ಮನಾಲಿ: ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ಅಟಲ್ ಸುರಂಗ ಮಾರ್ಗದಲ್ಲಿ ಕಳೆದ 72 ಗಂಟೆ ಗಳಲ್ಲಿ ಮೂರು ಅಪಘಾತಗಳು ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಅಪಘಾತಗಳೆಲ್ಲವೂ ನಿರ್ಲಕ್ಷ್ಯ ಮತ್ತು ವೇಗದ ಪ್ರಯಾಣದಿಂದಲೇ ಸಂಭವಿಸಿದ್ದು, ಸುರಂಗ ಮಾರ್ಗವೂ ತೆರೆದಾಗಿನಿಂದ ಪ್ರವಾಸಿ ಗರ ಅಸಭ್ಯ ವರ್ತನೆ ಗಮನಕ್ಕೆ ಬಂದಿದೆ ಎಂದು ಸಂಬಂಧ ಪಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕುದುರೆಯ ಲಾಳಾಕಾರದಲ್ಲಿ ನಿರ್ಮಿಸಲಾಗಿರುವ ಅದ್ಭುತ ಸುರಂಗವೂ ಹೊಸ ಪ್ರವಾಸಿ ತಾಣವಾಗಿ ಮಾರ್ಪಾಡಾಗಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ.
ಅಪಘಾತಗಳು ಗಡಿ ರಸ್ತೆಗಳ ಸಂಸ್ಥೆ (ಬಿಆರ್ಒ) ಮತ್ತು ಜಿಲ್ಲಾಡಳಿತದ ಕಳವಳಕ್ಕೆ ಕಾರಣ ವಾಗಿದೆ. ನೂರಾರು ಪ್ರವಾಸಿಗರು ಮತ್ತು ಮೋಟರಿಸ್ಟ್ಗಳು ಅತಿವೇಗದಲ್ಲಿ ಚಲಿಸುವುದಲ್ಲದೇ ಹೊಸ ಸುರಂಗ ಮಾರ್ಗದಲ್ಲಿ ರೇಸಿಂಗ್ ಮಾಡುತ್ತಿರುವುದು ಅಧಿಕಾರಿ ಗಳಿಗೆ ಹೊಸ ತಲೆ ನೋವಾಗಿದೆ. ಹಿಮಾಚಲ ಪ್ರದೇಶದ ರೋಹ್ಟಾಂಗ್ನಲ್ಲಿ ನಿರ್ಮಿತವಾಗಿರುವ ವಿಶ್ವದಲ್ಲೇ ಅತಿ ಉದ್ದದ ಅಟಲ್ ಸುರಂಗವೂ ಮನಾಲಿ ಮತ್ತು ಲೇಹ್ ನಡುವೆ 46 ಕಿ.ಮೀ ಅಂತರವನ್ನು ತಗ್ಗಿಸ ಲಿದೆ. ಅಲ್ಲದೆ, ಪ್ರವಾಸಿಗರು ಸವಾರಿಯ ನಡುವೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಮುಲಕ ಸಂಚಾರಿ ನಿಯಮಗಳನ್ನು ಸಂಪೂರ್ಣ ಗಾಳಿಗೆ ತೂರುತ್ತಿದ್ದಾರೆಂದು ಬಿಆರ್ಒ ಚೀಫ್ ಇಂಜಿನಿಯರ್ ಬ್ರಿಗೇಡಿಯರ್ ಕೆ.ಪಿ. ಪುರುಷೋತ್ತಮನ್ ಅಸಮಾಧಾನ ಹೊರಹಾಕಿದ್ದಾರೆ.
ಅಟಲ್ ಸುರಂಗವನ್ನು ಪ್ರಧಾನಿ ಮೋದಿ ಅವರು ಅಕ್ಟೋಬರ್ 3ರಂದು ಉದ್ಘಾಟಿಸಿದರು. ಇದೀಗ ಪೂರ್ಣಗೊಂಡು ಉದ್ಘಾಟನೆ ಗೊಂಡು ಸಂಚಾರಕ್ಕೆ ಮುಕ್ತವಾಗಿದೆ.