾ ಬೂದಿಹಾಳ, ಎಂ.ಸಿ ಬಿರಾದಾರ, ಎಸ್.ಎಲ್ ನಿಂಬರಗಿಮಠ, ಪಿ.ಜಿ ನಾಡಗೌಡ, ಜೆ.ಕೆ ಕಾಂಬಳೆ, ಸೋಮಶೆಖರ ನಿಂಬರಗಿಮಠ, ನಾಡಪುರೋಹಿತ, ಪಿ.ಎಂ ಮೂರಮನ್, ವಾಯ್.ಎಸ್ ಪೂಜಾರಿ, ಎ.ಜಿ ಜ್ಯೋಶಿ, ಎಂ.ಎಸ್ ತೇಲಿ, ಬಿ.ಕೆ ಮಸಳಿ,ಎಸ್.ಜೆ ವಾಲೀಕಾರ, ಎ.ಎಂ ಬಿರಾದಾರ, ಎಮ್ ಎಸ್ ಪಾಟೀಲ, ಬಿ.ಬಿ ಬಿರಾದಾರ, ಸಿ.ಎಸ್ ಬಲವಂತ, ಜೆ.ವ್ಹಿ ಪಾಟೀಲ, ಎಮ್.ಪಿ ಕುಲಕರ್ಣಿ, ಅಶೋಕ ದೋತ್ರೆ, ಝಡ್ .ಬಿ ಬಾಗವಾನ, ಬಳುಂಡಗಿ, ಎಸ್.ಆರ್ ಮುಜಗೊಂಡ ಸೇರಿದಂತೆ ನೂರಾರು ವಕೀಲರು ಉಪಸ್ಥಿತ ರಿದ್ದರು.