Saturday, 14th December 2024

ಅರಣ್ಯ ಸಂಪತ್ತನ್ನ ಉಳಿಸುವುದು ಎಲ್ಲರ ಕರ್ತವ್ಯ

ಚಿಕ್ಕನಾಯಕನಹಳ್ಳಿ: ವನ್ಯ ಜೀವಿಗಳ ಉಳಿವು ಹಾಗೂ ಅರಣ್ಯದ ಮಹತ್ವದ ಬಗ್ಗೆ ಮಕ್ಕಳು ಅಗತ್ಯವಾಗಿ ತಿಳಿದು ಕೊಳ್ಳಬೇಕು ಎಂದು ಅರಣ್ಯವಲ ಯಾಧಿಕಾರಿ ಆರ್.ಅರುಣ್ ಹೇಳಿದರು.

ಕಿತ್ತೂರಾಣಿ ಚೆನ್ನಮ್ಮ ಶಾಲೆಯ ಮಕ್ಕಳನ್ನು ಚಿಣ್ಣರ ದರ್ಶನ ಯೋಜನೆಡಿಯಲ್ಲಿ ಅರಣ್ಯ ಇಲಾಖೆಯಿಂದ ಬನ್ನೇರುಘಟ್ಟಕ್ಕೆ ಪ್ರವಾಸಕ್ಕೆ ಕಳುಹಿಸುವ ಮುನ್ನ ಮಾತನಾಡಿದರು. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಕಾಡನ್ನ ನಾಶಮಾಡಿ ನಾಡು ಕಟ್ಟುತಿದ್ದಾನೆ. ಅರಣ್ಯ ನಾಶವಾದರೆ ವನದಲ್ಲಿ ವಾಸಿಸುವ ವನ್ಯಜೀವಿಗಳು ನಾಡಿಗೆ ಬರುವಂತಾಗಿದೆ. ಅರಣ್ಯ ಸಂಪತ್ತನ್ನ ಉಳಿಸುವುದು ಎಲ್ಲರ ಕರ್ತವ್ಯವಾಗಿದ್ದು ವನ್ಯ ಜೀವಿಗಳ ಪೀಳಿಗೆಯು ಉಳಿಯಬೇಕು ಈನಿಟ್ಟಿನಲ್ಲಿ ಅರಣ್ಯ ಸಂಪತ್ತಿನ ಮೌಲ್ಯ ಹಾಗು ಕಾಡು ಪ್ರಾಣಿಗಳ ಬದಕನ್ನ  ಚಿಕ್ಕವಯಸ್ಸಿನಿಂದಲೆ ತಿಳಿದು ಕೊಳ್ಳಬೇಕೆಂದರು.
ಪ್ರವಾಸಕ್ಕೆ ತೆರಳುತ್ತಿರುವ ಈ ಮಕ್ಕಳಿಗೆ ಬನ್ನೇರುಘಟ್ಟದಲ್ಲಿ ಅರಣ್ಯ ನಿರ್ವಹಣೆ ಬಗ್ಗೆ ಮಾಹಿತಿ ಮತ್ತು ಕಾಡು ಪ್ರಾಣಿಗಳನ್ನು ವೀಕ್ಷಿಸಲು ಸಫಾರಿಯಾನ ವನ್ನು ವ್ಯವಸ್ಥೆ ಮಾಡಲಾಗಿದೆ. ಪಶುವೈದ್ಯರಾದ ದಿವಾಕರ್ ಹಸಿರು ನಿಶಾನೆ  ನೀಡಿದರು. ಅರಣ್ಯ ಇಲಾಖೆಯ ಶೇಖರ್   ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಪ್ರಿನ್ಸಿಪಾಲ್ ಜಿ.ಲೋಕೇಶ್ ˌಶಾಲಾ ಸಿಬ್ಬಂದಿ ತಾಲ್ಲೂಕು ಅರಣ್ಯ ಇಲಾಖೆಯ ಸಿಬ್ಬಂದಿ 8ನೇತರಗತಿಯ 50 ವಿದ್ಯಾರ್ಥಿಗಳೊಂದಿಗೆ ಬನ್ನೇರು ಘಟ್ಟಕ್ಕೆ ತೆರಳಿದರು.

ವನ್ಯ ಜೀವಿಗಳ ಉಳಿವು ಹಾಗೂ ಅರಣ್ಯದ ಮಹತ್ವದ ಬಗ್ಗೆ ಮಕ್ಕಳು ಅಗತ್ಯವಾಗಿ ತಿಳಿದು ಕೊಳ್ಳಬೇಕು  ಎಂದು ಅರಣ್ಯವಲಯಾಧಿಕಾರಿ ಆರ್.ಅರುಣ್ ಹೇಳಿದರು.

 ಕಿತ್ತೂರಾಣಿ ಚೆನ್ನಮ್ಮ ಶಾಲೆಯ ಮಕ್ಕಳನ್ನು ಚಿಣ್ಣರ ದರ್ಶನ ಯೋಜನೆಡಿಯಲ್ಲಿ ಅರಣ್ಯ ಇಲಾಖೆಯಿಂದ ಬನ್ನೇರುಘಟ್ಟಕ್ಕೆ ಪ್ರವಾಸಕ್ಕೆ ಕಳುಹಿಸುವ ಮುನ್ನ ಮಾತನಾಡಿದರು. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಕಾಡನ್ನ ನಾಶಮಾಡಿ ನಾಡು ಕಟ್ಟುತಿದ್ದಾನೆ ಅರಣ್ಯ ನಾಶವಾದರೆ ವನದಲ್ಲಿ ವಾಸಿಸುವ ವನ್ಯಜೀವಿಗಳು ನಾಡಿಗೆ ಬರುವಂತಾಗಿದೆ.
ಅರಣ್ಯ ಸಂಪತ್ತನ್ನ ಉಳಿಸುವುದು ಎಲ್ಲರ ಕರ್ತವ್ಯವಾಗಿದ್ದು  ವನ್ಯ ಜೀವಿಗಳ ಪೀಳಿಗೆಯು ಉಳಿಯಬೇಕು ಈನಿಟ್ಟಿನಲ್ಲಿ ಅರಣ್ಯ ಸಂಪತ್ತಿನ ಮೌಲ್ಯ ಹಾಗು ಕಾಡು ಪ್ರಾಣಿಗಳ ಬದಕನ್ನ  ಚಿಕ್ಕವಯಸ್ಸಿನಿಂದಲೆ ತಿಳಿದು ಕೊಳ್ಳಬೇಕೆಂದರು. ಪ್ರವಾಸಕ್ಕೆ ತೆರಳುತ್ತಿರುವ ಈ ಮಕ್ಕಳಿಗೆ ಬನ್ನೇರುಘಟ್ಟದಲ್ಲಿ ಅರಣ್ಯ ನಿರ್ವಹಣೆ ಬಗ್ಗೆ ಮಾಹಿತಿ ಮತ್ತು ಕಾಡು ಪ್ರಾಣಿಗಳನ್ನು ವೀಕ್ಷಿಸಲು ಸಫಾರಿಯಾನವನ್ನು ವ್ಯವಸ್ಥೆ ಮಾಡಲಾಗಿದೆ.
ಪಶುವೈದ್ಯರಾದ ದಿವಾಕರ್ ಹಸಿರು ನಿಶಾನೆ  ನೀಡಿದರು. ಅರಣ್ಯ ಇಲಾಖೆಯ ಶೇಖರ್   ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಪ್ರಿನ್ಸಿಪಾಲ್ ಜಿ.ಲೋಕೇಶ್ ˌಶಾಲಾ ಸಿಬ್ಬಂದಿ ತಾಲ್ಲೂಕು ಅರಣ್ಯ ಇಲಾಖೆಯ ಸಿಬ್ಬಂದಿ 8ನೇತರಗತಿಯ 50 ವಿದ್ಯಾರ್ಥಿಗಳೊಂದಿಗೆ ಬನ್ನೇರುಘಟ್ಟಕ್ಕೆ ತೆರಳಿದರು.