Thursday, 12th December 2024

ರಕ್ತದಾನದ ಅರಿವು ಪ್ರತಿಯೊಬ್ಬರಲ್ಲಿಯೂ ಮೂಡಬೇಕು: ವಿಶ್ವನಾಥ್ ಹತ್ತಾರ್ 

ತುಮಕೂರು: ರಕ್ತದಾನದ ಅರಿವು ಪ್ರತಿಯೊಬ್ಬರಲ್ಲಿಯೂ ಮೂಡಬೇಕು ಎಂದು ಎಚ್.ಡಿ.ಎಫ್.ಸಿ ಬ್ಯಾಂಕ್ ಕ್ಲಸ್ಟರ್ ಹೆಡ್ ವಿಶ್ವನಾಥ್ ಹತ್ತಾರ್ ಕರೆ ನೀಡಿದರು.
ನಗರದ ಎಚ್.ಡಿ.ಎಫ್.ಸಿ ಬ್ಯಾಂಕ್  ಮುಖ್ಯ ಶಾಖೆಯಲ್ಲಿ  ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ರಕ್ತದಾನದ ಬಗ್ಗೆ ತಪ್ಪು ಮಾಹಿತಿ ನೀಡಬಾರದು. ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸಬಹುದು ಎಂದರು.
ಎಚ್.ಡಿ.ಎಫ್.ಸಿ ಬ್ಯಾಂಕ್ ಕ್ಲಸ್ಟರ್ ಹೆಡ್ ಪ್ರವೀಣ್ ಸಂಜೀವ್ ಮಾತನಾಡಿ, 2007ರಿಂದ ಬ್ಯಾಂಕಿನಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ರಕ್ತದಾನ, ನೇತ್ರದಾನ, ದೇಹದಾನದಂತಹ ಉತ್ತಮ ಕಾರ್ಯಗಳು ಹೆಚ್ಚಾಗಿ ನಡೆಯಲಿ ಎಂದು ತಿಳಿಸಿದರು.
ಎಚ್.ಡಿ.ಎಫ್.ಸಿ ಬ್ಯಾಂಕ್ ಸರಕಾರಿ ವ್ಯವಹಾರಗಳ ಏರಿಯಾ ಹೆಡ್ ಗೋಪಾಲ್ ಮಾತನಾಡಿ, ಪ್ರತಿವರ್ಷ ಹಮ್ಮಿಕೊಳ್ಳುವ ರಕ್ತದಾನ ಶಿಬಿರದಲ್ಲಿ ಬ್ಯಾಂಕಿನ ಸಿಬ್ಬಂದಿಗಳು ರಕ್ತದಾನ ಮಾಡಿ ಪ್ರೇರಣೆ ಯಾಗಿದ್ದಾರೆ ಎಂದರು.
ಜಿಲ್ಲಾ ವರದಿಗಾರ ರಂಗನಾಥ ಕೆ.ಮರಡಿ ಮಾತನಾಡಿ, ರಕ್ತವನ್ನು ಕೃತಕವಾಗಿ ಉತ್ಪಾದಿಸುವ ಯಾವುದೇ ಕಾರ್ಖಾನೆ ಪ್ರಪಂಚದಲ್ಲಿ ಇಲ್ಲ. ಸ್ವಾಭಾ ವಿಕವಾಗಿ ರಕ್ತ ಉತ್ಪಾದನೆ ಆಗುತ್ತದೆ. ಸಂಕಷ್ಟದಲ್ಲಿದ್ದವರಿಗೆ ರಕ್ತದಾನ ಮಾಡಿ ಜೀವಕ್ಕೆ ಆಸರೆಯಾಗಬೇಕು ಎಂದರು.
ಇದೇ ವೇಳೆ ಬ್ಯಾಂಕ್‌ ಸಿಬ್ಬಂದಿಗಳಾದ ಅಭಿಲಾಷ್, ಅಶ್ವಿನಿ , ಶಶಿಧರ್, ಪೂಜಾನಾಯ್ಕ್  ಸೇರಿದಂತೆ 30 ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು. ಇವರುಗಳಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಸ್ಪತ್ರೆ ಬ್ಲಡ್ ಬ್ಯಾಂಕ್ ಮುಖ್ಯಸ್ಥ ಡಿ.ಶೇಖ್,  ಎಚ್.ಡಿ.ಎಫ್.ಸಿ ಬ್ಯಾಂಕ್ ಬ್ರಾಂಚ್ ಮ್ಯಾನೇಜರ್ ಗಳಾದ ವಸಂತ, ವಿಶ್ವಾಸ್, ವರಕೇರಪ್ಪ ಹಾಗೂ ಸಿಬ್ಬಂದಿಗಳು ಇದ್ದರು.