Saturday, 14th December 2024

ತುಮಕೂರು ವಿವಿ ಬಿದರೆಕಟ್ಟೆ ಕ್ಯಾಂಪಸ್ ಗೆ ಗಂಗಾಧರಯ್ಯ ಹೆಸರಿಡಲು ಆಗ್ರಹ 

ತುಮಕೂರು: ಬಿದರೆಕಟ್ಟೆಯಲ್ಲಿ ನಿರ್ಮಾಣವಾಗುತ್ತಿರುವ ತುಮಕೂರು ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್‌ಗೆ ಶಿಕ್ಷಣ ಭೀಷ್ಮ ಡಾ.ಎಚ್.ಎಂ. ಗಂಗಾಧರಯ್ಯ ಅವರ ಹೆಸರಿಡಬೇಕೆಂದು ಕನ್ನಡಸೇನೆ,ಹಾಗೂ ವಿವಿಧ ಕನ್ನಡಪರ, ದಲಿತ ಸಂಘಟನೆಗಳ ಮುಖಂಡರು ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮತ್ತು ಕುಲಸಚಿವರಾದ ನಾಯಿದಾ ಜಮ್ಹ್, ಜಮ್ಹ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕನ್ನಡ ಸೇನೆಯ ಅಧ್ಯಕ್ಷ ಧನಿಯಕುಮಾರ್,ಕುಣಿಗಲ್ ತಾಲೂಕು ಅಮೃತೂರಿನಲ್ಲಿ ಹುಟ್ಟಿದ ಡಾ.ಎಚ್.ಎಮ್.ಗಂಗಾಧರಯ್ಯ ಸ್ವಾತಂತ್ರ ಪೂರ್ವದಲ್ಲಿ ಮಹಾತ್ಮಗಾಂಧಿ, ವಿನೋಭಾ ಭಾವೆ ಅವರ ಕರೆಗಳಿಗೆ ಓಗೊಟ್ಟು, ಅನೇಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿ, ಗ್ರಾಮೀಣ ಭಾಗದ ಬಡ,ದಲಿತ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಆಶಯದೊಂದಿಗೆ ಸನಿವಾಸ ಪ್ರೌಢಶಾಲೆಯೊಂದನ್ನು ಆರಂಭಿಸಿ, ಹಂತ ಹಂತವಾಗಿ ಶಾಲಾ, ಕಾಲೇಜುಗಳ ಜೊತೆಗೆ, ಮೆಡಿಕಲ್, ಇಂಜನಿಯರಿಂಗ್ ಕಾಲೇಜುಗಳನ್ನು ಸ್ಥಾಪನೆ ಮಾಡಿ ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ಒದಗಿಸಿದ್ದಾರೆ ಎಂದರು.
ಈ ವೇಳೆ  ಹಿರಿಯ ಕ್ರೀಡಾಪಟು ಟಿ.ಕೆ.ಆನಂದ್, ಪಿ.ಎನ್.ರಾಮಯ್ಯ,ಪ್ರಕಾಶ್ ಚಕ್ರವರ್ತಿ,ಕನ್ನಡ ಪ್ರಕಾಶ್,ಸತೀಶ್,ಉಮೇಶ್,ಕೋಮಲ ವೀರಭದ್ರಯ್ಯ, ಆದಿಲ್ ಪಾಷ,ಮಹೇಶ್,ರಾಮಣ್ಣ,ಹಿಂದುಳಿದ ಸಮುದಾಯಗಳ ಒಕ್ಕೂಟದ ಮುಖಂಡರಾದ ಕೆಂಪರಾಜು,ಮಂಜೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.