ವೀಕೆಂಡ್ ವಿತ್ ಮೋಹನ್
camohanbn@gmail.com
ಗೂಳಿಹಟ್ಟಿ ಶೇಖರ್ ವಾಟ್ಸ್ಯಾಪ್ ಹೆಸರಿನಲ್ಲಿದ್ದ ಸಂದೇಶದಲ್ಲಿ ದಾಖಲಾಗಿದ್ದ ಆಡಿಯೋ ತುಣುಕಿನಲ್ಲಿ, ತಾವು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಸಂಸ್ಥಾಪಕ ಹೆಡ್ಗೆವಾರ್ ಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ದಲಿತ ನೆಂಬ ಕಾರಣಕ್ಕೆ ತಮ್ಮನ್ನು ಒಳಗೆ ಬಿಡಲು ನಿರಾಕರಿಸಿದರು ಎಂಬ ಆರೋಪವಿತ್ತು. ಘಟನೆ ನಡೆದ ೬ ತಿಂಗಳ ನಂತರ ಗೂಳಿಹಟ್ಟಿ ಶೇಖರ್ ಸಂಘದ ವಿರುದ್ಧ ಹೀಗೆ ಆರೋಪಿಸಿದ್ದರು. ಅವರು ಬಹುಶಃ ತಮ್ಮ ಜೀವನದಲ್ಲಿ ಸಂಘದ ಶಾಖೆಗೆ ಹೋಗಿದ್ದಿದ್ದರೆ ಹೀಗೆ ಆರೋಪಿಸುತ್ತಿರಲಿಲ್ಲ.
ದೇಶದಲ್ಲಿರುವ ಸಂಘದ ಎಲ್ಲಾ ಕಚೇರಿಗಳಿಗೂ ವರ್ಷದ ೩೬೫ ದಿನವೂ ಮುಕ್ತ ಆಹ್ವಾನ ಇದ್ದೇ ಇರುತ್ತದೆ. ಶಾಖೆಯಲ್ಲಿ ಭಾಗವಹಿಸಿದವರಿಗೆ ಜತೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಹವರ್ತಿಯ ಜಾತಿ ತಿಳಿದಿರುವುದಿಲ್ಲ. ದೇಶದ ಯಾವುದೇ ಮೂಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾದರೆ ಮೊದಲು ಜನರ ಸಹಾಯಕ್ಕೆ ಬರುವುದು ಆರೆಸ್ಸೆಸ್ ಕಾರ್ಯಕರ್ತರು. ಸದ್ಯ ಚೆನ್ನೈ ನಗರದಲ್ಲಿ ಚಂಡಮಾರುತದಿಂದ ಉಂಟಾದ ಪ್ರವಾಹ ಪರಿಸ್ಥಿತಿಯಲ್ಲಿ ಸಿಲುಕಿರುವ ಜನರ ಸಹಾಯಕ್ಕೆ
ನಿಂತಿರುವುದೂ ಸಂಘದ ಕಾರ್ಯಕರ್ತರೇ. ಜಾತಿಯನ್ನು ಮೀರಿದ ಸಂಘಟನೆಯ ಮೂಲಕ ಸುಭದ್ರ ಭಾರತವನ್ನು ಕಟ್ಟುವುದೇ ಆರೆಸ್ಸೆಸ್‌ನ ಮೂಲ ಉದ್ದೇಶ. ಆರೆಸ್ಸೆಸ್‌ಗೆ ಆರೋಪಗಳು ಹೊಸದೇನಲ್ಲ.
ಸಂಘದ ಸರಸಂಘಚಾಲಕರ ಜಾತಿಯನ್ನು ಮುನ್ನೆಲೆಗೆ ತಂದು ಮನುವಾದಿಗಳೆಂಬ ಆರೋಪವನ್ನು ಎಡಚರರು ೧೯೨೫ರಿಂದಲೂ ಮಾಡುತ್ತಲೇ ಬಂದಿದ್ದಾರೆ. ಆರೋಪ ಮಾಡಿದವರಿಗೆ ಸರಸಂಘಚಾಲಕರ ಜಾತಿಯ ಕಲ್ಪನೆಯೇ ಇರುವುದಿಲ್ಲ. ಅವರ ಕುಟುಂಬಸ್ಥರೂ, ತಮ್ಮ ಮನೆಯವರು ಸಂಘದ ಪ್ರಮುಖರೆಂದು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ಬಾಬಾ ಸಾಹೇಬರು ಮತ್ತು ಸಂಘದ ಸಂಸ್ಥಾಪಕರಾದ ಡಾ.ಹೆಡ್ಗೆವಾರ್ ಅವರ ಆಲೋಚನೆಗಳಲ್ಲಿ ಬಹಳಷ್ಟು ಸಾಮ್ಯತೆಯಿತ್ತು. ಸಮಾಜದಲ್ಲಿರುವ ಜಾತಿವ್ಯವಸ್ಥೆಯನ್ನು ಡಾ.ಹೆಡ್ಗೆವಾರ್ ಎಂದೂ ಬೆಂಬಲಿಸಲಿಲ್ಲ.
ಹಿಂದೂಗಳನ್ನು ಒಗ್ಗೂಡಿಸುವುದೊಂದೇ ಅವರ ಧ್ಯೇಯವಾಗಿತ್ತು. ಭಾರತದಲ್ಲಿರುವ ಜಾತಿವ್ಯವಸ್ಥೆಯನ್ನು ಬದಿಗೊತ್ತಿ, ರಾಷ್ಟ್ರ ನಿರ್ಮಾಣ ದಲ್ಲಿ ಹಿಂದೂಗಳನ್ನು ಒಂದುಗೂಡಿಸುವ ಸಲುವಾಗಿ ಅವರು ಸಂಘವನ್ನು ಕಟ್ಟಿದರು. ಸಮಾಜದಲ್ಲಿ ಸಾಮರಸ್ಯವಿಲ್ಲದೆ ಸಮಾನತೆಯನ್ನು ರೂಪಿಸುವುದು ಸಾಧ್ಯ ವಿಲ್ಲವೆಂಬುದು
ಡಾ.ಹೆಡ್ಗೆವಾರ್ ಮತ್ತು ಅಂಬೇಡ್ಕರ್ ಇಬ್ಬರ ನಿಲುವಾಗಿತ್ತು. ೧೯೪೭ರ ನವೆಂಬರ್ ೧೫ರಂದು ದೆಹಲಿಯಲ್ಲಿ ಮಾಡಿದ ಭಾಷಣದಲ್ಲಿ ಬಾಬಾ ಸಾಹೇಬರು, ‘ಭಾರತದಲ್ಲಿ ಅಸಂಖ್ಯ ಜಾತಿಗಳಿವೆ. ಇದರಿಂದಲೇ ಸಮಾಜದಲ್ಲಿ ಪ್ರತ್ಯೇಕತೆಯ ಭಾವನೆ ಬೆಳೆಯುತ್ತದೆ. ಇದರಿಂದಲೇ ಪರಸ್ಪರ ದ್ವೇಷ, ತಿರಸ್ಕಾರ ತಲೆದೋರುತ್ತವೆ. ನಾವು ಒಂದು ರಾಷ್ಟ್ರವಾಗಿ ಎದ್ದು ನಿಲ್ಲುವುದಾದಲ್ಲಿ, ಮೊದಲು ನಮ್ಮ ಮಾರ್ಗದಲ್ಲಿರುವ ಅಡೆತಡೆಗಳನ್ನು ನಿವಾರಿಸಬೇಕು. ಒಂದು ರಾಷ್ಟ್ರವಾಗಿ ನಿಂತುಕೊಂಡಲ್ಲಿ ಮಾತ್ರ ಬಂಧುತ್ವದ ಭಾವನೆ ಅರಳುತ್ತದೆ’ ಎನ್ನುತ್ತಾರೆ.
ಅಂಬೇಡ್ಕರ್ ಮತ್ತು ಹೆಡ್ಗೆವಾರ್ ಅವರ ಕಾರ್ಯ ಶೈಲಿಗಳು ಭಿನ್ನವಾಗಿ ಕಂಡರೂ, ಇಬ್ಬರ ದಿಕ್ಕೂ ಒಂದೇ ಆಗಿತ್ತೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಇಬ್ಬರೂ ಸಮಾಜ ದಲ್ಲಿ ಸಮಾನತೆಯ ಪರವಾಗಿದ್ದವರು. ಇಬ್ಬರ ಆರಂಭದ ಬಿಂದುಗಳು ಬೇರೆಯಾಗಿದ್ದರಿಂದ, ಅವರು ಅನುಸರಿಸುತ್ತಿದ್ದಂಥ ಮಾರ್ಗಗಳೂ ತುಸು ಭಿನ್ನ ವಾಗಿ ಕಾಣುತ್ತವೆ. ೧೯೩೪ರಲ್ಲಿ ಸಂಘಧ ಶಿಬಿರವನ್ನು ಸಂದರ್ಶಿ ಸಲು ಮಹಾತ್ಮ ಗಾಂಧಿಯವರು ಬಂದಿದ್ದರು. ಶಿಬಿರದಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರಿಗೆ ಇತರರ ಜಾತಿಯ ಅರಿವೇ ಇರಲಿಲ್ಲ ಮತ್ತು ಒಬ್ಬರು ಮತ್ತೊಬ್ಬರ ಜಾತಿಯನ್ನು ಕೇಳಿ ತಿಳಿದು ಕೊಳ್ಳುವ ಯತ್ನವನ್ನೇ ಮಾಡಲಿಲ್ಲ. ಎಲ್ಲರ ಮನದಲ್ಲಿಯೂ
ತಾವು ಕೇವಲ ಹಿಂದೂಗಳಷ್ಟೇ ಎಂಬ ಮನೋಭಾವವಿತ್ತು. ಶಿಬಿರದಲ್ಲಿ ಎಲ್ಲರೂ ಕೂರುವುದು, ಏಳುವುದು, ಊಟ ಮಾಡುವುದು, ಕೆಲಸ ಮಾಡುವುದು ಒಟ್ಟಾಗಿಯೇ ಸಾಗುತ್ತಿತ್ತು. ಇದನ್ನು ಕಂಡು ಆಶ್ಚರ್ಯಚಕಿತರಾಗಿದ್ದ ಗಾಂಧೀಜಿ, ಡಾ.ಹೆಡ್ಗೆವಾರ್‌ರವರು ಅಸ್ಪೃಶ್ಯತೆಯನ್ನು ಅತ್ಯಂತ ಯಶಸ್ವಿಯಾಗಿ ನಿವಾರಿಸಿರುವುದನ್ನು ಕೊಂಡಾಡಿದ್ದರು.
ಪ್ರಸ್ತುತ ಆರೆಸ್ಸೆಸ್ ಹಾಗೂ ದಲಿತರ ನಡುವೆ ಬಿರುಕು ಮೂಡಿಸಲು ನಡೆಯುತ್ತಿರುವ ಕುತಂತ್ರದ ಮಾದರಿಯನ್ನು ಪ್ರಗತಿಪರರೆನಿಸಿಕೊಂಡವರು ಹಿಂದೆಯೂ ಯತ್ನಿಸಿದ್ದರು. ಬಾಬಾ ಸಾಹೇಬರು ಕೆಲವು ಶಾಸ್ತ್ರೀಯ ಕಾರಣದಿಂದಾಗಿ ತಮ್ಮ ದೀಕ್ಷಾ ಸಮಾರಂಭಕ್ಕಾಗಿ ನಾಗಪುರವನ್ನು ಆಯ್ಕೆಮಾಡಿಕೊಂಡಿದ್ದರು. ಆದರೆ ಕೆಲವು ಪ್ರಗತಿಪರರು, ಸಂಘದ ಕೇಂದ್ರವು ನಾಗಪುರದಲ್ಲಿರುವುದರಿಂದ ಅವರಿಗೆ ಸಂದೇಶ ರವಾನಿಸಲು ನಾಗಪುರವನ್ನು ಅಂಬೇಡ್ಕರ್ ಆಯ್ಕೆ ಮಾಡಿ
ಕೊಂಡಿದ್ದಾರೆಂದು ಸುಳ್ಳುಸುದ್ದಿ ಹಬ್ಬಿಸಿದ್ದರು.
ಇದನ್ನು ತಿಳಿದ ಬಾಬಾ ಸಾಹೇಬರು ಭಾಷಣದ ಆರಂಭದಲ್ಲಿ, ‘ಬೌದ್ಧ ಮತದ ಹರಡುವಿಕೆಯಲ್ಲಿ ನಾಗಪುರದ ಜನರು ಪ್ರಮುಖ ಪಾತ್ರ ವಹಿಸಿದ್ದು, ಈ ಕಾರಣಕ್ಕಾಗಿಯೇ ಈ ಊರನ್ನು ಆಯ್ಕೆಮಾಡಿಕೊಂಡಿರುವೆ; ಕೆಲವರು ಇದರ ವಿಚಾರವಾಗಿ ಹಬ್ಬಿಸುತ್ತಿರುವುದೆಲ್ಲ ಸುಳ್ಳುಸುದ್ದಿ’ ಎಂದು ಹೇಳುವ ಮೂಲಕ ಪ್ರಗತಿಪರರಿಗೆ ಅಂದೇ ಸರಿಯಾದ ಸಂದೇಶವನ್ನು ತಲುಪಿಸಿದ್ದರು. ಮಹಾತ್ಮ ಗಾಂಧಿಯವರ ‘ಹರಿಜನ’ ಪದಬಳಕೆಯ ಬಗ್ಗೆ ಬಾಬಾ ಸಾಹೇಬರಿಗೆ ತಮ್ಮದೇ ಆದ ಶಂಕೆಯಿತ್ತು. ಈ ವಿಷಯದಲ್ಲಿ, ಸಂಘದ ಎರಡನೇ ಸರಸಂಘಚಾಲಕರಾಗಿದ್ದ ಗುರೂಜಿಯವರ ನಿಲುವೂ ಇದೇ ಆಗಿತ್ತು. ‘ತಮ್ಮನ್ನು ಇತರರಿಂದ ಬೇರ್ಪಡಿಸುತ್ತಾರೆಂಬ ಒಂದೇ ಒಂದು ಅಂಶ ದಿಂದ, ದಲಿತರನ್ನು ಹರಿಜನರೆಂದು ಕರೆಯುವುದು ಉಪಯುಕ್ತವಲ್ಲ; ಈ ಪದಬಳಕೆಯಿಂದ ಅವರಲ್ಲಿ ಪ್ರತ್ಯೇಕತೆಯ
ಭಾವ ಮತ್ತಷ್ಟು ಹೆಚ್ಚುತ್ತದೆ.
ಮುಂದೊಂದು ದಿನ ಇದನ್ನೇ ರಾಜಕೀಯ ಅಸವಾಗಿ ಬಳಸಿಕೊಳ್ಳಬಹುದು’ ಎಂದು ಗುರೂಜಿ ಮಹಾತ್ಮ ಗಾಂಧಿಯವರಿಗೆ ಹೇಳಿದ್ದರು. ಆದರೆ ಅಂಥ ಭೀತಿಯಿಲ್ಲವೆಂದು ಗಾಂಽಜಿ ಗುರೂಜಿಯವರಿಗೆ ಹೇಳಿ ಕಳುಹಿಸಿದ್ದರು. ಜಾತಿ ವ್ಯವಸ್ಥೆಯೆಂಬುದು ಕೇವಲ ಹಳ್ಳಿ ಅಥವಾ ನಗರ ಪ್ರದೇಶಗಳಿಗೆ ಸೀಮಿತ ವಾಗಿರಲಿಲ್ಲ. ಕಾಡುಗಳಲ್ಲಿ ವಾಸವಾಗಿದ್ದಂಥ ಆದಿವಾಸಿಗಳಲ್ಲಿಯೂ ಇತ್ತು. ಬಾಬಾ ಸಾಹೇಬರಿಗೆ ವನವಾಸಿಗಳ ಬಗ್ಗೆ ಅಪಾರ ಕಾಳಜಿಯಿತ್ತು. ಅವರನ್ನು
ಮುಖ್ಯವಾಹಿನಿಗೆ ತಂದು ಒಳ್ಳೆಯ ಶಿಕ್ಷಣ ಕೊಡಿಸಿ, ಸಮಾಜ ದಲ್ಲಿ ಅವರಿಗೆ ಉತ್ತಮ ಸ್ಥಾನಮಾನ ದಕ್ಕಿಸಿಕೊಡಬೇಕೆಂಬ ಹಂಬಲ ಅವರಿಗಿತ್ತು. ‘ಸಾವಿರಾರು ವರ್ಷಗಳಿಂದ ತಮ್ಮದೇ ಆದ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿರುವ ಆದಿವಾಸಿಗಳು ಹಲವು ರೋಗಗಳಿಂದ ಬಳಲುತ್ತಿದ್ದಾರೆ.
ಅವರಿಗೆ ಸರಿಯಾದ ಆಶ್ರಯವಿಲ್ಲ. ಅವರನ್ನು ಸಮೀಪಿಸಿ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡರೆ ಅವರನ್ನು ರಕ್ಷಿಸಲು ಸಾಧ್ಯ’ ಎಂದು ಬಾಬಾ ಸಾಹೇಬರು ಹೇಳಿದ್ದರು. ಬಾಬಾ ಸಾಹೇಬರಂತೆ ಗುರೂಜಿಯವರೂ ವನವಾಸಿಗಳು ಮತ್ತು ಗಿರಿಜನರ ಬಗ್ಗೆ ಆತ್ಮೀಯತೆಯಿಂದ ಯೋಚಿಸುತ್ತಿದ್ದರು. ಸಂಘದ ಪ್ರಮುಖ ಕಾರ್ಯಕರ್ತರಾಗಿದ್ದ ಬಾಳಾ ಸಾಹೇಬ ದೇಶಪಾಂಡೆಯವರನ್ನು ಅವರು ವನವಾಸಿಗಳ ನಡುವೆ ಕೆಲಸಕ್ಕಾಗಿ ನಿಯೋಜಿಸಿದರು. ಬಾಳಾಸಾಹೇಬರು ದೊಡ್ಡದೊಂದು ಯುವಪಡೆಯನ್ನು ಕಟ್ಟಿಕೊಂಡು ಛತ್ತೀಸ್ ಗಡದಲ್ಲಿ ತಮ್ಮ ಕೆಲಸಕ್ಕೆ ಚಾಲನೆ ನೀಡಿ ವನವಾಸಿಗಳ ಶಿಕ್ಷಣದ ರಚನಾತ್ಮಕ ಕೆಲಸವನ್ನು ಕೈಗೆತ್ತಿಕೊಂಡರು. ಮತ್ತೊಂದೆಡೆ ಈ ತಂಡದ ಸದಸ್ಯರು ವನವಾಸಿಗಳ ಸಮಸ್ಯೆಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿದರು. ವನವಾಸಿಗಳು ಕಾಡುಗಳ ಮೇಲೆ
ಹೊಂದಿದ್ದ ಪರಂಪರಾನುಗತ ಹಕ್ಕನ್ನು ಸರಕಾರವು ಕಿತ್ತು ಕೊಂಡಿತ್ತು.
ಅದನ್ನು ವಾಪಸ್ ಪಡೆಯಲು ಜನಜಾಗರಣ ಅಭಿಯಾನ ನಡೆಸಿದರು. ಉತ್ಪನ್ನಗಳನ್ನು ವನವಾಸಿಗಳಿಂದ ಕಡಿಮೆ ಬೆಲೆಯಲ್ಲಿ ಖರೀದಿಸಿ ಪೇಟೆಯಲ್ಲಿ ದುಬಾರಿ ಬೆಲೆಗೆ ಮಾರಿ ಹಣ ಮಾಡುತ್ತಿದ್ದಂಥ ವರ್ತಕರ ಬಗ್ಗೆ ಅರಿವು ಮೂಡಿಸುವ ಚಳವಳಿಯನ್ನು ರೂಪಿಸಲಾಯಿತು. ಈ ಕೆಲಸಗಳನ್ನು ೧೯೭೭ರಲ್ಲಿ ‘ವನವಾಸಿ ಕಲ್ಯಾಣ ಆಶ್ರಮ’ವೆಂಬ ಅಖಿಲ ಭಾರತೀಯ ವ್ಯವಸ್ಥೆಗೆ ಒಳಪಡಿಸಲಾಯಿತು. ೧೯ನೇ ಶತಮಾನದಲ್ಲಿ ಕೇರಳದಲ್ಲಿ ಕಾಣಬರುತ್ತಿದ್ದ ಅಸ್ಪೃಶ್ಯತೆಯ ಆಚರಣೆ ತೀರಾ ದಯನೀಯವಾಗಿತ್ತು. ದಲಿತರು ಉಚ್ಚವರ್ಣೀಯರಿಂದ ಸುಮಾರು ೬೪ ಗಜದಷ್ಟು ದೂರದಲ್ಲಿ ನಿಂತು ಮಾತನಾಡಬೇಕಿತ್ತು. ಮಹಿಳೆಯರು ಸೊಂಟಕ್ಕಿಂತ ಮೇಲೆ ವಸ ಉಡುವಂತಿರಲಿಲ್ಲ. ಇದನ್ನು ಕಂಡ ಸ್ವಾಮಿ ವಿವೇಕಾನಂದರು ಕೇರಳವನ್ನು ‘ಹುಚ್ಚಾಸ್ಪತ್ರೆ’ ಎಂದಿದ್ದರು.
ಇಂಥ ಕೇರಳದಲ್ಲಿ ಬದಲಾವಣೆಯ ಗಾಳಿ ಬೀಸಿ, ಗುರುವಾಯೂರು ದೇಗುಲ ಪ್ರವೇಶಕ್ಕೆ ಸತ್ಯಾಗ್ರಹ, ತಿರುವಾಂಕೂರ್ ಮಹಾರಾಜರಿಂದ ಮಂದಿರ ಪ್ರವೇಶಕ್ಕೆ
ಅವಕಾಶದಂಥ ಐತಿಹಾಸಿಕ ಘಟನೆಗಳು ನಡೆದವು. ಅಷ್ಟೇಕೆ, ಕಂಚಿ ಕಾಮಕೋಟಿ ಶಂಕರಾಚಾರ್ಯ ಶ್ರೀ ಜಯೇಂದ್ರ ಸರಸ್ವತಿಯವರ ಸಮ್ಮುಖದಲ್ಲಿ, ಅನ್ಯಜಾತಿಯ ೨೯ ಮಂದಿಗೆ ಪೌರೋಹಿತ್ಯದಲ್ಲಿ ತರಬೇತಿ ನೀಡಿ, ಸುಮಾರು ೪೦,೦೦೦ ಜನರ ಸಮ್ಮುಖದಲ್ಲಿ ರುದ್ರಾಕ್ಷಿ ಮಾಲೆ ಸಮೇತ ಕಂಚಿ ಕಾಮಕೋಟಿ ಪೀಠದ ಅಽಕೃತ ಮೊಹರನ್ನು ಒತ್ತಿ ಪ್ರಮಾಣ ಪತ್ರವನ್ನು ಪ್ರದಾನಿಸಲಾಯಿತು.
ಕೇರಳದಲ್ಲಿ ಸಾಮರಸ್ಯ ಮೂಡಿಸಲು ನಡೆದ ಈ ದೊಡ್ಡಯತ್ನದ ಹಿಂದಿದ್ದುದು ಆರೆಸ್ಸೆಸ್‌ನ ಹಿರಿಯ ಪ್ರಚಾರಕ ಪಿ.ಮಾಧವನ್ ಅವರ ಶಾಂತಪ್ರಯತ್ನ. ಆರೆಸ್ಸೆಸ್‌ನ ಪರಿವಾರದಲ್ಲಿ ಆದಷ್ಟು ಅಂತರ್ಜಾತೀಯ ವಿವಾಹಗಳು ಮತ್ತೆಲ್ಲೂ ಆಗಿಲ್ಲ. ಆದರೆ ಸಂಘದ ಕಾರ್ಯ ಕರ್ತರು ಇತರರಂತೆ ಪ್ರಚಾರ ಗಿಟ್ಟಿಸದೆ ಕೆಲಸ ಮಾಡುವುದರಿಂದ, ಆರೆಸ್ಸೆಸ್‌ನ ಸಾಮಾಜಿಕ ಕಳಕಳಿಯ ಹಲವು ಕಾರ್ಯಗಳು ಜನರಿಗೆ ತಿಳಿಯುವುದಿಲ್ಲ. ಆರೆಸ್ಸೆಸ್‌ನವರು ಹಾಗೂ ಬಾಬಾ ಸಾಹೇಬರು ಸಮಾಜದಲ್ಲಿನ ಜಾತಿಪದ್ಧತಿಯ ವಿರುದ್ಧ ಗಟ್ಟಿಯಾಗಿ ನಿಂತವರು. ಇಬ್ಬರಿಗೂ ರಾಜಕೀಯದ ಅರಿವಿಲ್ಲದ ಕಾರಣ ಚುನಾವಣೆಗಳನ್ನು ಎದುರಿಸುವುದು ಕಷ್ಟವಾಗಿತ್ತು.
ಬಾಬಾ ಸಾಹೇಬರು ತಾವು ಕಟ್ಟಿದ ಪಕ್ಷದಿಂದ ಚುನಾವಣೆಗೆ ನಿಂತಾಗ, ಅನೇಕ ಅಸ್ಪೃಶ್ಯರು ಮತ ಹಾಕಲಿಲ್ಲ. ಇದರ ಆಳವನ್ನರಿತ ಬಾಬಾ ಸಾಹೇಬರು ತಮ್ಮ
‘ಷೆಡ್ಯೂಲ್ಡ್ ಕ್ಯಾಸ್ಟ್’ ಪಕ್ಷವನ್ನು ವಿಸರ್ಜಿಸಿ, ಎಲ್ಲಾ ಜಾತಿಯವರ ವಿಶ್ವಾಸವನ್ನು ಗಳಿಸಲು ‘ರಿಪಬ್ಲಿಕನ್’ ಪಕ್ಷವನ್ನು ಕಟ್ಟುವತ್ತ ಯೋಚಿಸಿದ್ದರು. ಬಾಬಾ ಸಾಹೇಬರ ಅನು ಯಾಯಿಗಳು ಹಾಗೂ ಆರೆಸ್ಸೆಸ್ ಮಧ್ಯೆ ದೊಡ್ಡದೊಂದು ಕಂದಕವನ್ನು ಸೃಷ್ಟಿಸಲು ಕಮ್ಯುನಿಸ್ಟರು ಸಂಘದ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಆಗಾಗ ಮಾಡುತ್ತಿರುತ್ತಾರೆ. ಸಂಘವೆಂದರೆ ಕೇವಲ ಬ್ರಾಹ್ಮಣರಿಗೆ ಸೇರಿದ್ದೆಂದು ಸುಳ್ಳು ಸುದ್ದಿಗಳನ್ನು ಹಬ್ಬಿಸಿ ದಲಿತರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿರುತ್ತಾರೆ.
ಆರೆಸ್ಸೆಸ್ ಆರಂಭವಾದ ದಿನದಿಂದಲೂ ಜಾತಿಯೆಂಬ ಭೇದಭಾವವನ್ನು ಎಲ್ಲಿಯೂ ಮಾಡಲಿಲ್ಲ, ಮಾಡುವುದಿಲ್ಲ. ಸಮಾಜದಲ್ಲಿನ ಜಾತಿವ್ಯವಸ್ಥೆಯ ವಿರುದ್ಧ ಬಾಬಾ ಸಾಹೇಬರು ಹೊಂದಿದ್ದ ನಿಲುವನ್ನೇ ಆರೆಸ್ಸೆಸ್ ಇಂದಿಗೂ ಹೊಂದಿದೆ. ತನ್ನನ್ನು ನಿಂದಿಸುವವರಿಗೆ ಆರೆಸ್ಸೆಸ್ ಎಂದಿಗೂ ಉತ್ತರಿಸುವುದಿಲ್ಲ; ಸಂಘವು ಆನೆಯಿದ್ದಂತೆ, ಅದು ರಸ್ತೆಯಲ್ಲಿ ಸಾಗುವಾಗ ನಾಯಿ ಬೊಗಳಿದರೆ ಆನೆಗೆ ಏನೂ ಆಗುವುದಿಲ್ಲ. ನಿಂದಕರ ಬಗ್ಗೆ ತಲೆ ಕೆಡಿಸಿಕೊಳ್ಳದ ಆರೆಸ್ಸೆಸ್ ತನ್ನ ಮೂಲ ಉದ್ದೇಶವಾದ, ಹಿಂದೂ ಧರ್ಮದಲ್ಲಿನ ಜಾತಿ ಪದ್ಧತಿಯ ನಿರ್ಮೂಲನೆಯ ಮೂಲಕ ಹಿಂದೂಗಳನ್ನು ಒಗ್ಗೂಡಿಸಿ ದೇಶ ಕಟ್ಟುವ ಕೆಲಸವನ್ನು ಮಾಡುತ್ತಲೇ ಇರು
ತ್ತದೆ. ಇನ್ನು ಎರಡು ವರ್ಷ ಕಳೆದರೆ, ಸಂಘವು ಸ್ಥಾಪನೆಯಾಗಿ ೧೦೦ ವರ್ಷವಾಗುತ್ತದೆ. ರಾಜಕೀಯ ಅಡೆತಡೆ, ನಿಂದನೆ, ನಿಷೇಧದ ನಡುವೆಯೂ ಒಂದು ಶತಮಾನ ಪೂರೈಸಿದ ಜಗತ್ತಿನ ಏಕೈಕ ಸಂಘಟನೆ ಬಹುಶಃ ರಾಷ್ಟ್ರೀಯ ಸ್ವಯಂ ಸೇವಕ ಸಂಘ.