ಟೆಹ್ರಾನ್: ಪೂರ್ವ ಇರಾನ್ನ ಬಿರ್ಜಾಂಡ್ ವಿಶೇಷ ಆರ್ಥಿಕ ವಲಯದಲ್ಲಿರುವ ತೈಲ ಸಂಸ್ಕರಣಾ ಘಟಕದಲ್ಲಿ ಭಾರಿ ಸ್ಫೋಟ ಸಂಭವಿಸಿದೆ.
ಈಗ ಸಂಸ್ಕರಣಾಗಾರದ ಎಲ್ಲಾ 18 ಶೇಖರಣಾ ಘಟಕಗಳು ಬೆಂಕಿಗೆ ಆಹುತಿಯಾಗಿವೆ. ನಿರಂತರ ಸ್ಫೋಟದಿಂದಾಗಿ ರಕ್ಷಣಾ ತಂಡಗಳು ತಾತ್ಕಾಲಿಕವಾಗಿ ಸ್ಥಳದಿಂದ ದೂರ ಸರಿದಿವೆ.
ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಬಿರ್ಜಾಂಡ್ ಆರ್ಥಿಕ ವಿಶೇಷ ವಲಯದಲ್ಲಿರುವ ರಿಫೈನರಿಯ ಎಲ್ಲಾ 18 ಘಟಕಗಳಿಗೆ ಬೆಂಕಿ ವ್ಯಾಪಿಸಿದೆ ಮತ್ತು ಅಗ್ನಿಯ ಕೆನ್ನಾಲಿಗೆ ಹೆಚ್ಚಾಗಿದೆ ಎಂದು ಗವರ್ನರ್ ಅಲಿ ಫಜೆಲಿ ಹೇಳಿದ್ದಾರೆ.
ಈಗಾಗಲೇ ಮೂರು ಶೇಖರಣಾ ಘಟಕಗಳಲ್ಲಿ ಸ್ಫೋಟ ಸಂಭವಿಸಿದ್ದು, ಉಳಿದ ಎಲ್ಲಾ ಶೇಖರಣಾ ಘಟಕಗಳಿಗೆ ಬೆಂಕಿ ವ್ಯಾಪಿಸಿದೆ. ಇರಾನ್ನ ವಿದೇಶಾಂಗ ಸಚಿವ ಅಹ್ಮದ್ ವಹಿದಿ ಮಾತನಾಡಿ, ಅವರು ದಕ್ಷಿಣ ಖೊರಾಸಾನ್ ಪ್ರಾಂತ್ಯದ ಗವರ್ನರ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿ ಸ್ಫೋಟ ಗೊಂಡಿರುವ ಸಂಸ್ಕರಣಾ ಘಟಕದ ಪರಿಸ್ಥಿತಿಯ ಬಗ್ಗೆ ವರದಿ ಕೇಳಿದರು.
ಅಕ್ಟೋಬರ್ನಲ್ಲಿಯೇ ಟೆಹ್ರಾನ್ನ ಹೊರವಲಯದಲ್ಲಿರುವ ಪರಂಡ್ ವಿದ್ಯುತ್ ಸ್ಥಾವರದಲ್ಲಿ ಸ್ಫೋಟ ಸಂಭವಿಸಿತ್ತು. ಇದರಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು. ಸ್ಫೋಟಕ್ಕೆ ನೌಕರರ ನಿರ್ಲಕ್ಷ್ಯವೇ ಕಾರಣ ಎಂದು ಪ್ರದೇಶದ ಗವರ್ನರ್ ಆರೋಪಿಸಿದ್ದರು.